Monday, December 31, 2018

ಪ್ರವಾದಿ ಪತ್ನಿ ಆಯಿಷಾ ಪ್ರಬುದ್ಧ ನಾಯಕಿಯಾಗಿದ್ದರು - ಬಾಲಿಕಾ ವಧುವಾಗಿರಲಿಲ್ಲ.


ಅಬ್ದುಸ್ಸಲಾಮ್ ಪುತ್ತಿಗೆ

ಅಬೂಬಕರ್ (ರ) ರ  ಮಗಳು ಹಜ್ರತ್ ಆಯಿಷಾ ಸಿದ್ದೀಖಾ (ರ) ಮುಸ್ಲಿಂ ಸಮಾಜದಲ್ಲಿ  ಅಪಾರ ಗೌರವಕ್ಕೆ ಪಾತ್ರರಾಗಿರುವ ಓರ್ವ ಮಹಾನ್ ಮಹಿಳೆ. ಅವರು ಪ್ರವಾದಿ ಮುಹಮ್ಮದ್ (ಸ) ರ ಪತ್ನಿಯಾಗಿದ್ದರು ಮತ್ತು ಪ್ರವಾದಿಯ ಅತ್ಯಂತ ಆಪ್ತ ಸಂಗಾತಿಯಾಗಿದ್ದ ಹಜ್ರತ್ ಅಬೂ ಬಕರ್ (ರ) ರ ಪುತ್ರಿಯಾಗಿದ್ದರು. ಮುಸ್ಲಿಮರು ಅವರನ್ನು ಆದರಪೂರ್ವಕ  'ಉಮ್ಮುಲ್ ಮೂಮಿನೀನ್' (ಧರ್ಮ ವಿಶ್ವಾಸಿಗಳ ಮಾತೆ) ಎಂದೂ 'ಸಯ್ಯಿದಾ' (ನಾಯಕಿ) ಅಥವಾ 'ಸಿದ್ದೀಖಾ[ (ಪರಮ ಸತ್ಯವಂತೆ) ಎಂದೂ ಕರೆಯುತ್ತಾರೆ. ಅವರ ಪ್ರಸ್ತಾಪ ಬಂದಾಗಲೆಲ್ಲ 'ರಜಿಯಲ್ಲಾಹು ಅನ್ಹಾ' (ಅಲ್ಲಾಹನು ಅವರನ್ನು ಮೆಚ್ಚಿಕೊಂಡನು ಅಥವಾ ಅವರು ಅಲ್ಲಾಹನ ಮೆಚ್ಚುಗೆಗೆ ಪಾತ್ರರಾದರು) ಎನ್ನುತ್ತಾರೆ. ಅವರ ಹೆಸರನ್ನು  ಬರೆಯುವಾಗಲೂ ಇದರ ಸಂಕ್ಷೇಪವಾಗಿ 'ರ' ಎಂಬಕ್ಷರವನ್ನು ಹೆಸರಿನ ಬೆನ್ನಿಗೆ ಕಂಸಗಳೊಳಗೆ ಬರೆಯುತ್ತಾರೆ. ಇದು ಮುಸ್ಲಿಮ್  ಸಮಾಜದಲ್ಲಿ ಹಿಂದಿನಿಂದಲೂ ಜಾರಿಯಲ್ಲಿರುವ ಒಂದು ಶಿಷ್ಟಾಚಾರ. ಹಾಗೆಯೇ ಇದು ಆಯಿಷಾ (ರ) ರ ಕುರಿತು ಮುಸ್ಲಿಂ ಸಮಾಜದಲ್ಲಿರುವ ಗೌರವದ ಸೂಚನೆಯಾಗಿದೆ.     

