ಪ್ರವಾದಿ ಮುಹಮ್ಮದ್ (ಸ) ಅವರ ವೈವಾಹಿಕ ಬದುಕನ್ನು ಕೇಂದ್ರವಾಗಿಟ್ಟು ಅವರ ನಿರ್ಮಲ ವ್ಯಕ್ತಿತ್ವದ ಮೇಲೆ ಕೆಸರು ಚೆಲ್ಲುವ ಶ್ರಮ ಬಹುಕಾಲದಿಂದ ನಡೆದು ಬಂದಿದೆ. ಹಲವರು ಪ್ರವಾದಿವರ್ಯರ ಬದುಕನ್ನು ಪರಿಚಯಿಸುವಾಗ ಸದಾ 12 ಮಂದಿ ಸುಂದರ, ಯುವ ಪತ್ನಿಯರ ಜೊತೆ ಬದುಕಿದ್ದವರು ಎಂಬಂತೆ ಚಿತ್ರಿಸುತ್ತಾರೆ. ಇದು ಅವರನ್ನು ಸುಖಲೋಲುಪ ಎಂದು ಬಿಂಬಿಸಿ ಆಮೂಲಕ ಅವರ ಸಂದೇಶವನ್ನು ಸಂಶಯದ ಸುಳಿಗೆ ಸಿಲುಕಿಸಲಿಕ್ಕೆಂದೇ ನಡೆಸಲಾಗುವ ತೀರಾ ದುರುದ್ದೇಶಪೂರಿತ, ವಿಕೃತ ಚಿತ್ರಣವಾಗಿದೆ. ಅವರ ವೈವಾಹಿಕ ಜೀವನವನ್ನು ವಸ್ತು ನಿಷ್ಠವಾಗಿ ಪರಿಶೀಲಿಸಿದರೆ, ಇದಕ್ಕೆ ತೀರಾ ತದ್ವಿರುದ್ಧವಾದ ಚಿತ್ರವೊಂದು ಮೂಡಿ ಬರುತ್ತದೆ. ನಿಜವಾಗಿ ಅವರ ಬದುಕಿನ ಯಾವ ಹಂತದಲ್ಲೂ 12 ಮಂದಿ ಪತ್ನಿಯರು ಅವರ ಜೊತೆಗಿರಲಿಲ್ಲ. ಈ ನಿಟ್ಟಿನಲ್ಲಿ, ಈ ಕೆಳಗಿನ ಮಾಹಿತಿಗಳು, ವಾಸ್ತವವನ್ನು ಅರಿಯುವುದಕ್ಕೆ ಸಹಾಯಕವಾಗಿವೆ:
💜 ಪ್ರವಾದಿ ಮುಹಮ್ಮದ್ (ಸ) ಕ್ರಿ.ಶ. 570 ರಲ್ಲಿ ಜನಿಸಿದರು ಮತ್ತು ಕ್ರಿ. ಶ. 632 ರಲ್ಲಿ ನಿಧನರಾದರು. ಅವರು ನಿಧನರಾದಾಗ ಅವರ ವಯಸ್ಸು 63 ವರ್ಷ.
💜 ತಮ್ಮ 25 ನೇ ಹರೆಯದ ತನಕ ಪ್ರವಾದಿವರ್ಯರು (ಸ) ಅವಿವಾಹಿತರಾಗಿದ್ದರು.
💜 ಅವರು ಪ್ರಥಮವಾಗಿ ವಿವಾಹವಾದದ್ದು ಖದೀಜಾ (ರ) ಎಂಬ ವಿಧವೆಯನ್ನು. ಈ ವಿವಾಹದ ವೇಳೆ ಅವರಿಗೆ 25 ವರ್ಷ ವಯಸ್ಸಾಗಿತ್ತು ಮತ್ತು ಖದೀಜಾ (ರ) 40 ರ ಹರೆಯದವರಾಗಿದ್ದರು.
💜 ಮುಂದಿನ 25 ವರ್ಷಗಳ ಕಾಲ ಪ್ರವಾದಿವರ್ಯರು (ಸ) ಬೇರಾರನ್ನೂ ವಿವಾಹವಾಗಲಿಲ್ಲ.
💜 ಅವರ ಪ್ರಥಮ ಪತ್ನಿ ಖದೀಜಾ (ರ) ಕ್ರಿ. ಶ. 619 ರಲ್ಲಿ ನಿಧನರಾದರು. ಆಗ ಪ್ರವಾದಿವರ್ಯರ(ಸ) ವಯಸ್ಸು 50 ವರ್ಷ.
💜 ಖದೀಜಾ (ರ) ರ ನಿಧನಾನಂತರ ಆಕೆ ಬಿಟ್ಟು ಹೋದ ಎಳೆಯ ಮಕ್ಕಳನ್ನು ನೋಡಿಕೊಳ್ಳಲೆಂದು ಕ್ರಿ. ಶ. 620ರಲ್ಲಿ ಅವರು ಸೌದಾ ಬಿಂತಿ ಝಮ್ಆ (ರ) ಎಂಬ ಇನ್ನೋರ್ವ ವಿಧವೆಯನ್ನು ವರಿಸಿದರು. ಆಗ ಸೌದಾ 50ರ ಹರೆಯ ಮೀರಿದವರಾಗಿದ್ದರು.
💜 ಅದೇ ವರ್ಷ ಪ್ರವಾದಿವರ್ಯರು (ಸ) ಆಯಿಶಾ (ರ) ರನ್ನು ವಿವಾಹವಾದರು. ಈ ರೀತಿ ಔಪಚಾರಿಕವಾಗಿ ಸುಮಾರು 51ರ ಹರೆಯದಲ್ಲಿ ಅವರ ಬದುಕಿನಲ್ಲಿ ಬಹುಪತ್ನಿತ್ವದ ಹಂತ ಆರಂಭವಾಯಿತು. ಆದರೆ ತಮ್ಮ ವಿವಾಹದ ಬಳಿಕವೂ ಆಯಿಶಾ (ರ) ತಮ್ಮ ಹೆತ್ತವರ ಮನೆಯಲ್ಲೇ ಉಳಿದರು. ಸುಮಾರು 4 ವರ್ಷಗಳ ಬಳಿಕವಷ್ಟೇ ಅವರು ಬಂದು ಪ್ರವಾದಿವರ್ಯರ (ಸ) ಕುಟುಂಬವನ್ನು ಸೇರಿದರು. ಈ ದೃಷ್ಟಿಯಿಂದ ಆಯಿಶಾ (ರ) ರನ್ನು ವಿವಾಹವಾದ ಬಳಿಕವೂ ವಸ್ತುಶಃ ಪ್ರವಾದಿಯ ಪಾಲಿಗೆ ಬಹುಪತ್ನಿತ್ವದ ಪರ್ವ ಆರಂಭವಾಗಿರಲಿಲ್ಲ. ಅದು ಆರಂಭವಾದದ್ದು ೪ ವರ್ಷಗಳ ಬಳಿಕ, ಆಯಿಶಾ (ರ) ಪ್ರವಾದಿಯ ಕುಟುಂಬನ್ನು ಸೇರಿದಾಗ ಮಾತ್ರ. ಆ ವರೆಗೆ ಅವರ ಮನೆಯಲ್ಲಿ ಅವರ ಪತ್ನಿಯಾಗಿದ್ದದ್ದು ಸೌದಾ (ರ) ಎಂಬೊಬ್ಬರು ಮಾತ್ರ. ಅಂದರೆ ವಸ್ತುಶ: ಅವರ ಬದುಕಿನಲ್ಲಿ ಬಹುಪತ್ನಿತ್ವದ ಪರ್ವ ಆರಂಭವಾದಾಗ ಅವರು ಕನಿಷ್ಠ 53 ವರ್ಷ ವಯಸ್ಸಿನವರಾಗಿದ್ದರು.
💜 ಹೀಗೆ, ಕ್ರಿ. ಶ. 624 ರಲ್ಲಿ ಆಯಿಶಾ (ರ) ತಮ್ಮ ತವರು ಮನೆಯಿಂದ ಬಂದು ಪ್ರವಾದಿವರ್ಯರ ಮನೆಯನ್ನು ಸೇರುವುದರೊಂದಿಗೆ ಪ್ರವಾದಿವರ್ಯರು ತಮ್ಮ ಬದುಕಿನಲ್ಲಿ ಪ್ರಥಮವಾಗಿ ವಸ್ತುಶಃ ಬಹುಪತ್ನಿತ್ವದ ಮಜಲನ್ನು ಪ್ರವೇಶಿಸಿದರು. ಅಂದರೆ 25ರ ಹರೆಯದ ತನಕ ಅವಿವಾಹಿತರಾಗಿದ್ದ ಪ್ರವಾದಿವರ್ಯರು(ಸ) ತಮ್ಮ 53ರ ಹರೆಯದ ತನಕ ಕೇವಲ ಒಬ್ಬ ಪತ್ನಿಯುಳ್ಳವರಾಗಿದ್ದರು.
💜 ಪ್ರವಾದಿವರ್ಯರ (ಸ) ಉಳಿದೆಲ್ಲ ವಿವಾಹಗಳು ನಡೆದಿರುವುದು ಮುಂದಿನ 6 ವರ್ಷಗಳಲ್ಲಿ. ಅಂದರೆ ಅವರ 53ನೇ ಹಾಗೂ 59ನೇ ಹರೆಯದ ಮಧ್ಯೆ.
💜 ಅವರು ತಮ್ಮ ಬದುಕಿನ ಕೊನೆಯ 4 ವರ್ಷಗಳಲ್ಲಿ ಅಂದರೆ ಕ್ರಿ. ಶ. 625 ಮತ್ತು 629 ರ ಮಧ್ಯೆ ಯಾರನ್ನೂ ವಿವಾಹವಾಗಲಿಲ್ಲ.
💜 ಪ್ರವಾದಿವರ್ಯರ (ಸ) ಬದುಕಿನ ಅವಧಿಯಲ್ಲೇ ಅವರ ಇಬ್ಬರು ಪತ್ನಿಯರು ನಿಧನರಾಗಿದ್ದರು.
💜 ಪ್ರವಾದಿ ಪತ್ನಿಯರ ಪೈಕಿ ಆಯಿಶಾ (ರ) ಮತ್ತು ಮಾರಿಯಾ (ರ) ಎಂಬಿಬ್ಬರು ಮಾತ್ರ ಪ್ರವಾದಿವರ್ಯರನ್ನು ವಿವಾಹವಾಗುವ ವೇಳೆ ಕನ್ಯೆಯರಾಗಿದ್ದರು.
💜 12 ಮಂದಿ ಪ್ರವಾದಿ ಪತ್ನಿಯರ ಪೈಕಿ 10 ಮಂದಿ, ಪ್ರವಾದಿಯನ್ನು ವಿವಾಹ ವಾಗುವ ಮುನ್ನ ವಿಧವೆಯರಾಗಿದ್ದರು. ಅಂದರೆ, ಆಯಿಷಾ (ರ) ಮತ್ತು ಮಾರಿಯಾ (ರ) ಇವರಿಬ್ಬರ ಹೊರತು ಅವರ ಎಲ್ಲ ಪತ್ನಿಯರು, ಅವರನ್ನು ವಿವಾಹವಾಗುವ ಮುನ್ನ ವೈಧವ್ಯದ ಅನುಭವ ಪಡೆದಿದ್ದರು ಮತ್ತು ಅವರಲ್ಲಿ ಕೆಲವರು ವೈಧವ್ಯ ಮತ್ತು ವಿಚ್ಛೇದನ ಎರಡನ್ನೂ ಅನುಭವಿಸಿದವರಾಗಿದ್ದರು.
💜 ಪ್ರವಾದಿವರ್ಯರ ಪ್ರಥಮ ಪತ್ನಿ ಖದೀಜಾ (ರ) ಪ್ರವಾದಿಯನ್ನು ವಿವಾಹವಾಗುವ ಮುನ್ನ ಎರಡು ಬಾರಿ ವಿವಾಹಿತರಾಗಿ ವಿಧವೆಯಾಗಿದ್ದರು.
💜 ಹಾಗೆಯೇ, ಝೈನಬ್ ಬಿಂತಿ ಜಹಶ್ (ರ) ಅವರು ಪ್ರವಾದಿವರ್ಯರನ್ನು ವಿವಾಹವಾಗುವ ಮುನ್ನ ಎರಡು ಬಾರಿ ವಿವಾಹವಾಗಿದ್ದರು. ಅವರ ಮೊದಲ ಪತಿ ನಿಧನರಾಗಿದ್ದರು ಮತ್ತು ಎರಡನೆಯ ಪತಿಯು ಅವರಿಗೆ ವಿಚ್ಛೇದನ ನೀಡಿದ್ದರು.
💜 ಪ್ರವಾದಿ ಪತ್ನಿಯರ ಪೈಕಿ ಕನಿಷ್ಠ ನಾಲ್ವರು ಪತ್ನಿಯರಿಗೆ, ಅವರು ಪ್ರವಾದಿವರ್ಯರನ್ನು ವಿವಾಹವಾಗುವ ಮುನ್ನ ಅವರ ಪೂರ್ವ ವಿವಾಹಗಳಿಂದ ಜನಿಸಿದ ಮಕ್ಕಳಿದ್ದರು.
💜 ಪ್ರವಾದಿವರ್ಯರನ್ನು ವಿವಾಹವಾಗುವ ವೇಳೆ ಅವರ ಪತ್ನಿಯರ ಪೈಕಿ ಕನಿಷ್ಠ 5 ಮಂದಿ 35ರ ಹರೆಯ ದಾಟಿದವರಾಗಿದ್ದರು.