ಪ್ರವಾದಿ ಮುಹಮ್ಮದ್ (ಸ) ರನ್ನು ವಿವಾಹವಾಗುವಾಗ ಆಯಿಷಾ(ರ) ಕೇವಲ ಆರು ವರ್ಷದ ಮಗುವಾಗಿದ್ದರು ಎಂಬೊಂದು ಸುಳ್ಳು ಕಳೆದ ಕೆಲವು ದಶಕಗಳಿಂದ ವಿವಾದದ ವಸ್ತುವಾಗಿ ಚರ್ಚೆಯಲ್ಲಿದೆ. ಇದನ್ನು ಚರ್ಚೆಗೆ ತಂದವರು, ತಾವು ಪೌರ್ವಾತ್ಯ ಧರ್ಮ, ಸಂಸ್ಕೃತಿ, ಇತಿಹಾಸ, ಕಲೆ ಸಾಹಿತ್ಯ ಇತ್ಯಾದಿಗಳ ಕುರಿತಂತೆ ಅಧ್ಯಯನ ಹಾಗೂ ಸಂಶೋಧನೆ ನಡೆಸಿರುವ ತಜ್ಞರೆಂದು ತಮ್ಮನ್ನು ಪರಿಚಯಿಸಿಕೊಂಡ ಕೆಲವು ಪಾಶ್ಚಿಮಾತ್ಯ ಓರಿಯೆಂಟಲಿಸ್ಟ್ ಗಳು. 'ಬುಖಾರಿ'ಯಂತಹ ಕೆಲವು ಪ್ರಸಿದ್ಧ ಹದೀಸ್ ಗ್ರಂಥಗಳಲ್ಲಿ ಹಾಗೆ ಪ್ರಸ್ತಾಪಿಸಲಾಗಿದೆ ಎಂಬ ಒಂದೇ ಆಧಾರದಲ್ಲಿ ಅವರು, ಆರನೇ ವಯಸ್ಸಿನಲ್ಲಿ ಆಯಿಷಾ, ಪ್ರವಾದಿ ಮುಹಮ್ಮದ್ (ಸ) ರನ್ನು ಔಪಚಾರಿಕವಾಗಿ ವಿವಾಹವಾದರು ಮತ್ತು ಒಂಭತ್ತನೇ ವಯಸ್ಸಿನಲ್ಲಿ ಪ್ರವಾದಿಯ ಕುಟುಂಬವನ್ನು ಸೇರಿಕೊಂಡರು ಎಂಬ ಸುಳ್ಳನ್ನು ಧಾರಾಳ ಪ್ರಚಾರ ಮಾಡಿದರು. ಜೊತೆಗೆ ಈ ಸುಳ್ಳಿನ ಆಧಾರದಲ್ಲಿ, ಪ್ರವಾದಿ ಮುಹಮ್ಮದ್ (ಸ)  ಒಂಭತ್ತು ವರ್ಷದ ಒಬ್ಬ ಬಾಲಕಿಯನ್ನು ತಮ್ಮ ಪತ್ನಿಯಾಗಿಸಿ ಆಕೆಯ ಜೊತೆ ಸಂಸಾರ ನಡೆಸಿದರು ಎನ್ನುತ್ತಾ ಪ್ರವಾದಿವರ್ಯರ ಚಾರಿತ್ರ್ಯದ ಮೇಲೆ ಕೆಸರೆರಚಲು ಶ್ರಮಿಸಿದರು. ಕೆಲವು ಕತೆಗಾರರು ಮತ್ತು ಕಾದಂಬರಿಕಾರರು ತಮ್ಮ ಕತೆಗಳಿಗೆ ರಂಗು ಸೇರಿಸಲು ಇವರ ವಿಕೃತ ಸಂಶೋಧನೆಯನ್ನು ಅವಲಂಬಿಸಿದರು. ಆ ಮೂಲಕ ಸುಳ್ಳಿಗೆ ಮತ್ತಷ್ಟು ಪ್ರಚಾರ ಕೊಟ್ಟರು. ಕೆಸರನ್ನೇ ತಿನ್ನುತ್ತಾ ತಿನ್ನಿಸುತ್ತ ಬದುಕುವುದನ್ನು ತಮ್ಮ ಕಾಯಕವಾಗಿಸಿಕೊಂಡಿರುವ ಕೆಲವರು ಪ್ರವಾದಿಯ ವಿರುದ್ಧ ಹರಿ ಹಾಯ್ದು ತಮ್ಮ ತೀಟೆ ತೀರಿಸಿಕೊಳ್ಳಲು ಈ ಸುಳ್ಳನ್ನು ಕೈಗೆತ್ತಿಕೊಂಡು ಕೆಸರಲ್ಲಿ ಹೊರಳಾಡುವ ಮತ್ತು ಜನರನ್ನೂ ಹೊರಳಾಡಿಸುವ  ಕಸರತ್ತಿನಲ್ಲಿ ತೊಡಗಿಕೊಂಡರು. ನಿಜವಾಗಿ ಈ ವಿಷಯವನ್ನು ಚರ್ಚಿಸುವವರು ಸತ್ಯದ ಕುರಿತು  ಸ್ವಲ್ಪವಾದರೂ ಪ್ರಾಮಾಣಿಕ ಆಸಕ್ತಿ ಉಳ್ಳವರಾಗಿದ್ದರೆ ಆಯಿಷಾ (ರ) ಅವರ ವಯಸ್ಸಿನ ಕುರಿತಾದ ಪ್ರಸ್ತುತ ಮಾಹಿತಿ ತಪ್ಪು ಎಂಬುದನ್ನು ನಿಚ್ಚಳವಾಗಿ ಸಾಬೀತು ಪಡಿಸುವ ಆಧಾರಗಳ ಕಡೆಗೊಮ್ಮೆ ಗಮನ ಹರಿಸಬೇಕು. ಆ ರೀತಿ ಗಮನ ಹರಿಸಿದವರಿಗೆಲ್ಲಾ, ಪ್ರಸ್ತುತ ಮಾಹಿತಿ ತಪ್ಪು ಎಂಬುದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಮನವರಿಕೆಯಾಗಿದೆ.  ಇಲ್ಲಿ ನಾವೀಗ ಈ ಕುರಿತಾಗಿ ಲಭ್ಯವಿರುವ ನೇರ ಹಾಗೂ ಪರೋಕ್ಷವಾದ ಕೆಲವು ವಿಭಿನ್ನ ಪುರಾವೆಗಳನ್ನುಒಂದೊಂದಾಗಿ ನೋಡೋಣ:
1.  ಪ್ರವಾದಿ ಮುಹಮ್ಮದ್(ಸ) ರ ಬದುಕಿನ ಕುರಿತು ವಿವರಗಳನ್ನು ಅರಿಯಲು ಹಲವು ನಂಬಲರ್ಹ ಮೂಲಗಳಿವೆ. ಉದಾ: ೧. ಪವಿತ್ರ ಕುರ್ ಆನ್, ೨. ಹಲವಾರು ಹದೀಸ್ ಸಂಗ್ರಹ ಗ್ರಂಥಗಳು (ಅವು ಪ್ರವಾದಿವರ್ಯರ ಮಾತು ಮತ್ತು ಕೃತಿಗಳ, ಹಾಗೂ ಅವರ ಕುರಿತಾಗಿ ಅವರ ಸಮಕಾಲೀನರು ನೀಡಿದ ಹೇಳಿಕೆಗಳ ದಾಖಲೆಗಳು), ೩. ಪ್ರವಾದಿ ಜೀವನ ಚರಿತ್ರೆಗೆಂದೇ ಮೀಸಲಾಗಿರುವ  ಹಲವಾರು 'ಸೀರತ್' ಗ್ರಂಥಗಳು ಮತ್ತು ೪. 'ತಾರೀಕ್' ಅಥವಾ ಆ ಕಾಲದ ಸಾಮಾನ್ಯ ಇತಿಹಾಸವನ್ನು ದಾಖಲಿಸಿರುವ ಹಲವು ಇತಿಹಾಸ ಗ್ರಂಥಗಳು. ಈ ಪೈಕಿ ಕುರ್ ಆನ್ ನಲ್ಲಿ ಎಲ್ಲೂ ಆಯಿಷಾ (ರ) ರ ವಯಸ್ಸಿನ ಪ್ರಸ್ತಾಪವಿಲ್ಲ. ಉಳಿದಂತೆ ವಿವಿಧ ಹದೀಸ್ ಗ್ರಂಥಗಳಲ್ಲಿ, ಸೀರತ್ ಗ್ರಂಥಗಳಲ್ಲಿ ಮತ್ತು ತಾರೀಕ್ ನ ಗ್ರಂಥಗಳಲ್ಲಿ ಈ ಕುರಿತು  ನೇರ ಹಾಗೂ ಪರೋಕ್ಷವಾಗಿ ಬಹಳ ಭಿನ್ನವಾದ ಮಾಹಿತಿಗಳು ಮತ್ತು ಸೂಚನೆಗಳು ಸಿಗುತ್ತವೆ. ವಿವಾಹದ ವೇಳೆ ಆಯಿಷರ ವಯಸ್ಸು 17 ವರ್ಷಕ್ಕಿಂತ ಅಧಿಕವಿತ್ತು ಎನ್ನುವ ವರದಿಗಳೂ ಅಲ್ಲಿ ಸಿಗುತ್ತವೆ. ನಾವು ಕುರುಡಾಗಿ ದೂಷಣೆ ಮಾತ್ರ ಮಾಡುತ್ತೇವೆ, ಸತ್ಯಾನ್ವೇಷಣೆ ಮಾಡುವುದೇ ಇಲ್ಲ ಎಂದು ತೀರ್ಮಾನಿಸಿ ಕೊಂಡವರು ಅವುಗಳನ್ನೆಲ್ಲ ಕಡೆಗಣಿಸಿ ಅಥವಾ ಅಡಗಿಸಿಟ್ಟು ಆರು ಮತ್ತು ಒಂಬತ್ತು ವರ್ಷಗಳ ಪ್ರಸ್ತಾಪ ವಿರುವ ವರದಿಗಳನ್ನು ಮಾತ್ರ ಚರ್ಚೆಗೆ ತರುತ್ತಾರೆ. 
2. ಪ್ರವಾದಿ ಮುಹಮ್ಮದ್ (ಸ) ಹುಟ್ಟಿ ಬೆಳೆದ ಸಮಾಜದಲ್ಲಿ ಅನೇಕ ಮೌಢ್ಯಗಳು, ಕಂದಾಚಾರಗಳು, ಕ್ರೂರ ಸಂಪ್ರದಾಯಗಳೆಲ್ಲಾ ಇದ್ದುವು. ಆದರೆ ಐದಾರು ವರ್ಷದ ಮಕ್ಕಳನ್ನು ವಿವಾಹವಾಗುವ ಸಂಪ್ರದಾಯ ಆ ಸಮಾಜದಲ್ಲಿ ಜನಪ್ರಿಯವಾಗಿರಲಿಲ್ಲ. ಆಗಿನ ಮಕ್ಕದಲ್ಲಿ ಆಯಿಷಾ ಎಂಬೊಬ್ಬ ಹೆಣ್ಣು ಮಗು ಮಾತ್ರ ಏಕಾಂಗಿಯಾಗಿ ಇದ್ದುದಲ್ಲ. ಅಲ್ಲಿ ಬೇರೆ ಸಾವಿರಾರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಇದ್ದರು. ಅವರಲ್ಲಿ ಯಾರಿಗಾದರೂ ಆರನೇ ವಯಸ್ಸಿನಲ್ಲಿ ವಿವಾಹವಾಗಿತ್ತು ಎಂದು ಸೂಚಿಸುವ ಯಾವುದೇ ಹೇಳಿಕೆ ಹದೀಸ್ ಗ್ರಂಥಗಳಲ್ಲಾಗಲಿ ಇತಿಹಾಸದ ಗ್ರಂಥಗಳಲ್ಲಾಗಲಿ ಕಾಣ ಸಿಗುವುದಿಲ್ಲ. ಪ್ರವಾದಿ ಪುತ್ರಿ ಫಾತಿಮಾ ರ ವಿವಾಹವನ್ನೇ ಉದಾಹರಿಸುವುದಾದರೆ, ಆಕೆ ಪ್ರವಾದಿತ್ವದ ಘೋಷಣೆಯ ಐದು ವರ್ಷ ಮುಂಚೆ, ಅಂದರೆ, ಕಾಬಾದ ಪುನರ್ ನಿರ್ಮಾಣ ನಡೆದ ವರ್ಷದಲ್ಲಿ ಜನಿಸಿದ್ದರು ಮತ್ತು ಹಿಜ್ರತ್ ನ ಬಳಿಕ ಎರಡನೇ ವರ್ಷ ಅವರ ವಿವಾಹವಾಯಿತು. ಹಿಜ್ರತ್ ಅಥವಾ ವಲಸೆ ನಡೆದದ್ದು ಪ್ರವಾದಿತ್ವ ಘೋಷಣೆಯ 13  ವರ್ಷಗಳ ಬಳಿಕ. ಈ ದೃಷ್ಟಿಯಿಂದ ಫಾತಿಮಾರಿಗೆ ವಿವಾಹವಾಗುವಾಗ ಅವರಿಗೆ ಕನಿಷ್ಠ 20  ವರ್ಷ ವಯಸ್ಸಾಗಿರಬೇಕು. ಇನ್ನು ಸ್ವತಃ ಪ್ರವಾದಿವರ್ಯರ ವಿವಾಹಗಳನ್ನು ನೋಡಿದರೆ ಅಲ್ಲಿ ಬಾಲಿಕಾ ವಧುಗಳು ಅನ್ನಬಹುದಾದ ಯಾರೂ ಇಲ್ಲ. ಪ್ರವಾದಿಯ ಪ್ರಥಮ ವಿವಾಹ ನಡೆದಾಗ ಅವರಿಗೆ 25  ವರ್ಷ ವಯಸ್ಸಾಗಿತ್ತು. ಅವರ ಪ್ರಥಮ ಪತ್ನಿ ಖದೀಜಾರಿಗೆ ಆಗ 40  ವರ್ಷವಾಗಿತ್ತು. ಅವರ ಪತ್ನಿಯರಲ್ಲಿ ಹೆಚ್ಚಿನವರು ಒಂದೋ ವಿಧವೆಯರು ಅಥವಾ ವಿಚ್ಛೇದಿತೆಯರಾಗಿದ್ದರು. 