💜 ಪ್ರವಾದಿ ಪತ್ನಿಯರ ಪೈಕಿ ಝೈನಬ್ ಬಿಂತಿ ಖುಝೈಮಾ (ರ) ಪ್ರವಾದಿವರ್ಯರನ್ನು ವಿವಾಹವಾಗಿ ಎಂಟು ತಿಂಗಳೊಳಗೆ ಅನಾರೋಗ್ಯದಿಂದ ನಿಧನರಾಗಿದ್ದರು.
💜 ಪ್ರವಾದಿವರ್ಯರ ವಿವಾಹಗಳ ಪೈಕಿ ನಾಲ್ಕು ವಿವಾಹಗಳು, ಅಸಹಾಯಕ ಸ್ಥಿತಿಯಲ್ಲಿದ್ದ ತಮ್ಮ ಅನುಯಾಯಿಗಳಿಗೆ ಘನತೆಯ ಆಶ್ರಯ ಒದಗಿಸಬೇಕೆಂಬ ಸಂಕಲ್ಪ ದಿಂದ ಪ್ರೇರಿತವಾಗಿದ್ದವು. ಸೌದಾ ಬಿಂತಿ ಝಮ್ಆ (ರ), ಝೈನಬ್ ಬಿಂತಿ ಖುಝೈಮಾ (ರ), ಉಮ್ಮು ಸಲಾಮಾ ಬಿಂತಿ ಸುಹೈಲ್ (ರ), ಮತ್ತು ಉಮ್ಮು ಹಬೀಬಾ ಬಿಂತಿ ಅಬೂಸುಫಿಯಾನ್ (ರ) - ಈ ನಾಲ್ವರು ವಿವಿಧ ಸನ್ನಿವೇಶಗಳಲ್ಲಿ ತೀರಾ ಅಸಹಾಯಕ ಸ್ಥಿಯಲ್ಲಿದ್ದಾಗ, ಅವರಿಗೆ ಘನತೆ, ಗೌರವದೊಂದಿಗೆ ಆಶ್ರಯ ನೀಡುವ ಉದ್ದೇಶದಿಂದ ಪ್ರವಾದಿವರ್ಯರು ಅವರನ್ನು ವಿವಾಹವಾಗಿದ್ದರು.
💜 ಪ್ರವಾದಿವರ್ಯರ ವಿವಾಹಗಳ ಹಿಂದಿನ ಪ್ರೇರಣೆಗಳ ಕುರಿತು ಹಲವರಿಗಿರುವ ಕುತೂಹಲ ತಣಿಸಲು ಬಹುಶ: ಒಂದು ಉದಾಹರಣೆ ಸಾಕು. ಪ್ರವಾದಿವರ್ಯರು ಉಮ್ಮು ಸಲಾಮಾ ಬಿಂತಿ ಸುಹೈಲ್ ರಿಗೆ ವಿವಾಹ ಪ್ರಸ್ತಾವ ಕಳಿಸಿದಾಗ, ಉಮ್ಮು ಸಲಾಮಾ ಹೇಳಿದರು: ನನಗೆ ಮಕ್ಕಳಿದ್ದಾರೆ. ಮುಂದೆ ಮಕ್ಕಳಾಗದ ಸ್ಥಿತಿಯಲ್ಲಿ ನಾನಿದ್ದೇನೆ. ಅದಕ್ಕೆ ಪ್ರವಾದಿ ನೀಡಿದ ಉತ್ತರ: ನನಗೆ ನಿಮಗಿಂತಲೂ ಹೆಚ್ಚು ವಯಸ್ಸಾಗಿದೆ. ನಿಮ್ಮ ಮಕ್ಕಳ ಪಾಲನೆಯ ಜವಾಬ್ದಾರಿ ಅಲ್ಲಾಹನ ಮತ್ತು ಅವನ ದೂತನ ಮೇಲಿದೆ.
💜 ಪ್ರವಾದಿವರ್ಯರಿಗೆ ಮಕ್ಕಳು ಜನಿಸಿದ್ದು ಖದೀಜಾ(ರ) ಮತ್ತು ಮರಿಯಾ (ರ) ಎಂಬ ಇಬ್ಬರು ಪತ್ನಿಯರಿಂದ ಮಾತ್ರ.
💜 ಪ್ರವಾದಿವರ್ಯರ ಅತ್ಯಂತ ದುಷ್ಟ ವಿರೋಧಿಗಳು ಕೂಡಾ ಎಂದೂ ಅವರ ಮೇಲೆ ವ್ಯಭಿಚಾರ ಅಥವಾ ಯಾವುದೇ ಬಗೆಯ ಅನೈತಿಕ ಚಟುವಟಿಕೆಯ ಆರೋಪ ಹೊರಿಸಿರಲಿಲ್ಲ.
💜 ಪ್ರವಾದಿ ಮುಹಮ್ಮದ್ (ಸ) ತಾವು ದೇವ ದೂತರೆಂದು ಘೋಷಿಸಿದ ಕ್ಷಣವೇ ಅವರನ್ನು ದ್ವೇಷಿಸುವ ವಿರೋಧಿಗಳು ಮತ್ತು ಶತ್ರುಗಳ ಒಂದು ದೊಡ್ಡ ಪಡೆಯೇ ಹುಟ್ಟಿಕೊಂಡಿತು. ವಿವಿಧ ಹಿನ್ನೆಲೆಯ ಶತ್ರುಗಳ ದಂಡು ಅವರ ಬದುಕಿನ ಕೊನೆಯವರೆಗೂ ಅವರನ್ನು ಸುತ್ತುವರಿದಿತ್ತು. ಅವರ ಶತ್ರುಗಳು ಅವರನ್ನು ಪೀಡಿಸುವ ಮತ್ತು ಅವರ ವಿರುದ್ಧ ಜನಾಭಿಪ್ರಾಯ ರೂಪಿಸುವ ಯಾವುದೇ ಅವಕಾಶಕ್ಕಾಗಿ ಸದಾ ಕಾತರದಿಂದ ಕಾಯುತ್ತಿದ್ದರು. ಪ್ರವಾದಿವರ್ಯರ ಮೇಲೆ ಯಾವುದೇ ನೀಚ ಮಟ್ಟದ ಸುಳ್ಳಾರೋಪ ಹೊರಿಸುವುದಕ್ಕೂ ಅವರು ಹೇಸುತ್ತಿರಲಿಲ್ಲ. ಇಂತಹ ಪ್ರತಿಕೂಲ ವಾತಾವರಣದಲ್ಲೂ, ಝೈನಬ್ ಬಿಂತಿ ಜಹಶ್ (ರ) ಜೊತೆಗಿನ ವಿವಾಹದ ಹೊರತು ಪ್ರವಾದಿವರ್ಯರ ಬೇರಾವುದೇ ವಿವಾಹವು ಅವರ ಸಮಕಾಲೀನ ವಿರೋಧಿಗಳ ಆಕ್ಷೇಪಕ್ಕೆ ತುತ್ತಾಗಿರಲಿಲ್ಲ.