3.  ಪ್ರವಾದಿ ಮುಹಮ್ಮದ್ (ಸ)ರ ಸಮಕಾಲೀನ ವಿರೋಧಿಗಳು ಅವರ ಮೇಲೆ ಎಂತೆಂತಹದೋ ಘನಘೋರ ಆರೋಪಗಳನ್ನು ಹೊರಿಸಿದ್ದರು. ಆದರೆ ಆರು ವರ್ಷದ ಶಿಶುವನ್ನು ಮದುವೆಯಾದವರು ಅಥವಾ ಒಂಭತ್ತು ವರ್ಷದ ಮಗುವಿನ ಜೊತೆ ಸಂಸಾರ ನಡೆಸಿದವರು ಎಂಬ ಆರೋಪವನ್ನು ಅವರಲ್ಲಿನ ನೀಚಾತಿನೀಚ ಖಳನಾಯಕರು ಕೂಡಾ ಹೊರಿಸಿರಲಿಲ್ಲ. 
4. ಪ್ರವಾದಿ ಚರಿತ್ರೆಗೆ ಸಂಬಂಧಿಸಿದ ಘಟನೆಗಳ ಕಾಲ ನಿರ್ಣಯ ಮಾಡುವಾಗ ಅಥವಾ  ಆ ಕುರಿತು ಚರ್ಚಿಸುವಾಗ ಆ ಕಾಲ ಮತ್ತು ಆ ಸಮಾಜದಲ್ಲಿ   ಯಾವುದಾದರೂ ನಿರ್ದಿಷ್ಟ ಪಂಚಾಂಗವಾಗಲಿ ಕ್ಯಾಲೆಂಡರ್ ಆಗಲಿ ಚಲಾವಣೆಯಲ್ಲಿರಲಿಲ್ಲ ಎಂಬುದು ಗಮನದಲ್ಲಿರಬೇಕು. ಅಲ್ಲಿ ಸಾಮಾನ್ಯವಾಗಿ ಜನರು ನಿರ್ದಿಷ್ಟ ಕಾಲವನ್ನು ಸೂಚಿಸುವುದಕ್ಕೆ ಯಾವುದಾದರೂ ದೊಡ್ಡ ಘಟನೆ ನಡೆದ ವರ್ಷವನ್ನು ಹೆಸರಿಸಿ, ಆ ಘಟನೆ ನಡೆದು ಇಂತಿಷ್ಟು ವರ್ಷಗಳ ಬಳಿಕ ಅಥವಾ ಅದಕ್ಕಿಂತ ಇಂತಿಷ್ಟು ವರ್ಷ ಮುನ್ನ ಎಂದು ಹೇಳುತ್ತಿದ್ದರು. ಉದಾ: ಪ್ರವಾದಿ ಮುಹಮ್ಮದ್ (ಸ) ಯಾವ ವರ್ಷ ಜನಿಸಿದರೆಂಬ ಪ್ರಶ್ನೆಗೆ ಆ ಕಾಲದವರ ಉತ್ತರ - 'ಆಮುಲ್ ಫೀಲ್' ನಲ್ಲಿ ಜನಿಸಿದರು ಎಂದಿರುತ್ತಿತ್ತು. ಆಮುಲ್ ಫೀಲ್ ಅಂದರೆ ಆನೆಯ ವರ್ಷ. ಆ ವರ್ಷ ಯಮನ್ ದೇಶದ ಅಬ್ರಹಾ ಎಂಬ ದೊರೆ ತನ್ನ ಆನೆಗಳ ಸೇನೆಯೊಂದನ್ನು ತಂದು ಮಕ್ಕ ಪಟ್ಟಣದಲ್ಲಿದ್ದ ಪವಿತ್ರ ಕಾಬಾ ಆರಾಧನಾಲಯದ ಮೇಲೆ ದಾಳಿ ನಡೆಸಿದ್ದ. ಅದೊಂದು ನಿರ್ಣಾಯಕ ಘಟನೆಯಾದರೆ ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸಿದ ವರ್ಷವು ಇನ್ನೊಂದು ನಿರ್ಣಾಯಕ ಘಟನೆ. ಮುಂದೆ ಪ್ರವಾದಿ ಮುಹಮ್ಮದ್ (ಸ) ಮಕ್ಕ ದಿಂದ ಮದೀನಾ ಗೆ ಹಿಜ್ರತ್ ಅಥವಾ ವಲಸೆ ಹೋದ ಘಟನೆ ಇನ್ನೊಂದು ಮೈಲುಗಲ್ಲು.  ಹಿಜ್ರತ್ ಗೆ ಮುಂಚೆ ಜನರು ಯಾವುದಾದರೂ ಘಟನೆಯ ಕಾಲವನ್ನು ಸೂಚಿಸುವುದಕ್ಕೆ ಪ್ರವಾದಿತ್ವ ಘೋಷಣೆಯ ವರ್ಷಕ್ಕಿಂತ ಇಂತಿಷ್ಟು ವರ್ಷಗಳ ಬಳಿಕ ಅಥವಾ ಮುನ್ನ ಎಂದು ಸೂಚಿಸುತ್ತಿದ್ದರು. ಹಿಜ್ರತ್ ನ ನಂತರ ಹೆಚ್ಚಿನವರು  ಕಾಲವನ್ನು  ಸೂಚಿಸುವಾಗ ಹಿಜ್ರತ್ ನಡೆದ ವರ್ಷಕ್ಕೆ ಜೋಡಿಸಿ ಸೂಚಿಸುತ್ತಿದ್ದರು. 
5. ಮೊದಲು ನಾವು, ಈ ವಿಷಯದಲ್ಲಿ ವಿವಾದಾತೀತವಾಗಿ ಎಲ್ಲರೂ ಅಂಗೀಕರಿಸುವ ಕೆಲವು ಅಂಶಗಳನ್ನು ಪ್ರಸ್ತಾಪಿಸಿ ಆ ಬಳಿಕ ವಿವಾದವಿರುವ ವಿಷಯಗಳೆಡೆಗೆ ಬಂದರೆ ಸಮಸ್ಯೆಯ ಇತ್ಯರ್ಥ ಸುಲಭವಾದೀತು. ಆಯಿಶಾರ ಜೊತೆ ಪ್ರವಾದಿವರ್ಯರ ವಿವಾಹ ನಡೆದದ್ದು, ಪ್ರವಾದಿತ್ವ ಘೋಷಣೆಯ ನಂತರದ 10 ನೇ ವರ್ಷದ ಶವ್ವಾಲ್ ತಿಂಗಳಲ್ಲಿ ಎಂಬ ಬಗ್ಗೆ ಯಾವುದೇ ವಿವಾದವಿಲ್ಲ. ಹಾಗೆಯೇ ವಿವಾಹವಾದ ಬಳಿಕವೂ ಆಯಿಷಾ ಬಹುಕಾಲ ತಮ್ಮ ತವರು ಮನೆಯಲ್ಲೇ ಉಳಿದಿದ್ದು, ಪ್ರವಾದಿವರ್ಯರು ಮಕ್ಕಾದಿಂದ ಮದೀನಾಗೆ ವಲಸೆ ಹೋದ ಬಳಿಕದ ಎರಡನೇ ವರ್ಷ ಶವ್ವಾಲ್ ತಿಂಗಳಲ್ಲಿ ಅಂದರೆ ಔಪಚಾರಿಕ ವಿವಾಹವಾಗಿ ಐದು ವರ್ಷಗಳ ಬಳಿಕ ಅವರು ಪ್ರವಾದಿಯ ಮನೆಯನ್ನು ಸೇರಿದರು ಎಂಬ ಬಗ್ಗೆಯೂ ಯಾವುದೇ ವಿವಾದವಿಲ್ಲ. ಆದ್ದರಿಂದ ಆಯಿಷಾ ಜನಿಸಿದ ವರ್ಷ ಯಾವುದು ಎಂಬ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದರೆ ಯಾವ ಹಂತದಲ್ಲಿ ಅವರು ಯಾವ ವಯಸ್ಸಿನವರಾಗಿದ್ದರೆಂದು ಕರಾರುವಾಕ್ಕಾಗಿ ಹೇಳಲು ಸಾಧ್ಯವಾಗುತ್ತದೆ. 
6. ವಿವಾಹದ ವೇಳೆ ಆಯಿಷಾರಿಗೆ ಆರು ವರ್ಷ ವಯಸ್ಸು ಎನ್ನುವವರು, ಆಯಿಷಾ ಜನಿಸಿದ್ದು ಪ್ರವಾದಿತ್ವದ ಘೋಷಣೆಯಾದ  ನಾಲ್ಕು ಅಥವಾ ಐದು ವರ್ಷಗಳ ನಂತರ ಎಂದು ನಂಬಿರುತ್ತಾರೆ. ನಿಜವಾಗಿ, ಆಯಿಷಾ ಪ್ರವಾದಿತ್ವದ ಘೋಷಣೆಗಿಂತ ನಾಲ್ಕೈದು ವರ್ಷ ಮೊದಲು ಜನಿಸಿದ್ದರೆಂದು ಸೂಚಿಸುವ ಹಲವಾರು  ಐತಿಹಾಸಿಕ ಪುರಾವೆಗಳಿದ್ದು, ಅವುಗಳನ್ನು ಗಣನೆಗೆ ತೆಗೆದು ಕೊಂಡರೆ, ವಿವಾಹದ ವೇಳೆ ಆಯಿಷಾರಿಗೆ ಕನಿಷ್ಠ 15 ವರ್ಷ ವಯಸ್ಸಾಗಿತ್ತು ಮತ್ತು ಅವರು ಪ್ರವಾದಿಯವರ ಮನೆಸೇರುವಾಗ ಅವರಿಗೆ ಕನಿಷ್ಠ 20 ವರ್ಷ ವಯಸ್ಸಾಗಿತ್ತು  ಎಂಬ ಬಗ್ಗೆ ಯಾವುದೇ ಸಂಶಯ ಉಳಿಯುವುದಿಲ್ಲ. 
7. ಇತಿಹಾಸಕಾರ ಇಬ್ನು ಸಅದ್ ತಮ್ಮ 'ತಬಖಾತ್'  ಗ್ರಂಥದಲ್ಲಿ ನಿರೂಪಿರುವಂತೆ, ಆಯಿಷಾ (ರ) ರನ್ನು ವಿವಾಹವಾಗುವ ಅಪೇಕ್ಷೆ ಪ್ರಕಟಿಸುವ ಪ್ರವಾದಿ ಮುಹಮ್ಮದ್ (ಸ) ರ ವಿವಾಹ ಪ್ರಸ್ತಾವವು  ಆಯಿಷಾ (ರ) ರ ತಂದೆ ಅಬೂ ಬಕರ್ ಬಳಿಗೆ ತಲುಪಿದಾಗ ಇದ್ದ ಸನ್ನಿವೇಶ  ಮತ್ತು ಅವರು ಪ್ರಕಟಿಸಿದ ಪ್ರತಿಕ್ರಿಯೆ ಬಹಳ ಗಮನಾರ್ಹವಾಗಿದೆ. ಈಗಾಗಲೇ  ಜುಬೈರ್ ಬಿನ್ ಮುತ್ ಯಿಮ್ ಎಂಬ ವ್ಯಕ್ತಿಯ ಜೊತೆ ಆಯಿಷಾ ರ ವಿವಾಹ ನಿಶ್ಚಯವಾಗಿದೆ. ಆ ವಿಷಯವನ್ನು ಇತ್ಯರ್ಥ ಗೊಳಿಸಿದ ಬಳಿಕವಷ್ಟೇ ಪ್ರವಾದಿವರ್ಯರ ಪ್ರಸ್ತಾವವನ್ನು ಪರಿಗಣಿಸಲು ಸಾಧ್ಯ ಎಂಬುದು ಅಬೂ ಬಕರ್ ರ ಪ್ರತಿಕ್ರಿಯೆಯಾಗಿತ್ತು. ಇಲ್ಲಿ ಅಬೂ ಬಕರ್ ಅವರು ಪ್ರಸ್ತಾಪಿಸುತ್ತಿರುವ ಜುಬೈರ್ ಮತ್ತು ಆಯಿಶಾರ ನಡುವಣ ವಿವಾಹ ನಿಶ್ಚಿತಾರ್ಥವು ಕೇವಲ ಒಂದೆರಡು ವಾರ ಅಥವಾ ಒಂದೆರಡು ತಿಂಗಳ ಮುನ್ನ ನಡೆದ ಘಟನೆಯಾಗಿರಲಿಲ್ಲ ಎಂಬುದು ವ್ಯಕ್ತ. ನಿಜವಾಗಿ ಪ್ರವಾದಿಯ ಪ್ರಸ್ತಾವ ಹೋದಾಗ, ಅವರು ತಮ್ಮ ಪ್ರವಾದಿತ್ವವನ್ನು ಘೋಷಿಸಿ ಕನಿಷ್ಠ 10  ವರ್ಷಗಳು ಕಳೆದಿದ್ದವು. ಅವರು ಪ್ರವಾದಿತ್ವವನ್ನು ಘೋಷಿಸಿದ ವರ್ಷವೇ ಅವರ ಆಪ್ತ ಅಬೂ ಬಕರ್ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದರು. ಪ್ರವಾದಿತ್ವ ಘೋಷಣೆ ನಡೆದು ಕೆಲವು ವರ್ಷಗಳ ತನಕ ಸಮಾಜದಲ್ಲಿ ಪ್ರವಾದಿ, ಅವರ ಸಂದೇಶ ಮತ್ತು ಅವರ ಅನುಯಾಯಿಗಳ ವಿರುದ್ಧ ಪ್ರತಿರೋಧವು ಶೀತಲ ಸಮರದ ರೂಪದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಕ್ರಮೇಣ ಪ್ರವಾದಿ  ಮತ್ತವರ ಅನುಯಾಯಿಗಳ ವಿರುದ್ಧ ಪ್ರತಿರೋಧವು  ಬಹಿರಂಗ ವಿರೋಧದ, ಬಹಿಷ್ಕಾರದ  ಹಾಗೂ ಹಿಂಸೆಯ ರೂಪ ತಾಳಿತ್ತು. ಜುಬೈರ್ ಜೊತೆ ಆಯಿಷಾ ರ ವಿವಾಹ ನಿಶ್ಚಯವಾದ ದಿನಗಳು ಶೀತಲ ಸಮರದ ದಿನಗಳಾಗಿದ್ದವು. ಮುಂದೆ ಬಹಿರಂಗ ಸಂಘರ್ಷದ ಪರ್ವ ಆರಂಭವಾದಾಗ, ಜುಬೈರ್ ನ ಕುಟುಂಬದವರು ಪ್ರವಾದಿಯ ವಿರುದ್ಧದ ಪಕ್ಷದಲ್ಲಿದ್ದರು. ಆದ್ದರಿಂದ ಪ್ರವಾದಿಯ ಆಪ್ತರಾಗಿದ್ದ ಮತ್ತು ಸಂಪ್ರದಾಯ ಮುರಿದು ಮುಸ್ಲಿಮರಾಗಿದ್ದ ಅಬೂ ಬಕರ್ ರ ಪುತ್ರಿಯ ಜೊತೆ  ನಿಶ್ಚಯವಾಗಿದ್ದ ತಮ್ಮ ಹುಡುಗನ ವಿವಾಹ ನಡೆಯುವುದು ಜುಬೈರ್ ನ ಕುಟುಂಬದವರಿಗೆ ಇಷ್ಟವಿರಲಿಲ್ಲ. ಅಬೂಬಕರ್ ಕೂಡಾ ಆ ಸಂಬಂಧವನ್ನು ಮುಂದುವರಿಸುವುದರಲ್ಲಿ ಆಸಕ್ತರಾಗಿರಲಿಲ್ಲ. ಆದರೆ ಅಧಿಕೃತವಾಗಿ, ನಿಶ್ಚಿತ ವಿವಾಹವನ್ನು ಆಗಿನ್ನೂ ರದ್ದುಗೊಳಿಸಲಾಗಿರಲಿಲ್ಲ. ಈ ಸನ್ನಿವೇಶ ಏನನ್ನು ಸೂಚಿಸುತ್ತದೆ? ನಿಶ್ಚಿತ ವಿವಾಹವನ್ನು ರದ್ದುಗೊಳಿಸುವ ಔಪಚಾರಿಕತೆ ಚರ್ಚೆಗೆ ಬರುವ  ಕೆಲವು ವರ್ಷ ಮುನ್ನವಾದರೂ ವಿವಾಹ ನಿಶ್ಚಯ ವಾಗಿರಬೇಕಲ್ಲವೇ? ಆಯಿಷಾ ಆರು ವರ್ಷದವರಾಗಿದ್ದಾಗ ಪ್ರವಾದಿಯ ಜೊತೆ ಅವರ ವಿವಾಹವಾಗಿತ್ತು ಎನ್ನುವವರು, ಈ ಸನ್ನಿವೇಶದ ಬಗ್ಗೆ ಏನನ್ನುತ್ತಾರೆ? ಆಯಿಷಾ ಹುಟ್ಟುವ ಮುನ್ನವೇ ಜುಬೈರ್ ಜೊತೆ ಅವರ ವಿವಾಹ ನಿಶ್ಚಯವಾಗಿತ್ತೆಂದು ಹೇಳುವುದಿಲ್ಲ ತಾನೇ?  ನಿಜವಾಗಿ ಪ್ರವಾದಿಯ ಜೊತೆ ಆಯಿಷಾರ ವಿವಾಹ ನಡೆದಾಗ ಅವರು ಸಾಮಾನ್ಯ ವಿವಾಹದ ವಯಸ್ಸಿನವರಾಗಿದ್ದರು ಮತ್ತು ಕೇವಲ ಆರು ವರ್ಷದ ಬಾಲಕಿಯಂತೂ ಖಂಡಿತ ಆಗಿರಲಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಪುರಾವೆಯಾಗಿದೆ.    
8. ಪ್ರಖ್ಯಾತ ಇತಿಹಾಸಕಾರ ಮತ್ತು ಕುರ್ ಆನ್ ವ್ಯಾಖ್ಯಾನಕಾರ ಅಲ್ಲಾಮಾ ಇಬ್ನು ಕಸೀರ್ ಅವರ ಪ್ರಕಾರ ಆಯಿಷಾರಿಗಿಂತ 10 ವರ್ಷ ಹಿರಿಯರಾಗಿದ್ದ ಅವರ  ಅಕ್ಕ ಅಸ್ಮಾ ಬಿಂತಿ ಅಬೂಬಕರ್ ಹಿಜರಿ ಶಕ  73 ರಲ್ಲಿ ನಿಧನರಾದರು. ಆಗ ಅವರಿಗೆ ನೂರು ವರ್ಷವಯಸ್ಸಾಗಿತ್ತು.  ಈ ಪ್ರಕಾರ ಹಿಜ್ರತ್ ಅಥವಾ ವಲಸೆಯ ವೇಳೆ ಅವರಿಗೆ ಸುಮಾರು 27 ವರ್ಷ ವಯಸ್ಸಿರಬೇಕು ಮತ್ತು ಆಯಿಷಾರಿಗೆ ಕನಿಷ್ಠ  17 ವರ್ಷ ವಯಸ್ಸಿರಬೇಕು. ಔಪಚಾರಿಕ ವಿವಾಹವು ಹಿಜ್ರತ್ ಗಿಂತ ಮೂರು ವರ್ಷ ಮುನ್ನ ನಡೆದಿದ್ದರೆ ಆವೇಳೆ ಆಯಿಷಾರಿಗೆ ಕನಿಷ್ಠ 14 ವರ್ಷ ವಯಸ್ಸಾಗಿರಬೇಕು ಮತ್ತು ಐದು ವರ್ಷಗಳ ಬಳಿಕ ಅವರು ಪ್ರವಾದಿಯ ಕುಟುಂಬವನ್ನು ಸೇರುವಾಗ ಅವರಿಗೆ 19 ವರ್ಷ ವಯಸ್ಸಾಗಿರಬೇಕು. ಜಗದ್ವಿಖ್ಯಾತ ಹದೀಸ್ ಸಂಗ್ರಹ ಗ್ರಂಥ ಮಿಶ್ಕಾತ್ ಅಲ್ ಮಸಾಬೀಹ್ ನ ಕರ್ತೃ ಇಮಾಮ್ ವಲಿಯುದ್ದೀನ್ ಮುಹಮ್ಮದ್ ಇಬ್ನು ಅಬ್ದುಲ್ಲಾಹ್ ಅಲ್  ಖತೀಬ್ ಅವರು ಕೂಡಾ ಇದೇ ತರ್ಕವನ್ನು ಮಂಡಿಸಿದ್ದಾರೆ. 
9. ಪ್ರಸಿದ್ಧ ಇತಿಹಾಸಕಾರ ಇಬ್ನು ಜರೀರ್ ಅಲ್ ತಬರಿ ಅವರ ಪ್ರಕಾರ ಅಬೂ ಬಕರ್ ಅವರು ಇಸ್ಲಾಮ್ ಧರ್ಮ ಸ್ವೀಕರಿಸುವ ಮುನ್ನವೇ  ಅವರ ಮನೆಯಲ್ಲಿ ಆಯಿಷಾ ಮತ್ತು ಅಬ್ದುರಹ್ಮಾನ್ ಜನಿಸಿದ್ದರು. ಈ ಹೇಳಿಕೆಯನ್ನು ಸಮಥಿಸುವುದಕ್ಕೆ ಬೇರೆ ಮೂಲಗಳಿಂದಲೂ ಆಧಾರಗಳು ಸಿಗುತ್ತವೆ. ಹೀಗಿರುವಾಗ, ವಿವಾಹವಾಗುವಾಗ ಆಯಿಷಾರಿಗೆ ಆರು ವರ್ಷ ವಯಸ್ಸು ಎಂಬ ಒಂದು ತಪ್ಪು ಹೇಳಿಕೆಯನ್ನು ಸಮರ್ಥಿಸುವುದಕ್ಕಾಗಿ,  ಪ್ರವಾದಿತ್ವದ ಘೋಷಣೆಯಾಗಿ ಸುಮಾರು ಐದು ವರ್ಷ ಬಳಿಕ ಆಯೇಷಾ ಜನಿಸಿದರೆಂಬ ಇನ್ನೊಂದು ತಪ್ಪು ಹೇಳಿಕೆಯನ್ನು ಸೃಷ್ಟಿಸಿಕೊಂಡವರು ಪ್ರಾಮಾಣಿಕರಾಗಿದ್ದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಈ ಪುರಾವೆ ಪರ್ಯಾಪ್ತವಾಗಿದೆ. 
10. ಉಹುದ್ ಯುದ್ಧ ನಡೆದಾಗ, ಆಯಿಷಾ ಪ್ರವಾದಿಯ ಕುಟುಂಬವನ್ನು ಸೇರಿ ಸುಮಾರು ಒಂದು ವರ್ಷವಾಗಿತ್ತಷ್ಟೆ. ಆ ಯುದ್ಧದಲ್ಲಿ ಆಯಿಷಾ ಪ್ರವಾದಿವರ್ಯರ ಸೈನ್ಯದಲ್ಲಿ ಸಕ್ರಿಯ ಸಹಾಯಕಿಯ ಪಾತ್ರ ವಹಿಸಿದ್ದರು. ಅವರು ತಮ್ಮ ಕೆಲವು ಮಹಿಳಾ ಸಂಗಾತಿಗಳ ಜೊತೆ, ಬೆನ್ನ ಮೇಲೆ ನೀರಿನ ಚೀಲಗಳನ್ನು ಹೊತ್ತುಕೊಂಡು ಯುದ್ಧದಲ್ಲಿ ಗಾಯಾಳುಗಳಾದವರಿಗೆ ನೀರು ಕುಡಿಸುವ ಸೇವೆಯಲ್ಲಿ ತೊಡಗಿದ್ದರೆಂಬುದನ್ನು  ಅನೇಕ ಇತಿಹಾಸಕಾರರು ದಾಖಲಿಸಿದ್ದಾರೆ. ಆಯಿಷಾ ಪ್ರವಾದಿಯ ಮನೆ ಸೇರಿದಾಗ ಕೇವಲ  ಹದಿಹರೆಯದ ಬಾಲಕಿಯಾಗಿರಲಿಲ್ಲ ಎಂಬುದಕ್ಕೆ ಇದೊಂದು ಪರೋಕ್ಷ ಪುರಾವೆಯಾಗಿದೆ, ಏಕೆಂದರೆ ಪ್ರವಾದಿವರ್ಯರು ಕಿರಿಯ ವಯಸ್ಸಿನ ಯಾರನ್ನೂ ಯುದ್ಧ ರಂಗದ ಹತ್ತಿರ ಸುಳಿಯಲು  ಬಿಡುತ್ತಿರಲಿಲ್ಲ. ಹದಿಹರೆಯದ ಕೆಲವು ಯುವಕರು ಯುದ್ಧದ ಸಂದರ್ಭದಲ್ಲಿ ಪ್ರವಾದಿಯ ಸೇನೆಯನ್ನು ಸೇರಲು ಅಪೇಕ್ಷಿಸಿದಾಗ ಪ್ರವಾದಿವರ್ಯರು ಅವರನ್ನು ತಮ್ಮ ಸೇನೆಗೆ ಸೇರಿಸುವ ಬದಲು ಹಾಗೆಯೇ ಮರಳಿಸಿ ಬಿಟ್ಟಿದ್ದರು. ಈ ರೀತಿ ತಮ್ಮ ಕಟ್ಟುನಿಟ್ಟಿನ ಯುದ್ಧ ಸಂಹಿತೆಯನುಸಾರ ಹದಿಹರೆಯದ ತರುಣರನ್ನು ಯುದ್ಧರಂಗದಿಂದ ದೂರವಿಟ್ಟ ಪ್ರವಾದಿ, ಆಯಿಷಾರಂತಹ ಮಹಿಳೆಯನ್ನು ಯುದ್ಧರಂಗದಲ್ಲಿ ಯೋಧರ ನೆರವಿಗೆ ನಿಯೋಜಿಸಿದ್ದರೆ, ಆಗ ಆಕೆ 20  ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಲು ಸಾಧ್ಯವಿಲ್ಲ ಎಂಬ ತರ್ಕ ಸಹಜವಲ್ಲವೇ?  