💜 ಝೈನಬ್ ಬಿಂತಿ ಜಹಶ್ (ರ) ಜೊತೆಗಿನ ಪ್ರವಾದಿವರ್ಯರ ವಿವಾಹವು ಸ್ವತಃ ಅವರ ಇಚ್ಛಾನುಸಾರ ನಡೆದಿರಲಿಲ್ಲ. ದತ್ತು ಸಂಬಂಧಕ್ಕೆ ರಕ್ತ ಸಂಬಂಧದ ಸ್ಥಾನ ನೀಡಬಾರದು ಎಂಬ ಹೊಸ ನಿಯಮದ ಭಾಗವಾಗಿ, ಪರಂಪರಾಗತ ಸಂಪ್ರದಾಯವೊಂದನ್ನು ಅಧಿಕೃತವಾಗಿ ಕೊನೆಗೊಳಿಸಲಿಕ್ಕಾಗಿತ್ತು,
💜 ನಿಜಕ್ಕೂ ಪ್ರವಾದಿವರ್ಯರಿಗೆ ಝೈನಬ್ ಬಿಂತಿ ಜಹಶ್ (ರ) ರನ್ನು ವಿವಾಹವಾಗುವ ಅಪೇಕ್ಷೆ ಇದ್ದಿದ್ದರೆ ಅವರು, ಆಕೆ ತಮ್ಮ ದತ್ತು ಪುತ್ರನನ್ನು ವಿವಾಹವಾಗಿ ಆತನಿಂದ ವಿಚ್ಛೇದಿತಳಾದ ಬಳಿಕ ಆಕೆಯನ್ನು ವಿವಾಹವಾಗುವ ಮತ್ತು ಆ ಮೂಲಕ ವಿರೋಧಿಗಳ ದೂಷಣೆಗಳಿಗೆ ತುತ್ತಾಗುವ ಯಾವ ಅಗತ್ಯವೂ ಇರಲಿಲ್ಲ. ಆಕೆ ಅವರ ಪಾಲಿಗೆ ಅಪರಿಚಿತಳೇನೂ ಆಗಿರಲಿಲ್ಲ. ನಿಕಟ ಬಂಧುವೇ ಆಗಿದ್ದರು. ಆಕೆ ಕನ್ಯೆಯಾಗಿದ್ದಾಗ ಅಥವಾ ಆ ಬಳಿಕ ಆಕೆ ವಿಧವೆಯಾದಾಗ ನೇರವಾಗಿಯೇ ಅವರು ಆಕೆಯನ್ನು ವಿವಾಹವಾಗಬಹುದಾಗಿತ್ತು. ಆಕೆಯನ್ನು ಹಾಗೆ ವಿವಾಹವಾಗುವುದಕ್ಕೆ ಅವರ ಮುಂದೆ ಯಾವುದೇ ಬಗೆಯ ಸಾಮಾಜಿಕ ಅಡೆತಡೆ ಇರಲಿಲ್ಲ.
💜 ಪ್ರವಾದಿವರ್ಯರು, ಒಂದು ವೇಳೆ ವಿರೋಧಿಗಳು ಆರೋಪಿಸುವಂತೆ ಸುಖಲೋಲುಪರೇ ಆಗಿದ್ದರೆ ಅವರು ತಮ್ಮ ಯವ್ವನದಲ್ಲೇ ತಮಗೆ ಬೇಕಾದಷ್ಟು ಮಂದಿಯನ್ನು ವಿವಾಹವಾಗಬಹುದಿತ್ತು. ಅವರು ಬದುಕಿದ್ದ ಸಮಾಜದಲ್ಲಿ ಅದಕ್ಕೆ ಧಾರಾಳ ಅವಕಾಶಗಳೂ ಇದ್ದವು. ಉನ್ನತಕುಲದವರು, ವರ್ತಕರು, ಸುಂದರರು, ಆರೋಗ್ಯವಂತರು, ಗೌರವಾನ್ವಿತರು .... ಹೀಗೆ ಅಂದಿನ ಪುರುಷ ಪ್ರಧಾನ ಅರಬ್ ಸಮಾಜದಲ್ಲಿ ಹಲವು ವಿವಾಹಗಳನ್ನಾಗುವುದಕ್ಕೆ ಬೇಕಾಗಿದ್ದ ಎಲ್ಲ ಅರ್ಹತೆಗಳೂ ಅವರಲ್ಲಿದ್ದವು. ಇಷ್ಟಾಗಿಯೂ ಅವರು ಆ ಆಯ್ಕೆಯನ್ನು ಬಳಸಲಿಲ್ಲವೆಂಬುದು ಅವರ ಸ್ವಭಾವ ಎಂತಹದಾಗಿತ್ತು ಎಂಬುದಕ್ಕೆ ಪುರಾವೆಯಾಗಿದೆ.