ಪ್ರವಾದಿ ಮುಹಮ್ಮದ್ (ಸ) ಅವರ ಕಾಲದಲ್ಲಿ ಅಂದರೆ ಕ್ರಿ.ಶ. ಏಳನೇ ಶತಮಾನದಲ್ಲಿ  ಬಾಲ್ಯವಿವಾಹವಿತ್ತೆಂದು ಸಾಬೀತು ಪಡಿಸಲು ಹೆಣಗಾಡುತ್ತಿರುವವರು ಇಪ್ಪತ್ತೊಂದನೇ ಶತಮಾನದಲ್ಲಿ ಸ್ವತಃ ನಮ್ಮ ಭಾರತ ದೇಶದಲ್ಲಿ  ಎಂತಹ ಪರಿಸ್ಥಿತಿ  ಇದೆ  ಎಂಬುದನ್ನೊಮ್ಮೆ ನೋಡಿಕೊಳ್ಳುವುದು ಲೇಸು. 
ವಿಶ್ವ ಸಂಸ್ಥೆಯ ಅಂಗವಾಗಿರುವ UNICEF ನವರ ಇತ್ತೀಚಿನ  ವರದಿ ಪ್ರಕಾರ  ಜಗತ್ತಿನಲ್ಲಿ ಅತ್ಯಧಿಕ ಬಾಲ್ಯ ವಿವಾಹಗಳು ನಡೆಯುವ ದೇಶಗಳ  ಸಾಲಲ್ಲಿ ನಮ್ಮ ಭಾರತ  ಮುಂಚೂಣಿಯಲ್ಲಿದೆ.  ಇಲ್ಲಿ ವಿವಾಹವಾಗುವ ಹೆಣ್ಣು ಮಕ್ಕಳಲ್ಲಿ 27% ಮಂದಿ 18 ವರ್ಷ ಮುನ್ನವೇ ಹಸೆ ಮಣೆ ಹತ್ತುತ್ತಾರೆ. ಬಿಹಾರ ಮತ್ತು ರಾಜಸ್ತಾನಗಳಂತಹ ರಾಜ್ಯಗಳಲ್ಲಿ ಇಂತಹ ಬಾಲಿಕಾ ವಧುಗಳ ಸಂಖ್ಯೆ 65% ದಿಂದ  69% ದಷ್ಟಿದೆ. ಇಂತಹ ಸಮಾಜದಲ್ಲಿ ಗೌರವಾನ್ವಿತ ಧಾರ್ಮಿಕ ವ್ಯಕ್ತಿಗಳನ್ನು ಹೆಸರಿಸಿ ಅವರು ಆರು ವರ್ಷದ ಹೆಣ್ಣನ್ನು ವಿವಾಹವಾದರು ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿರುವವರ ಉದ್ದೇಶ ಒಳ್ಳೆಯದಿರಲು ಸಾಧ್ಯವೇ? 
11. ಆರು ವರ್ಷ ವಯಸ್ಸಿನಲ್ಲಿ ಆಯಿಶಾರ ವಿವಾಹವಾಯಿತು ಮತ್ತು ಒಂಭತ್ತರ  ಹರೆಯದಲ್ಲಿ ಅವರು ಪ್ರವಾದಿಯ  ಮನೆ ಸೇರಿದರು ಎಂಬ '6 / 9 ಕಥೆ' ಸತ್ಯವೆಂದು ವಾದಿಸುವವರು ಮತ್ತು ಪ್ರತಿ ಸಲವೂ ನವನೂತನ ಸಂಶೋಧನೆಯೋ ಎಂಬಂತೆ ಅದನ್ನು ಉತ್ಸಾಹದಿಂದ ಪುನರಾವರ್ತಿಸುತ್ತಿರುವವರು ಬಳಸುವ ಅತಿದೊಡ್ಡ ಅಸ್ತ್ರ - ಆ ಕಥೆ ಬುಖಾರಿಯಲ್ಲಿದೆ ಎಂಬುದು. ಇಮಾಮ್ ಬುಖಾರಿ (ರ) ಮತ್ತವರ ಹದೀಸ್ ಸಂಗ್ರಹ ಗ್ರಂಥ (ಸಹೀಹ್ ಅಲ್  ಬುಖಾರಿ)ಕ್ಕೆ ಮುಸ್ಲಿಂ ಸಮಾಜದಲ್ಲಿ ವ್ಯಾಪಕ ಗೌರವ ಮತ್ತು ಮಾನ್ಯತೆ ಇರುವುದು ನಿಜ. ಹದೀಸ್ ಸಂಗ್ರಹ ಪ್ರಕ್ರಿಯೆಯಲ್ಲಿ ಸಂಶೋಧನೆ ಮತ್ತು ನಿಷ್ಕರ್ಷೆಯ ಹೊಸ ವಿಧಾನ ಮತ್ತು ಮಾನದಂಡಗಳನ್ನು ಪರಿಚಯಿಸಿದ ಇಮಾಮ್ ಬುಖಾರಿ ನಿಜಕ್ಕೂ ಅಪಾರ ಗೌರವಕ್ಕೆ ಅರ್ಹರು.  ''ಅಸಹ್ಹುಲ್ ಕುತುಬಿ ಬಅದ ಕಿತಾಬುಲ್ಲಾಹ್" (ಅಲ್ಲಾಹನ ಗ್ರಂಥ ಅಂದರೆ ಕುರ್ ಆನ್ ನ ಬಳಿಕ ಅತ್ಯಂತ ವಿಶ್ವಾಸಾರ್ಹ ಗ್ರಂಥ) ಎಂದು ಅವರ ಗ್ರಂಥವನ್ನು ವೈಭವೀಕರಿಸಲಾಗಿದೆ. ಒಂದು ವರದಿ ಬುಖಾರಿಯವರ ಗ್ರಂಥದಲ್ಲಿದ್ದರೆ ಅದರ ವಿಶ್ವಾಸಾರ್ಹತೆಗೆ ಬೇರೆ ಪುರಾವೆ ಬೇಕಿಲ್ಲ ಎಂಬ ನಿಲುವಿನವರೂ ಸಮುದಾಯದಲ್ಲಿದ್ದಾರೆ. ಆದರೆ ಉತ್ಪ್ರೇಕ್ಷೆಗಳನ್ನು ಬದಿಗಿಟ್ಟು  ವಸ್ತುನಿಷ್ಠವಾಗಿ ನೋಡಿದರೆ, ಬುಖಾರಿಯವರ ಗ್ರಂಥ ದಿವ್ಯಗ್ರಂಥವೇನೂ ಅಲ್ಲ. ಆದ್ದರಿಂದ ಅದರಲ್ಲಿ ತಪ್ಪುಗಳಿರುವ ಸಾಧ್ಯತೆ ಇದೆ ಎಂಬುದನ್ನು  ಬುಖಾರಿಯವರ ಕಟ್ಟಾ ಅಭಿಮಾನಿಗಳೂ ನಿರಾಕರಿಸುವುದಿಲ್ಲ. ಬುಖಾರಿಯವರನ್ನು ವೈಭವೀಕರಿಸುವ ಎಷ್ಟೋ ಮಂದಿ, ಕಾನೂನು, ಕರ್ಮಶಾಸ್ತ್ರ ಇತ್ಯಾದಿ ಅನೇಕ ವಿಷಯಗಳಲ್ಲಿ ಬುಖಾರಿಯವರಿಗಿಂತ ಭಿನ್ನ ನಿಲುವನ್ನು ತಾಳಿರುತ್ತಾರೆ. ಇದಕ್ಕೆ ಕಾರಣವಿದೆ.   ಇಮಾಮ್ ಬುಖಾರಿ ಜನಿಸಿದ್ದು ಹಿಜರಿ 194 ರಲ್ಲಿ. ಅವರ ಗ್ರಂಥ ಸಹೀಹ್ ಅಲ್ ಬುಖಾರಿಯ ರಚನೆ ಪೂರ್ತಿಯಾಗಿದ್ದು ಹಿಜರಿ 232 ರಲ್ಲಿ ಅಂದರೆ ಹಿಜರಿ ಮೂರನೇ ಶತಮಾನದಲ್ಲಿ. ನಾಲ್ಕು ಕರ್ಮಶಾಸ್ತ್ರ ಪಂಥಗಳ ತೀರ್ಪುಗಳ ಪೈಕಿ ಹೆಚ್ಚಿನ ತೀರ್ಪುಗಳು ಇಮಾಮ್ ಬುಖಾರಿಯ ಗ್ರಂಥ ಪ್ರಕಟವಾಗುವ ಹಲವು ವರ್ಷಗಳ ಮುನ್ನವೇ ಸಾದರವಾಗಿದ್ದರಿಂದ ಆ ತೀರ್ಪುಗಳಿಗೆ ಕಾರಣವಾದ ಆಧಾರಗಳು ಮತ್ತು ಅದಕ್ಕಾಗಿ ಅವಲಂಬಿಸಲಾದ ಮಾಹಿತಿ ಮೂಲಗಳು ಪ್ರವಾದಿಯ ಕಾಲಕ್ಕೆ ಹೆಚ್ಚು ನಿಕಟವೆಂಬ ನೆಲೆಯಲ್ಲಿ ಹೆಚ್ಚು ಅವಲಂಬನೀಯ ಎಂದು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಮಾಹಿತಿ ಬುಖಾರಿಯವರ ಗ್ರಂಥದಲ್ಲಿದೆ ಅಥವಾ ಅದು ಮೂರು ಅಥವಾ ನಾಲ್ಕು ಇತರ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ  ಎಂಬ ಒಂದೇ ಕಾರಣಕ್ಕಾಗಿ ಅದನ್ನು ಪ್ರಶ್ನಾತೀತವಾಗಿ ಸ್ವೀಕರಿಸಬೇಕೆಂಬ ಯಾವ ನಿರ್ಬಂಧವೂ ಇಲ್ಲ.  
ಆಯಿಷಾ ರ ಜೊತೆ ಪ್ರವಾದಿ ಮುಹಮ್ಮದರು (ಸ)  ಮಾಡಿಕೊಂಡ ವಿವಾಹದಲ್ಲಿ ಹುಳುಕು ಹುಡುಕುವವರು ಮೊದಲು 6 / 9 ರ ತರ್ಕ ತಂದು, ಅದನ್ನು ಬಾಲ್ಯ ವಿವಾಹವೆಂದು ಕರೆದು ಆಯಿಶಾರ ಪರ ಅನುಕಂಪ ಮತ್ತು ಪ್ರವಾದಿಯ ವಿರುದ್ಧ ರೋಷ ಪ್ರಕಟಿಸುತ್ತಾರೆ. 6 / 9 ರ ತರ್ಕ ಐತಿಹಾಸಿಕವಾಗಿಯೂ ತಾರ್ಕಿಕವಾಗಿಯೂ ತಪ್ಪು ಎಂದು ಸ್ಪಷ್ಟವಾಗಿ ಸಾಬೀತಾದಾಗ, ಅವರಿಬ್ಬರ ಮಧ್ಯೆ ವಯಸ್ಸಿನ ವ್ಯತ್ಯಾಸ ಬಹಳಷ್ಟಿತ್ತು ಎಂಬ ಕೊನೆಯ ಅಸ್ತ್ರ ಬಳಸುತ್ತಾರೆ. ನಿಜವಾಗಿ  ಮದುವೆಯಾಗುವ ಹೆಣ್ಣು ಮತ್ತು ಗಂಡಿನ ನಡುವೆ ಇಂತಿಷ್ಟು ವರ್ಷಗಳ ಅಂತರ ಮಾತ್ರ ಇರಬೇಕು ಎಂಬ ಕಾನೂನು ಜಗತ್ತಿನ ಯಾವ ಸಮಾಜದಲ್ಲೂ ಇಂದು ಜಾರಿಯಲ್ಲಿಲ್ಲ, ಹಿಂದೆಂದೂ ಜಾರಿಯಲ್ಲಿರಲಿಲ್ಲ. ವಿವಾಹ ಎಂಬುದು ಜಗತ್ತಿನ ಎಲ್ಲ ವಿಭಿನ್ನ ಭಾಗಗಳಲ್ಲಿ, ಎಲ್ಲ ಕಾಲಗಳಲ್ಲಿ,  ತೀರಾ ವಿಭಿನ್ನಹಿನ್ನೆಲೆಯ ವ್ಯಕ್ತಿಗಳ ನಡುವೆ, ತೀರಾ ವಿಭಿನ್ನವಾದ ಸನ್ನಿವೇಶಗಳಲ್ಲಿ, ಪರಸ್ಪರ ಸಮ್ಮತಿಯೊಂದಿಗೆ  ನಡೆಯುವ ಒಡಂಬಡಿಕೆಯಾದ್ದರಿಂದ ಅವರಿಬ್ಬರು ಸಮವಯಸ್ಕ ರಾಗಿರಬೇಕು ಅಥವಾ ವಯಸ್ಸಿನಲ್ಲಿ ಅವರ ಮಧ್ಯೆ ಇಂತಿಷ್ಟು ಅಂತರ ಮಾತ್ರ ಇರಬೇಕು ಎಂದಿತ್ಯಾದಿಯಾಗಿ ಕಾನೂನುಗಳನ್ನು ನಿರ್ಮಿಸಬೇಕೆಂದು ಆಗ್ರಹಿಸುವುದು ಹುಚ್ಚುತನವೆನಿಸುತ್ತದೆ. ಆದ್ದರಿಂದಲೇ ಯಾರೂ ಎಲ್ಲೂ ಅಂತಹ ಕಾನೂನನ್ನು ಮಾಡಿಲ್ಲ. 
ತಮಗಿಂತ ಹಲವು ವರ್ಷ ಹಿರಿಯರಾಗಿದ್ದ ಪ್ರವಾದಿಯನ್ನು ವಿವಾಹವಾದ ಆಯಿಷಾ ಯಾವುದಾದರೂ ವಿಧದಲ್ಲಿ ಬಲಿ ಪಶುವಾಗಿದ್ದರೇ? ಸಂತ್ರಸ್ತರಾಗಿದ್ದರೆ? ಅವರು ದುಃಖ ದುಮ್ಮಾನದ ಬದುಕು ಸಾಗಿಸಬೇಕಾಯಿತೇ? ವಿವಾಹದಿಂದಾಗಿ ಅವರ ಬದುಕು ಹಾಳಾಯಿತೇ? ಅಪಪ್ರಚಾರಗಳಿಂದ ಪ್ರೇರಿತವಾದ ಈ ಬಗೆಯ ಪ್ರಶ್ನೆಗಳಿಗೆ ಉತ್ತರ ಪಡೆಯಲು ನಾವು ಆಯಿಶಾರ ಬದುಕನ್ನೊಮ್ಮೆ ನೋಡಿದರೆ ಸಾಕು. ಅವರದು ಅಜ್ಞಾತ ಬದುಕಲ್ಲ. ಅವರು ಯಾವುದಾದ್ರೂ ಭದ್ರ ಕೋಟೆಯಲ್ಲಿ ಅಥವಾ ಯಾವುದಾದರೂ ಅರಮನೆಯ ಮೂಲೆಯಲ್ಲಿ ಕಾವಲು ಭಟರ ರಕ್ಷಣೆಯಲ್ಲಿ ನಿಗೂಢವಾಗಿ ಬದುಕಿದ್ದವರಲ್ಲ. ಅವರು ಸಮಾಜದಲ್ಲಿ ಎಲ್ಲ ಬಗೆಯ ಜನರ ಜೊತೆ ಬೆರೆತು, ಸಕ್ರಿಯ ಬದುಕು ಸಾಗಿಸಿದವರು. ಶಿಕ್ಷಕಿ ಹಾಗೂ ಮಾರ್ಗದರ್ಶಿಯಾಗಿ ಎಲ್ಲರಿಗೆ ಲಭ್ಯವಿದ್ದವರು. ಪ್ರವಾದಿಯ ನಿಧನಾನಂತರವೂ ಸುಮಾರು ಐದು ದಶಕಗಳ ಕಾಲ ಅವರು ಬದುಕಿದ್ದರು.  ಈ ಅವಧಿಯಲ್ಲಿ ಸಾವಿರಾರು ಜನರ ಜೊತೆ ಸಾವಿರಾರು ಸಂದರ್ಭಗಳಲ್ಲಿ ಅವರು ಪ್ರವಾದಿವರ್ಯರ ಕುರಿತು ಮಾತನಾಡಿದ್ದಾರೆ. ಪ್ರವಾದಿವರ್ಯರ ಕುರಿತು ಕೇಳಲಾದ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ  ಮಧ್ಯೆ ಅವರು, ತಮ್ಮ ಕೆಲವು ಸವತಿಯರ ಜೊತೆ ನಡೆದಿದ್ದ ಸಣ್ಣ ಪುಟ್ಟ ಜಗಳಗಳನ್ನು ನೆನಪಿಸಿಕೊಂಡದ್ದುಂಟು. ತಮ್ಮ ವಿರುದ್ಧ ಘೋರ ಅಪಪ್ರಚಾರ ಮಾಡಿದವರನ್ನು ಸ್ಮರಿಸಿದ್ದುಂಟು.  ಆದರೆ ಪ್ರವಾದಿವರ್ಯರ ಬಗ್ಗೆ ಕಿಂಚಿತ್ತಾದರೂ ಅತೃಪ್ತಿಯನ್ನು ಪ್ರಕಟಿಸುವ ಒಂದೇ ಒಂದು ಮಾತನ್ನು ಕೂಡಾ ಅವರೆಂದೂ ಆಡಿದ್ದಿಲ್ಲ.  ಅವರ ಮಾತುಗಳಲ್ಲಿ ಪ್ರವಾದಿವರ್ಯರ ಕುರಿತು ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವದ ಹೊರತು ಬೇರೇನೂ ಪ್ರಕಟವಾದದ್ದಿಲ್ಲ. 
ವಿವಾಹ ಪೂರ್ವದಲ್ಲೂ ಆಯಿಶಾ ಅನಾಥೆಯಾಗಿರಲಿಲ್ಲ. ಆಕೆ ಮಕ್ಕಾದ ಒಂದು ಗೌರವಾನ್ವಿತ ಮನೆತನದ, ಸ್ಥಿತಿವಂತ ಕುಟುಂಬದ ಸದಸ್ಯೆಯಾಗಿದ್ದರು. ಅವರ ವಿವಾಹವು ಬಲವಂತದ ವಿವಾಹವಾಗಿರಲಿಲ್ಲ. ಅವರ ವಿವಾಹವು ಸ್ವತಃ ಅವರ ಸಮ್ಮತಿಯೊಂದಿಗೆ, ಅವರನ್ನು ಬಹಳಷ್ಟು ಪ್ರೀತಿಸುತ್ತಿದ್ದ ಅವರ ಹೆತ್ತವರ ಸಮ್ಮುಖದಲ್ಲಿ, ಅವರ  ಅಪೇಕ್ಷೆಯಂತೆ, ಅವರ ಷರತ್ತುಗಳ ಅನ್ವಯ ನಡೆದಿತ್ತು.  ಹೆಣ್ಣಿನ ಸಮ್ಮತಿ ಇಲ್ಲದೆ ನಡೆಯುವ ವಿವಾಹವು ಸಿಂಧುವಲ್ಲ ಎಂಬ ನಿಯಮವನ್ನು ಸಮಾಜದಲ್ಲಿ ಜಾರಿಗೊಳಿಸಿದ ವ್ಯಕ್ತಿಯೇ ಸಾಕ್ಷಾತ್ ಆಯಿಶಾರ ಪತಿಯಾಗಿದ್ದರು. ಆದ್ದರಿಂದ ಅಲ್ಲಿ ಆಕೆಯ ಸಮ್ಮತಿ ಪಡೆಯದೇ ಬಲವಂತದ ವಿವಾಹ ನಡೆದಿರುವ ಸಾಧ್ಯತೆ ಎಳ್ಳಷ್ಟೂ ಇಲ್ಲ.   
ಮುಸ್ಲಿಮ್  ಇತಿಹಾಸದಲ್ಲಿ ಹಜ್ರತ್ ಆಯಿಶಾರ ವ್ಯಕ್ತಿತ್ವಕ್ಕೆ ಅಸಾಮಾನ್ಯ ಮಹತ್ವವಿದೆ. ಆಕೆ ಪ್ರವಾದಿವರ್ಯರ ಜೊತೆ ಅವರ ಕುಟುಂಬದ ಸದಸ್ಯೆಯಾಗಿ ಅವರ ಬದುಕಿನ ಕೊನೆಯ ಎಂಟು ವರ್ಷಗಳ ಅವಧಿಯಲ್ಲಿ  ರಾತ್ರಿ ಹಗಲೆನ್ನದೆ ಅವರ ಜೊತೆಗಿದ್ದವರು. ಸಾಮಾನ್ಯ ದಿನಗಳಲ್ಲಿ ಮಾತ್ರವಲ್ಲ ಯುದ್ಧ ರಂಗಗಳಲ್ಲೂ ಅವರು ಪ್ರವಾದಿಯ ಜೊತೆಗಿರುತ್ತಿದ್ದರು. ಯುದ್ಧಗಳಲ್ಲಿ ಸ್ವಯಂಸೇವಕಿಯಾಗಿ  ಸೇವೆ ಸಲ್ಲಿಸಿದ್ದರು. ಪ್ರವಾದಿವರ್ಯರ ನಿಧನಾನಂತರ ಅವರು ಮುಸ್ಲಮ್ ಸಮಾಜದ ಪಾಲಿಗೆ ಶಿಕ್ಷಕಿ ಹಾಗೂ ಮಾರ್ಗದರ್ಶಿಯಾಗಿದ್ದರು. ವಿವಿಧ ವಿಷಯಗಳಲ್ಲಿ ಪ್ರವಾದಿಯವರ ನಿಲುವು ಏನಾಗಿತ್ತು ಅಥವಾ ಅವರು ಆ ಕುರಿತು ಏನು ಹೇಳಿದ್ದರು ಎಂಬುದನ್ನು ಅರಿಯಲು ಊರವರು ಮಾತ್ರವಲ್ಲ, ದೂರ ದೂರದ ದೇಶಗಳ ಜನರು ಆಯಿಶಾರ ಬಳಿಗೆ ಬರುತ್ತಿದ್ದರು. 2,200ಕ್ಕೂ ಅಧಿಕ ಹದೀಸ್ ಗಳನ್ನು ವರದಿ ಮಾಡಿರುವ ಆಯಿಷಾ ಅತ್ಯಧಿಕ ಹದೀಸ್ ಗಳನ್ನು ವರದಿ ಮಾಡಿದವರ ಸಾಲಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದಾರೆ. ಇನ್ನು ಮಹಿಳೆಯರ ಪೈಕಿ ಅತ್ಯಧಿಕ ಹದೀಸ್ ಗಳನ್ನು ವರದಿ ಮಾಡಿದವರಲ್ಲಿ ಮೊದಲ ಸ್ಥಾನ ಅವರಿಗೆ ಸಲ್ಲುತ್ತದೆ. ಇತರರು ವರದಿ ಮಾಡಿದ ಯಾವುದಾದರೂ ಹದೀಸ್ ಕುರಿತು ಸಂದೇಹಗಳಿದ್ದರೆ ಸಂದೇಹ ನಿವಾರಣೆಗಾಗಿ ಜನರು ಆಯಿಷಾ ರ ಬಳಿಗೆ ಹೋಗುತ್ತಿದ್ದರು. ಅವರು ಕುರ್ ಆನನ್ನು ಸಂಪೂರ್ಣ ಕಂಠ ಪಾಠ ಮಾಡಿದ 'ಹಾಫಿಝ' ಆಗಿದ್ದರು. ತಮ್ಮ ಅಪಾರ ವಿದ್ವತ್ತು, ಜಾಣ ಮಾತುಗಾರಿಕೆ ಹಾಗೂ ಪ್ರೌಢ ಬುದ್ಧಿಮತ್ತೆಗಾಗಿ ಖ್ಯಾತರಾಗಿದ್ದ ಆಯಿಷಾ (ರ)  ಅವರು ಪ್ರವಾದಿಯ ಪಾಲಿಗೆ ಪತ್ನಿ ಮಾತ್ರ ಅಲ್ಲ ಆಪ್ತ ಸಂಗಾತಿ ಹಾಗೂ  ಸಲಹೆಗಾರ್ತಿಯೂ ಆಗಿದ್ದರು. ಎಷ್ಟೋ ಸಂದಿಗ್ಧ ಸಂದರ್ಭಗಳಲ್ಲಿ ಪ್ರವಾದಿ (ಸ) ಆಯಿಷಾರ ಜೊತೆ ಸಮಾಲೋಚಿಸಿದ್ದುಂಟು,  ಹಾಗೆಯೇ ಆಕೆಯ ಸಲಹೆಯನ್ನು ಅನುಸರಿಸಿದ್ದುಂಟು. 
ಮುಕ್ತತೆ, ಸ್ವಾಭಿಮಾನ, ಆತ್ಮ ಗೌರವ, ನೇರ - ನಿಷ್ಠುರ ಮಾತು, ಔದಾರ್ಯ, ದಿಟ್ಟತನ ಇವೆಲ್ಲಾ ಆಯಿಷಾ ರ ವ್ಯಕ್ತಿತ್ವದ ವೈಶಿಷ್ಟ್ಯ ಗಳಾಗಿದ್ದವು.  ತಮ್ಮ ಬದುಕಿನ ಯಾವ ಹಂತದಲ್ಲೂ ಆಯಿಷಾ ಮಾನಸಿಕ ದಾಸ್ಯಕ್ಕೆ ತುತ್ತಾಗಿರಲಿಲ್ಲ. ಅವರು ಎಂದೂ ನಿಷ್ಕ್ರಿಯ ರಾಗಿರಲಿಲ್ಲ. ಪ್ರವಾದಿವರ್ಯರ ಸಂಗ ಮತ್ತು ಒಡನಾಟದಲ್ಲಿ ಅವರ ವ್ಯಕ್ತಿತ್ವ ಅರಳಿತ್ತು, ಬೆಳಗಿತ್ತು.  ನಾಲ್ಕನೆಯ ಖಲೀಫಾ ಹಜ್ರತ್ ಅಲಿ (ರ) ಅವರ ಆಡಳಿತದ ಕಾಲದಲ್ಲಿ ಅಲಿ ಅವರ ಜೊತೆ ಭಿನ್ನಮತ ಉಂಟಾದಾಗ, ಕಾಲದ ಆಡಳಿತಗಾರನ ವಿರುದ್ಧವೇ  ಸೇನೆ ಕಟ್ಟಿ ಯುದ್ಧಕ್ಕೆ ಹೊರಟವರು ಅವರು.  ಅಂತಹ ಆಯಿಷಾ ರನ್ನು ಕುರಿ ಮರಿ ಎಂಬಂತೆ  ಚಿತ್ರಿಸುವವರನ್ನು ಏನನ್ನೋಣ?