💜 ವೈಯಕ್ತಿಕವಾಗಿ ಪ್ರವಾದಿವರ್ಯರು ಹಲವರನ್ನು ವಿವಾಹವಾಗುವ ಒಲವು ಉಳ್ಳವರಾಗಿದ್ದರೆ ತಮ್ಮ ಪ್ರವಾದಿತ್ವಕ್ಕಿಂತ ಹಿಂದಿನ ಪುರುಸೊತ್ತಿನ ದಿನಗಳಲ್ಲೇ ಅವರು ಈ ತಮ್ಮ ಆಶೆಯನ್ನು ಈಡೇರಿಸಿಕೊಳ್ಳುತ್ತಿದ್ದರು. ಪ್ರವಾದಿತ್ವ ಎಂಬುದು ಎಲ್ಲರ ಪಾಲಿಗೆ ಆದರ್ಶ ಮಾನವನಾಗಿ ಬದುಕಬೇಕು, ಒಂದು ಆದರ್ಶ ಸಮಾಜವನ್ನು ಸ್ಥಾಪಿಸಬೇಕು ಮತ್ತು ಸಂಪೂರ್ಣ ಮನುಕುಲಕ್ಕೆ ಸತ್ಯಸಂದೇಶವನ್ನು ತಲುಪಿಸಬೇಕು ಎಂಬ ಅಸಾಮಾನ್ಯ ಹೊಣೆಗಾರಿಕೆಗಳ ಹೆಸರಾಗಿತ್ತು. ನಲ್ವತ್ತರ ಹರೆಯದಲ್ಲಿ ಮತ್ತು ತೀರಾ ಪ್ರತಿಕೂಲ ಸನ್ನಿವೇಶದಲ್ಲಿ ಅವರು ಪ್ರವಾದಿಯಾದಾಗಿನಿಂದ ಅವರ ಹೊಣೆಗಾರಿಕೆಗಳು ಮತ್ತು ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಲೇ ಹೋದವು. ೫೩ರ ಹರೆಯದಲ್ಲಿ ಅವರು ಮದೀನಾ ನಗರಕ್ಕೆ ವಲಸೆ ಹೋದ ಬಳಿಕವಂತೂ ಅವರ ಚಟುವಟಿಕೆಗಳು ತಾರಕದಲ್ಲಿದ್ದವು. ಸಂದೇಶಪ್ರಚಾರ ಸಂಬಂಧಿ ಪ್ರಯಾಣಗಳು, ಸಭೆಗಳು, ವ್ಯಾಜ್ಯಗಳು, ವಿಚಾರಣೆಗಳು, ಚಾರಿತ್ರ್ಯ ನಿರ್ಮಾಣ ಮತ್ತು ಸಮಾಜ ಸುಧಾರಣೆಯ ಶ್ರಮಗಳು, ಯುದ್ಧಗಳು, ಸಂಧಾನಗಳು, ಸಂಚುಗಳು, ಆಂತರಿಕ ಭಿನ್ನಮತಗಳು ಹೀಗೆ ಸಾವಿರ ಚಟುವಟಿಕೆಗಳಲ್ಲಿ ಅವರು ಮಗ್ನರಾಗಿದ್ದ ದಿನಗಳೇ ಅವರು ಅತ್ಯಧಿಕ ವಿವಾಹವಾದ ದಿನಗಳಾಗಿದ್ದವು. ಅವರ ವಿವಾಹಗಳು ಅವರ ಪ್ರವಾದಿತ್ವಕ್ಕೆ ಸಂಬಂಧಿಸಿದ ಬಾಧ್ಯತೆಗಳ ಭಾಗವಾಗಿತ್ತೇ ಹೊರತು ಸುಖಲೋಲುಪತೆಯ ಪರಿಣಾಮವಾಗಿರಲಿಲ್ಲ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ.
💜 ವ್ಯಕ್ತಿಗಳು, ಕುಟುಂಬಗಳು, ಸಮುದಾಯಗಳು, ಬುಡಕಟ್ಟುಗಳು ಮತ್ತು ದೇಶಗಳ ಜೊತೆ ಬಾಂಧವ್ಯದ ಬೆಸುಗೆ ಬೆಸೆಯುವುದು ಒಬ್ಬ ಆಡಳಿತಗಾರ ಹಾಗೂ ಜನನಾಯಕರೆಂಬ ನೆಲೆಯಲ್ಲಿ ಪ್ರವಾದಿವರ್ಯರ ಕರ್ತವ್ಯವಾಗಿತ್ತು. ವಿವಾಹವು ಆನಿಟ್ಟಿನಲ್ಲಿ ಒಂದು ಪ್ರಮುಖ ಉಪಾಧಿಯಾಗಿತ್ತು. ಪ್ರವಾದಿವರ್ಯರ ನಿಧನಾನಂತರ ಅವರ ಉತ್ತರಾಧಿಕಾರಿಗಳಾದ ಅವರ ನಾಲ್ವರು ಆಪ್ತ ಶಿಷ್ಯರು ವೈವಾಹಿಕ ಸಂಬಂಧದ ಮೂಲಕ ಪ್ರವಾದಿವರ್ಯರ ಬಂಧುಗಳಾಗಿ ಬಿಟ್ಟಿದ್ದರು. ಉದಾ : ಪ್ರಥಮ ಖಲೀಫಾ ಅಬೂಬಕರ್ (ರ) ಮತ್ತು ದ್ವಿತೀಯ ಖಲೀಫಾ ಉಮರ್ (ರ) ಇವರಿಬ್ಬರ ಪುತ್ರಿಯರನ್ನು ಪ್ರವಾದಿವರ್ಯರು ಸ್ವತಃ ವಿವಾಹವಾಗಿದ್ದರು. ಮೂರನೇಯ ಖಲೀಫಾ ಉಸ್ಮಾನ್ (ರ) ಮತ್ತು ನಾಲ್ಕನೆಯ ಖಲೀಫಾ ಅಲೀ (ರ) ಇವರಿಬ್ಬರಿಗೆ ಪ್ರವಾದಿವರ್ಯರು ತಮ್ಮ ಪುತ್ರಿಯರ ಜೊತೆ ವಿವಾಹ ಮಾಡಿಸಿದ್ದರು.
💜 ಹೊಸ ಬಾಂಧವ್ಯಗಳ ಸ್ಥಾಪನೆಗಾಗಿ ಹಾಗೂ ಇರುವ ಬಾಂಧವ್ಯಗಳನ್ನು ಬಲಪಡಿಸುವುದಕ್ಕಾಗಿ ಪ್ರವಾದಿವರ್ಯರು ವಿವಾಹವನ್ನು ಉಪಾಧಿಯಾಗಿಸಿದ್ದರು ಎಂಬುದಕ್ಕೆ ಇನ್ನೂ ಅನೇಕ ಉದಾಹರಣೆಗಳಿವೆ. ಅವರ ವಿವಾಹಗಳ ಫಲಸ್ವರೂಪವಾಗಿ ಬಲಿಷ್ಠಗೊಂಡ ಸಂಬಂಧಗಳು ಅವರ ಸಂಕಲ್ಪ ಶುದ್ಧಿಗೆ ಮತ್ತು ಅವರ ಯೋಜಿತ ಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿವೆ. ಉದಾ;
೧. ಅಬೂ ಸುಫಿಯಾನ್ ಪ್ರವಾದಿವರ್ಯರ ಪರಮ ಶತ್ರುಗಳಲ್ಲೊಬ್ಬರಾಗಿದ್ದರು. ಪ್ರವಾದಿಗೆ ಸಾಕಷ್ಟು ಹಿಂಸೆ ನೀಡಿದ್ದರು. ಅವರ ಪುತ್ರಿ ಉಮ್ಮು ಹಬೀಬ (ರ) ರನ್ನು ಪ್ರವಾದಿವರ್ಯರು ವಿವಾಹವಾದ ಬೆನ್ನಿಗೆ ಆಕೆಯ ತಂದೆಯ ಹಗೆತನವೆಲ್ಲ ಕರಗಿ ಹೋಯಿತು. ಸ್ವಂತ ಅಳಿಯನ ವಿರುದ್ಧ ಎಂತಹ ಹಗೆತನ? ಎಂಬುದು ಈ ಬೆಳವಣಿಗೆಯ ಹಿಂದಿನ ಸರಳ ತರ್ಕವಾಗಿತ್ತು.