Friday, November 16, 2018

If men will have multiple wives in Paradise what is there for women?

Abdussalam Puthige

Answer : In brief, heaven is a place of abundant rewards and Hell is a place of stringent punishments. Only a glimpse of both have been introduced to us through Quran and Sunnah. The available information may be equated to a mere trailer. Heaven and Hell in fact are domains that are beyond the reach and comprehension of the human beings in this world. Very little of authentic information is available about them. As they belong to an entirely different world, even with the available amount of information human ability to fully comprehend the true nature of that world is extremely limited. Those who are aware of the limitations of human knowledge and human imagination will not insist on graphic details because, obviously, wild guess will be the only source of such details. 
The Prophet (s) said, “Allah has prepared for his - righteous slaves (such excellent things) as no eye has ever seen, nor an ear has ever heard, nor a human heart can ever think of.’” Bukhari (9, 93, 589).  
In my case, my sole concern right now is I should somehow escape hell and get admission to heaven. The details of the rewards in heaven are secondary. However, I am aware that once I am in there, I will be offered a rich variety of choice in all matters and I will choose what suits me in my view. 
My understanding of heaven is, once I am in there, I will be provided with every thing that is good to me and everything I desire or ask for.  
Here is a clue to the state of affairs in heaven :
”And in Heaven will be whatever the inner-soul desires and whatever the eye finds pleasure in, & you will stay there forever". (Qur'an - 43:71)
Regarding partners I believe that in heaven Allah will provide such perfect partners to every male and female that they will be fully happy and satisfied. Here again, being happy and fully satisfied is so crucial that the details seize to be of much relevance.  
Whether women will have multiple male partners in heaven is quite an old question.  In my veiw, if a woman desires it and if she deserves it she might get it. But even in such case I think it is against the dignity of women to proclaim that they will get multiple partners in heaven. No sensitive woman would like to see or hear such a statement being debated or such a scenario being discussed. Women have their own kind of temperament and obviously it is different from that of Men. Men might be comfortable when they are promised multiple partners in heaven. Women will however, find such a promise embarrassing. 

Tuesday, November 6, 2018

Vartha Bharati New Printing Press




ಮಾಧ್ಯಮಗಳ ಕೃಪೆಯಿಂದ ಪುರೋಹಿತರು ಹಾಗೂ ಪುಢಾರಿಗಳು ಸಮುದಾಯದ ಅಧಿಕೃತ ವಕ್ತಾರರೆನಿಸಿಕೊಂಡಿರುವುದು ಸಮುದಾಯದ ದೊಡ್ಡ ದುರಂತ.

ಅಬ್ದುಸ್ಸಲಾಂ ಪುತ್ತಿಗೆ
ಪ್ರಧಾನ ಸಂಪಾದಕರು, ವಾರ್ತಾಭಾರತಿ




ಇಸ್ಲಾಮ್ ಧರ್ಮದಲ್ಲಿ ಹಾಗೂ ಮುಸ್ಲಿಂ ಸಮುದಾಯದಲ್ಲಿ ಉದಾರವಾದದ  ಒಂದು ದೀರ್ಘ ಹಾಗೂ ಶ್ರೀಮಂತ ಪರಂಪರೆ ಇದೆ. ಆ ಪರಂಪರೆಯಯನ್ನು ಸಮಾಜದಲ್ಲಿ ಪರಿಚಯಿಸಿ, ಮುಸ್ಲಿಂ ಸಮುದಾಯದಲ್ಲಿ ವೈಚಾರಿಕ ವೈಶಾಲ್ಯದ ಸ್ಫೂರ್ತಿಯನ್ನು  ಬಲಪಡಿಸುವುದು ಇಂದಿನ ಅಗತ್ಯವಾಗಿದೆ. ತೀರಾ ಸಂಕುಚಿತ, ಉಗ್ರ ಹಾಗೂ ಉದ್ರೇಕಕಾರಿ ಭಾಷೆ ಮಾತನಾಡುವ ಕೆಲವು ಪುರೋಹಿತರು ಹಾಗೂ ಪುಢಾರಿಗಳು  ಸದ್ಯ ಮಾಧ್ಯಮಗಳ ಕೃಪೆಯಿಂದ, ಸಂಪೂರ್ಣ ಸಮುದಾಯದ  ಅಧಿಕೃತ ವಕ್ತಾರರೆನಿಸಿಕೊಂಡಿದ್ದಾರೆ. ಇದು ನಮ್ಮ ಕಾಲದ ಒಂದು ದೊಡ್ಡ ದುರಂತ. ಇಂತಹ ರೋಗಗ್ರಸ್ತ ವಿಕೃತರನ್ನೆಲ್ಲಾ ಮೂಲೆಗೆ ಸರಿಸಿ, ಪ್ರೀತಿಯ, ಶಾಂತಿಯ, ಸೇವೆಯ, ಸಹತಾಪದ ಮತ್ತು ಸಹಬಾಳ್ವೆಯ ಭಾಷೆ ಮಾತನಾಡುವವರು ಮಾತ್ರವೇ ಇಸ್ಲಾಮ್ ಧರ್ಮ ಅಥವಾ ಮುಸ್ಲಿಂ ಸಮುದಾಯದ ನೈಜ ಪ್ರತಿನಿಧಿಗಳು ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಸುವ ಸವಾಲು ನಮ್ಮ ಮುಂದಿದೆ.

ಹಾಗೆಯೇ, ಮುಸ್ಲಿಂ ಸಮುದಾಯಕ್ಕೆ, ಅದರ ನೈಜ ಆದ್ಯತೆಗಳನ್ನು ನೆನಪಿಸುವ ಕೆಲಸ ಆಗಬೇಕಾಗಿದೆ. ಮುಸ್ಲಿಂ ಜನಸಾಮಾನ್ಯರು ಭಾವನಾತ್ಮಕ ವಿವಾದಗಳ ನೆರೆಯಲ್ಲಿ ಕೊಚ್ಚಿ ಹೋಗದಂತೆ ಮತ್ತು ಶಿಕ್ಷಣ, ಸೇವೆ, ಸಾಹಿತ್ಯ, ಮಾಧ್ಯಮ, ಆಡಳಿತ, ಉದ್ದಿಮೆ  ಮುಂತಾದ  ವಿವಿಧ ರಂಗಗಳಲ್ಲಿ ಘನತೆಯ, ಗೌರವಾನ್ವಿತ ಬದುಕಿಗೆ ಬೇಕಾದ ಸಕ್ರಿಯ ಹೋರಾಟದಲ್ಲಿ ತೊಡಗುವಂತೆ ಅವರನ್ನು ಸಜ್ಜು ಗೊಳಿಸಬೇಕಾಗಿದೆ. 

Tuesday, October 23, 2018

10 CRUCIAL QUESTIONS ON ISLAM

Answered by Abdussalam Puthige

1. Why don't Muslims donate their eyes or other organs?

I am a Muslim and I have already written a will to donate my organs on my death. As such we don't find any mention of this issue in the original scriptures of Islam. The issue was never raised till late 20th century.  In every conservative society, people take their own time to accept any new phenomenon. When a new technology or a new practice comes before them they will be reluctant to accept it because they are not sure whether their religion approves it. Some times it happens in relatively modern societies too. A few centuries ago when coffee was first introduced by Arabs in Europe, there was great resistance.  When tractors were introduces for the first time in US there was resistance. Those who used horses to cultivate their farms took quite a long time to accept tractors. As the tractors are not capable of reproduction, using them may not be financially feasible in the long run. That was the logic behind the resistance.  When loud speaker was discovered not only Muslims but people belonging to different faiths were reluctant to use them in religious places. Rushing to accept everything new without considering the consequences is obviously not a very good approach. It is always safe and better to take all factors into consideration before accepting a new phenomenon. It is true that  during the early years when the debate had just begun, many Muslim scholars and Islamic institutions had a lot of reservations on the issue. Many of the had openly opposed to organ donation on various grounds. But today Most of the Muslim scholars and Islamic institutions not only accept donating organs but they encourage it too. As far as selling Human organs is concerned all Islamic scholars unanimously stand against it.  

2. Why are Muslim ghettos dirty?

Ghettos do not have any religion. Ghettos normally are dirty, irrespective of the faith of their dwellers. Nobody lives in ghettos by choice and the hygiene levels of the ghettos are not in their control. The general condition in any ghetto is of sub human level.  In most of the ghettos people have difficulty in finding safe drinking water. Hygiene is luxury for them. It is the responsibility of the Governments and the members of the civil society who are better off than the ghetto dwellers to  help them resettle in better places and gradually eliminate such ghettos.