೨. ಪ್ರವಾದಿ ಪತ್ನಿ ಜುವೈರಿಯ್ಯ (ರ), ರ ತಂದೆ ಮದೀನಾದಲ್ಲಿನ ಬನೂ ಅಲ್ ಮುಸ್ತಲಿಕ್ ಎಂಬೊಂದು ಯಹೂದಿ ಗೋತ್ರದ ಮುಖ್ಯಸ್ಥ ರಾಗಿದ್ದರು. ಅಲ್ಲಿ ಮುಸ್ಲಿಮರು ಮತ್ತು ಯಹೂದಿಗಳ ಮಧ್ಯೆ ನಡೆದ ಯುದ್ಧದಲ್ಲಿ ಮುಸ್ಲಿಮರಿಗೆ ವಿಜಯ ಪ್ರಾಪ್ತವಾಯಿತು. ನೂರರಷ್ಟು ಯಹೂದಿ ಪರಿವಾರಗಳು ಮುಸ್ಲಿಮರ ಸೇನೆಯ ಕೈಯಲ್ಲಿ ಸೆರೆಯಾಳುಗಳಾದವು. ಅಂದಿನ ನಿಯಮದಂತೆ ಪರಿಹಾರ ಧನ ಸಲ್ಲಿಸಿ ಸ್ವತಂತ್ರರಾಗಬೇಕು ಅಥವಾ ಗುಲಾಮರಾಗಬೇಕು ಎಂಬ ಆಯ್ಕೆಯನ್ನು ಕೈದಿಗಳಿಗೆ ನೀಡಲಾಯಿತು. ಗುಲಾಮರಾದವರನ್ನು ಯೋಧರ ವಶಕ್ಕೆ ನೀಡಲಾಯಿತು. ಜುವೈರಿಯ್ಯರ ಪತಿ ಯುದ್ಧದಲ್ಲಿ ಹತರಾಗಿದ್ದರು. ಅವರನ್ನು ದಾಸಿಯಾಗಿ ಒಬ್ಬ ಮುಸ್ಲಿಂ ಯೋಧನಿಗೆ ಒಪ್ಪಿಸಲಾಯಿತು. ಆಕೆ ಪ್ರವಾದಿಯ ಬಳಿಗೆ ಬಂದು ತನ್ನ ಬಳಿ ಪಾವತಿಸಲು ಪರಿಹಾರ ಧನವೇನೂ ಇಲ್ಲ, ಆದರೆ ಒಬ್ಬ ಸಾಮಾನ್ಯ ಯೋಧನ ದಾಸಿಯಾಗಿ ಬದುಕಲಿಕ್ಕೂ ತನಗೆ ಸಾಧ್ಯವಿಲ್ಲ ಆದ್ದರಿಂದ ತನ್ನ ಮೇಲೆ ಕರುಣೆ ತೋರಬೇಕು ಎಂದು ವಿನಂತಿಸಿದರು. ಪ್ರವಾದಿವರ್ಯರು ಆಕೆಯೊಡನೆ, ನೀನು ನನ್ನ ಪರಿವಾರದ ಸದಸ್ಯೆಯಾಗುವೆಯಾ ? ಎಂದು ವಿಚಾರಿಸಿದರು. ಜುವೈರಿಯಾ ಸಂತೋಷದಿಂದ ಒಪ್ಪಿಕೊಂಡರು ಮತ್ತು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಪ್ರವಾದಿವರ್ಯರ ಜೊತೆ ಆಕೆಯ ವಿವಾಹವೂ ನಡೆಯಿತು. ಇದರೊಂದಿಗೆ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿ ಬಿಟ್ಟಿತು. ಪ್ರವಾದಿಪತ್ನಿಯಾದವರು ಮುಸ್ಲಿಂ ಸಮಾಜದ ಎಲ್ಲ ಸದಸ್ಯರ ಪಾಲಿಗೆ ಮಾತೃ ಸಮಾನರಾಗುತ್ತಾರೆ. ಆಕೆಯ ಬಂಧುಗಳು ನಮ್ಮ ಬಂಧುಗಳು ಎಂಬುದನ್ನು ಮನಗಂಡ ಎಲ್ಲ ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಆಕೆಯ ಗೌರವಾರ್ಥ ತಮ್ಮ ಅಧೀನದಲ್ಲಿದ್ದ ಎಲ್ಲ ಯಹೂದಿ ಕೈದಿಗಳನ್ನು ಬಿಡುಗಡೆಗೊಳಿಸಿಬಿಟ್ಟರು. ಹೀಗೆ ಪ್ರವಾದಿವರ್ಯರ ಒಂದು ವಿವಾಹದಿಂದಾಗಿ ಬನೂ ಅಲ್ ಮುಸ್ತಲಿಕ್ ಗೋತ್ರದ ನೂರು ಯಹೂದಿ ಪರಿವಾರಗಳಿಗೆ ಸ್ವಾತಂತ್ರ್ಯ ಪ್ರಾಪ್ತವಾಯಿತು.
೩. ಸಫಿಯ್ಯಾ (ರ) ಬಿಂತಿ ಹುಯಯ್ಯ್ ಮದೀನದಲ್ಲಿನ ಬನೀ ನಝೀರ್ ಎಂಬ ಯಹೂದಿ ಗೋತ್ರದ ನಾಯಕನ ಪುತ್ರಿಯಾಗಿದ್ದರು. ಆಕೆಯನ್ನು ಪ್ರವಾದಿವರ್ಯರು ವಿವಾಹವಾದ ಬೆನ್ನಿಗೆ, ಆ ತನಕ ಮುಸ್ಲಿಮರ ವಿಷಯದಲ್ಲಿ ತೀರಾ ಪ್ರತಿಕೂಲ ನಿಲುವು ತಾಳಿದ್ದ ಅನೇಕ ಯಹೂದಿಗಳ ನಿಲುವು ಬದಲಾಗಿ ಬಿಟ್ಟಿತು. ಅವರು ದ್ವೇಷದ ಹಾದಿ ಬಿಟ್ಟು ಮುಸ್ಲಿಮರತ್ತ ಸ್ನೇಹ ಹಸ್ತ ಚಾಚತೊಡಗಿದರು.
೪. ಪ್ರವಾದಿ ಪತ್ನಿ ಮೈಮೂನ (ರ) ನಜ್ಡ್ ಪ್ರದೇಶದ ಬನೂ ಮಖ್ ಝೂಮ್ ಎಂಬ ಒಂದು ಪ್ರಬಲ ಗೋತ್ರದ ಸದಸ್ಯೆಯಾಗಿದ್ದರು. ಆಕೆಯ ಸಹೋದರಿ ಆ ಗೋತ್ರದ ನಾಯಕನ ಪತ್ನಿಯಾಗಿದ್ದರು. 70 ಮಂದಿ ಮುಸ್ಲಿಂ ಧರ್ಮ ಪ್ರಚಾರಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಆ ಗೋತ್ರದ ಮೇಲಿತ್ತು. ಅವರ ವಿರುದ್ಧ ಪ್ರತೀಕಾರಕ್ಕಾಗಿ ಹಲವು ಮುಸ್ಲಿಮರು ಕಾತರಿಸುತ್ತಿದ್ದರು. ಪ್ರವಾದಿವರ್ಯರು ಮೈಮೂನ (ರ)ರನ್ನು ವಿವಾಹವಾದೊಡನೆ ಆ ಉದ್ವಿಗ್ನತೆ ಶಮನವಾಯಿತು. ನಜ್ಡ್ ಪ್ರಾಂತ್ಯವು ತನ್ನ ಸಂಘರ್ಷದ ಧೋರಣೆಯನ್ನು ಕೈಬಿಟ್ಟು ಪ್ರವಾದಿವರ್ಯರ ನೇತೃತ್ವದ ಮದೀನಾ ಸರಕಾರಕ್ಕೆ ಶರಣಾಜಿ ಅದರ ಅಧೀನದಲ್ಲಿರಲು ಒಪ್ಪಿಕೊಂಡರು.
💜 ಪ್ರವಾದಿವರ್ಯರು ಈ ಲೋಕದ ಪಾಲಿಗೆ ಅಂತಿಮ ದೇವದೂತರಾಗಿದ್ದರು. ಜಗತ್ತಿನೆಲ್ಲೆಡೆಯ, ಎಲ್ಲ ಕಾಲಗಳ ಅವರ ಅನುಯಾಯಿಗಳ ಪಾಲಿಗೆಅವರ ಬದುಕಿನ ಕ್ಷಣಕ್ಷಣವೂ ಅಪಾರ ಮಹತ್ವದ್ದಾಗಿತ್ತು. ಪ್ರವಾದಿವರ್ಯರ ನಿಧನಾನಂತರ ಅವರ ಕುರಿತು ಮಾಹಿತಿಗಾಗಿ ಜನರು ಅವರ ಆಪ್ತ ಅನುಯಾಯಿಗಳನ್ನು ಮತ್ತು ಪ್ರವಾದಿಯ ಪತ್ನಿಯರನ್ನುಅವಲಂಬಿಸಿದ್ದರು. ಅವರ ಬದುಕಿನ ವಿಭಿನ್ನ ಸನ್ನಿವೇಶಗಳನ್ನು, ಅವರ ಮಾತುಗಳನ್ನು ಮತ್ತು ಅವರ ಕೃತ್ಯಗಳನ್ನು ಅವರ ಅನುಯಾಯಿಗಳು ನೆನಪಿಟ್ಟುಕೊಂಡಿದ್ದರು ಮತ್ತು ಆ ಮಾಹಿತಿಯನ್ನು ಜೋಪಾನವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದರು. ಮಸೀದಿಯಲ್ಲಿ, ಪೇಟೆಗಳಲ್ಲಿ, ಹಾದಿ ಬೀದಿಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಯುದ್ಧರಂಗಲ್ಲಿ ಹೀಗೆ ಮನೆಯ ಹೊರಗಿನ ಎಲ್ಲೆಡೆ ಅವರು ಏನು ಹೇಳಿದರು ಮತ್ತು ಏನು ಮಾಡಿದರು ಎಂಬುದನ್ನೆಲ್ಲಾ ದಾಖಲಿಸುವ ಕಾರ್ಯವನ್ನು ಅವರ ಅನುಯಾಯಿಗಳು ಮಾಡಿದ್ದರು. ಆದರೆ ಅವರ ಮನೆಯೊಳಗಿನ ತೀರಾ ಖಾಸಗಿ ಬದುಕನ್ನು ದಾಖಲಿಸಿ ಅದರ ವಿವರಗಳನ್ನು ಮಾನವ ಸಮಾಜಕ್ಕೆ ತಲುಪಿಸುವ ಉಪಕಾರವನ್ನು ಮಾಡಿದ್ದು ಅವರ ಮಾನ್ಯ ಪತ್ನಿಯರು. ಹದೀಸ್ ಗ್ರಂಥಗಳಲ್ಲಿ ಸಿಗುವ, ಪ್ರವಾದಿ ವರ್ಯರಿಗೆ ಸಂಬಂಧಿಸಿದ ವರದಿಗಳ ಪೈಕಿ 2,200ಕ್ಕಿಂತಲೂ ಅಧಿಕ ವರದಿಗಳು ಪ್ರವಾದಿವರ್ಯರ ಕಿರಿಯ ಪತ್ನಿ ಆಯಿಶಾ(ರ) ಒಬ್ಬರಿಂದಲೇ ಬಂದಿವೆ. ಪ್ರವಾದಿವರ್ಯರ (ಸ) ನಡೆನುಡಿಗಳ ಕುರಿತಂತೆ 300 ಕ್ಕೂ ಅಧಿಕ ವರದಿಗಳು ಪ್ರವಾದಿ ಪತ್ನಿ ಉಮ್ಮು ಸಲ್ಮಾ (ರ) ರಿಂದ ಬಂದಿವೆ. 60 ಕ್ಕೂ ಹೆಚ್ಚು ವರದಿಗಳು ಹಫ್ಸಾ (ರ) ರ ಮೂಲಕ ಬಂದಿವೆ.
💜 ಪ್ರವಾದಿವರ್ಯರ ಪತ್ನಿಯರ ಪೈಕಿ ಹೆಚ್ಚಿನವರು ತೀರಾ ವಿಭಿನ್ನ ಕುಲ ಗೋತ್ರಗಳಿಗೆ ಸೇರಿದವರು ಮತ್ತು ತೀರಾ ಭಿನ್ನ ಹಿನ್ನೆಲೆಯವರಾಗಿದ್ದರು. ಉದಾ; ಆಯಿಶಾ (ರ) ಬನೀ ತೈಮ್ ಗೋತ್ರದವರು. ಹಫ್ಸಾ (ರ) ಅದೀ ಎಂಬ ಗೋತ್ರದವರು. ಉಮ್ಮು ಹಬೀಬಾ ಉಮಯ್ಯಾ ಗೋತ್ರದವರು. ಝೈನಬ್ ಬಿಂತಿ ಖುಝೈಮಾ (ರ) ಹವಾಝಿನ್ ಗೋತ್ರದವರು. ಸಫಿಯ್ಯಾ(ರ) ಮತ್ತು ಮೈಮೂನ(ರ) ಎರಡು ವಿಭಿನ್ನ ಯಹೂದಿ ಗೋತ್ರಗಳಿಗೆ ಸೇರಿದ್ದರು.