3. Why don't Muslims do family planning?

It is not at all true that Muslims absolutely do not practice family planning. There is a verse in Qur'an :"And do not kill your children for fear of poverty. We provide for them and for you. Indeed, their killing is ever a great sin." (17:31). It is quite a straight and simple verse. Some have wrongly assumed it to be a decree against family planning. Quran has strongly opposed infanticide in general and female infanticide in particular. This in any way does not go against family planning. At best one may quote these verses to oppose abortion or feticide but not family planning. Under cirtain circumstances, regulating or delaying or even avoiding pregnancy is not only been permitted but encouraged too by many Islamic scholars. For instance (A). it is the right of the child according to the holy Quran, to be breastfed at least for two years (2:233, 31:14, 46:15). Therefore measures to avoid pregnancy is unanimously recommended during this period. (B) If the health of the mother requires delaying pregnancy, again such measures are unanimously recommended. (C) If pregnancy or delivery is likely to risk the life of the mother or is likely to cause major harm to her  health avoiding pregnancy becomes compulsory. There is no dispute among Muslim scholars on these issues. Every Muslim country has its own family planning policy, These policies may not be similar in all the countries. Policies of the Governments and responses of the masses depends on the socio economic conditions of each society. 

4. Why do Muslims hate Modi?

People  who love Modi and those who hate him are found across communities in India and elsewhere.. You read newspapers or watch news channels and you will see that most of the bitter critics of Modi are not Muslims. Whether you love a person or hate him depends upon your own perception of that person. those who see him as responsible for the 2002 genocide in Gujarat hate him irrespective of what community or party they belong to. There are people, including Muslims who give him benefit of doubt on this issue. And there are people who look at that genocide from an entirely different perspective. They associate Modi with the progress of Gujarat and adore him for the way he grew from being a politician in Gujarat to be the Prime minister of the country. Finally, Modi is a political leader and whether anybody loves or hates Modi depends on their political outlook and has nothing to do with their religious affiliations. 

5. Why do Muslims hate dogs and pigs?

Muslims do not eat Dogs and Pigs. That in any way, does not amount to hating these animals. People who do not eat chocolates for various reasons do not hate chocolates. According to the teachings of Islam, every living being (including dog and pig) deserves to be treated with mercy and compassion. Torturing animals, mutilating them in any form, overburdening them, compelling them to work beyond their capacity, using animals for target practice, keeping them tied or caged etc. (unless it is for the security of those animals) are clearly prohibited by Islam. Muslims consider feeding any hungry animal, including dog and pig as an act of piety that will be rewarded by God. Committing any act of cruelty against any living being, including dogs and pigs is considered to be a sin in Islam. Contrary to the common belief that keeping dog is prohibited in Islam.  

6. Why do Muslims kill animals to eat?

The population of the vegetarians world over is estimated to be between 10% to 21.8% (that includes those who eat eggs and do not think that makes them non vegetarian). The rest are non vegetarians. Therefore obviously killing animals for food is not an exclusively Muslim phenomenon. For Muslims, God is the creator of all things and all beings and it is His prerogative to decide what is permissible as food and what is not. The mercy based arguments against non vegetarianism does not hold much water because, the plants have life too. In fact plants being totally dumb and immobile, deserve more mercy. Almost all vegetarians consume milk. That again is not a very merciful act because, animals produce milk for the consumption of their own calf and not for human consumption. Those who talk of mercy when it comes to non vegetarian food, should logically extend their mercy to pests, germs, bacteria, fungus etc - all various forms of life. Can any human being survive if he /she decides not to kill any of them, based on the mercy factor ?
https://www.huffingtonpost.in/2016/06/14/how-india-eats_n_10434374.html

7. What is Muslim view on Karma?

The concept of 'Karma' (a cycle of repeated birth and death) has its roots in the Indian mythology. according to karma theory the pains and pleasures experience in this life of ours are the results of our deeds and actions in our past incarnation and the pains and pleasures of our next life will be in accordance with our deeds in this life. In Islam every person is born with a clean slate, absolutely free of any burden of the past. This short lived, temporal life is an opportunity to do the best of deeds with the best of intentions and the next life is eternal, wherein one will face the consequences of his / her deeds in this life, in the form of Heaven or Hell.  

8. Can one change his own destiny?

Destiny or fate is nothing but God's prior knowledge of what a person will do in this life. Obviously there is no question of changing God's knowledge.

9.Why do the Muslims oppose patriotic slogans like Bharat mata ki Jai and vande mataram?

Patriotism has little to do with slogans. There is absolutely no dispute regarding the slogan Bharat Mata ki Jai. No Muslim has ever opposed, resisted or even criticised this slogan. If at all there is any dispute, it is only regarding Vande Mataram. Significantly, Muslims do not have a unanimous or universal stand on this issue.  Not all the Muslims but some of them have reservations about it. How do the Muslims treat Vande mataram in fact depends upon their understanding of the word Vande and its definition. Muslims are strictly monotheists. They consider only Allah or the God Almighty as worthy of worship. That in fact is the foundation of their faith and belief.  Some of them believe Vande means worship and Vande mataram means, I worship my mother or motherland. Those among Muslims who go by this definition see this slogan to be going against their faith. Because, according to the Muslim faith, nobody other than God the Creator of the universe is worthy of worship. Therefore there is no question of worshiping the Motherland regardless of how much they love their motherland.  But Muslims who think the word Vande stands for salute, Vande mataram means I salute my motherland (Remember, AR Rehman's song, Maa tujhay salam ?). They see absolutely nothing wrong in uttering this slogan.  

10.Why Muslims show so much of hatred towards Israel?

This I think requires a longer answer. 
Muslims do not hate any community or any country. Their faith does not permit them to do so. Muslims have a long history of having lived peacefully along with the members of the Jewish Community in dozens of Arab countries. Muslims had absolutely no role in the holocaust. The way the state of Israel was formed is however a matter of serious dispute. One should know some history to understand this dispute. 
There was no state by name Israel on this planet before 1948. The Jews were subjected to various forms and degrees of persecution by different Christian groups down the centuries through out Europe and in the Asian part of Russia. In response, a few Jewish leaders in 1897 founded the Zionist movement and declared establishment of an independent Jewish state to be their primary objective. They chose Palestine (Falasteen) for this purpose and began their preparations. They raised funds, encouraged the Jews to purchase land in Palestine and organised immigration of Jews in thousands from various parts of the world and began settling them in Palestine. The original inhabitants of Palestine (Muslims and Christians of Arab origin) looked at this development as a conspiracy and their general resentment gradually turned into active resistance, leading to armed conflicts between the Palestinians and the Jewish settlers. Later in 1917, during the World War 1 the British snatched Palestine from the hands of the Ottomans and the British Government issued the Balfour Declaration a public statement announcing support for the establishment of a "national home for the Jewish people" in Palestine. The population of Jews in Palestine at the time was about 3%. Following the end of the WW 1 (1918) and the collapse of the Ottoman empire (1920) the Supreme council of the victorious allied forces endorsed the Balfour declaration and later (1922) issued 'The British Mandate for Palestine' aka the Palestine Mandate, for the territories of Palestine. Thus the region came under the control of Britain. Obviously there was resistance and all violent means adopted by the British to suppress it, failed. In the meantime, the process of bringing Jews from different parts of the world and settling them in Palestine continued too, relentlessly. Towards the end of the world war, on the one hand, the pace of migration of the Jews to Palestine increased manifold and on the other, the process of ethnic cleansing, in the form of forcibly driving away the natives of Palestine from the areas designated for the Jewish settlements, gathered momentum. From 3% in 1917, the Jewish population in the occupied Palestine rose to 9% in 1922  and to 27% in 1935. in November 1947 UN General Assembly adopted a resolution (Resolution No. 181) proposing partition of Palestine. Under this plan 55% of Palestinian land (which included almost all major cities and towns of Palastine), was allocated to the Jews. When this plan was rejected by the Palestinian Arabs and the other Arab States, it was unilaterally and forcibly imposed on them. This resolution also proposed withdrawal of British forces before 1st August 1948 and final formation of the state of Israel before 1st October 1948. This was followed by an armed conflict between the Jews and Arabs which ended in further displacing the Arabs apart from devastating thousands of them through large scale massacres and forced evictions from their native lands. By the end of 1949 the newly formed Israel had occupied 78% of the Palestinian land.  Out of the remaining 22%,  Palestine ie. West Bank and East Jerusalem came under control of Jordan while Gaza was placed under Egyptian control. The international community only partly accepted this occupation. It recognised the map of Israel based on the 1948 borders. 
20 years later - in 1967 - another Arab-Israeli war broke out. This time, Israel occupied the rest of historical Palestine, consisting of East Jerusalem, the West Bank and Gaza. Besides, Israel occupied the Egyptian Sinai Peninsula and the Syrian Golan Heights. With the exception of the Sinai Peninsula, all the other territories remain occupied until today. The UN Security Council members voted unanimously for a Resolution (No. 242) on November 22, 1967stating that Israel must withdraw from the territories it seized in the war. Today, even after 50 years of thatresolution Israel not only continues to violate it, but has committed many more violations by building illegal settlements in the land demarcated for the Palestinian state. In the last 50 years, the Israeli government has transferred not less than 750,000 Jewish Israelis to the West Bank and East Jerusalem who live in about 160 settlements and outposts built illegally by Israel in areas that are beyond its internationally recognised borders. Not only the Arabs and the International Community, but Several groups within the Zionist movement too oppose these expansionist policies of Israel. While some of them are in favor of confining the state of Israel to the 1948 borders, some others favor the 1967 borders.Following the Oslo accord of 1990 Israel had stopped officially building new settlements but expanded existing ones. However, in 2017, Israel once again started building new settlement in the occupied territories. People of Palestine who are refugees and feel enslaved in their own lands see this as a process of colonisation and look at Israel as a Coloniser state illegally occupying their lands. Their dream is to get back their lands and live a free life in their land. All these years they have been experiencing the worst kind of brutality in the hands of the occupying forces, only glimpses of which are witnessed by the rest of the world through some TV channels occasionally. One should look at the number of resolutions passed by UNO and and its various branches and several other reputed international bodies condemning the illegal acts of Israel and urging the Israel to abide by the International conventions which have been totally ignored by the latter.
Between 2012 and  through 2015 UN Nations General Assembly has adopted 97 resolutions criticizing various countries; 83 out of those 97 have been against Israel (86%). Between  June 2006 through June 2016 UN Human Rights Council has adopted 135 resolutions criticizing various countries; 68 out of those 135 resolutions have been against Israel (more than 50%). 
UNESCO  generally  does not criticize any other UN member state in its country-specific resolutions. ( A resolution criticising Syria in 2013 was an exception.) All its resolutions are against Israel.
For one week every year, the UN World Health Assembly, the decision-making body of the World Health Organization (WHO), meets to formulate global health policy. Resolutions are adopted to address global health issues. These resolutions generally do not condemn any specific country. There is one exception: the annual resolution entitled “Health conditions in the occupied Palestinian territory, including east Jerusalem, and in the occupied Syrian Golan.” It singles out Israel for condemnation.
The International Labour Organization (ILO), the UN agency dealing with labor issues, presented their 2014 report on “The situation of workers of the occupied Arab territories.” The report, thoroughly condemns Israel for its various misdeeds. Israel and its supporters label these reputed organisations as biased and anti Semitic for this reason. Please find more details here. ; https://www.unwatch.org/un-israel-key-statistics/
How can we expect anybody to love such a rogue state ?