💜 ಪ್ರವಾದಿವರ್ಯರು ತಮ್ಮೆಲ್ಲ ಪತ್ನಿಯರ ಮಧ್ಯೆ, ಮಾನವೀಯ ಇತಿಮಿತಿಗಳೊಳಗೆ ಸಾಧ್ಯವಿರುವಷ್ಟು ಗರಿಷ್ಟ ಮಟ್ಟದಲ್ಲಿ ನ್ಯಾಯ ಪಾಲಿಸಿದ್ದರು. ದೇವದೂತರಾಗಿ, ಆಡಳಿತಗಾರರಾಗಿ ಹಾಗೂ ಜನ ನಾಯಕರಾಗಿ ಸಾವಿರಾರು ಚಟುವಟಿಕೆಗಳಲ್ಲಿ ನಿರತರಾಗಿದ್ದರೂ ಈ ಮಧ್ಯೆ ತಮ್ಮ ಕುಟುಂಬಕ್ಕಾಗಿ ಹಾಗೂ ತಮ್ಮ ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಗಾಗಿ ಸಮಯ ವಿನಿಯೋಗಿಸುತ್ತಿದ್ದರು. ಕುಟುಂಬಕ್ಕಾಗಿ ಅವರು ಮೀಸಲಿಟ್ಟಿದ್ದ ಒಟ್ಟು ಸಮಯದಲ್ಲಿ ಅವರ ಪತ್ನಿಯರ ಪೈಕಿ ಪ್ರತಿಯೊಬ್ಬರಿಗೆ ಸಮಾನ ಪಾಲನ್ನು ನಿಗದಿಪಡಿಸಲಾಗಿತ್ತು. ತಮ್ಮ ಅನಾರೋಗ್ಯದ ದಿನಗಳಲ್ಲಿ ಪ್ರವಾದಿವರ್ಯರು ತಮ್ಮ ಹೆಚ್ಚು ಸಮಯವನ್ನು ಆಯಿಶಾ (ರ) ಅವರ ಜೊತೆ ಕಳೆಯಬಯಸಿದ್ದರು. ಆದರೆ ಇತರೆಲ್ಲ ಪತ್ನಿಯರಿಂದ ಅನುಮತಿ ಪಡೆದ ಬಳಿಕವಷ್ಟೇ ಅವರು ಹಾಗೆ ಮಾಡಿದರು. ಅವರ ಪತ್ನಿ ಸೌದಾ (ರ) , ತಮ್ಮ ಪಾಲಿನ ಸಮಯವನ್ನು ಉಡುಗೊರೆಯಾಗಿ ಪ್ರವಾದಿವರ್ಯರ ಇತರ ಪತ್ನಿಯರಿಗೆ ನೀಡಿದ್ದರು.
💜 ಅವರ ಪತ್ನಿಯರ ಪೈಕಿ ಪ್ರತಿಯೊಬ್ಬರಿಗೂ ಮಸ್ಜಿದುನ್ನಬವಿಯ (ಪ್ರವಾದಿಯ ಮಸೀದಿಯ) ಆವರಣದಲ್ಲೇ ಸಣ್ಣದಾದ ಆದರೆ ಪ್ರತ್ಯೇಕ ನಿವಾಸಗಳನ್ನು ಒದಗಿಸಲಾಗಿತ್ತು. ಆ ನಿವಾಸಗಳು ಪುಟ್ಟ ಗುಡಿಸಲುಗಳ ರೂಪದಲ್ಲಿದ್ದವು. ಸಂಜೆಯವೇಳೆ ಎಲ್ಲ ಪತ್ನಿಯರು, ಆ ಪೈಕಿ ಯಾವುದಾದರೂ ಒಂದು ಗುಡಿಸಲಲ್ಲಿ ಒಟ್ಟು ಸೇರುತ್ತಿದ್ದರು.
💜 ಪ್ರವಾದಿವರ್ಯರು ಯಾವುದಾರೂ ದೂರದ ನಾಡಿಗೆ ಪ್ರಯಾಣ ಹೋಗುವಾಗ ತಮ್ಮ ಪತ್ನಿಯರ ಪೈಕಿ ಯಾರಾದರೊಬ್ಬರನ್ನು ಮಾತ್ರ ತಮ್ಮ ಜೊತೆಗೆ ಕರೆದೊಯ್ಯುತ್ತಿದ್ದರು. ಯಾವ ಪ್ರಯಾಣದಲ್ಲಿ ಯಾವ ಪತ್ನಿ ಅವರ ಜೊತೆಗೆ ಹೋಗಬೇಕು ಎಂಬುದನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುತ್ತಿತ್ತು. ಅವರು ಮದೀನಾದಿಂದ ಹಜ್ ಯಾತ್ರೆಗಾಗಿ ಮಕ್ಕಾ ನಗರಕ್ಕೆ ಹೊರಟಾಗ ಮಾತ್ರ ಅವರ ಎಲ್ಲ ಪತ್ನಿಯರು ಅವರ ಜೊತೆಗಿದ್ದರು.
💜 ಸುಖ ಲೋಲುಪತೆ ಒಬ್ಬ ಮನುಷ್ಯನ ಸ್ವಭಾವದಲ್ಲಿದ್ದರೆ ಅದನ್ನು ಬಹುಕಾಲ ಅಡಗಿಸಿಡಲಿಕ್ಕಾಗುವುದಿಲ್ಲ ಸಾವಿರ ಬಗೆಯಲ್ಲಿ ಅದು ಪ್ರಕಟವಾಗುತ್ತಲೇ ಇರುತ್ತದೆ. ಲಕ್ಷಾಂತರ ಅನುಯಾಯಿಗಳ ನಾಯಕರಾದ ಬಳಿಕವೂ ಪ್ರವಾದಿವರ್ಯರು ತಮಗಾಗಿ ಒಂದು ಅರಮನೆಯನ್ನು ಕಟ್ಟಿಸಲಿಲ್ಲ. ಮಾತ್ರವಲ್ಲ ಮಕ್ಕಾ ಮತ್ತು ಮದೀನಾದ ಶ್ರೀಮಂತರು ವಾಸಿಸುವಂತಹ ಒಂದು ದೊಡ್ಡ ಮನೆಯನ್ನೂ ಅವರು ಕಟ್ಟಿಸಲಿಲ್ಲ. ಅವರು ಸದಾ ಗುಡಿಸಲು ವಾಸಿಯಾಗಿದ್ದರು. ಅವರು ರಾಜ ಮಹಾರಾಜರು ಧರಿಸುವಂತಹ ದುಬಾರಿ ಉಡುಗೆಗಳನ್ನು ಧರಿಸಲಿಲ್ಲ. ಮಾತ್ರವಲ್ಲ ನಾಲ್ಕು ಜನರ ಮಧ್ಯೆ ಎದ್ದು ಕಾಣುವ ಉಡುಗೆಯನ್ನೂ ಅವರೆಂದೂ ಧರಿಸಲಿಲ್ಲ. ಅವರ ಉಡುಗೆ ತೀರಾ ಸರಳ ಹಾಗೂ ಸಾಮಾನ್ಯವಾಗಿತ್ತು. ಹಲವೊಮ್ಮೆ ಅವರ ನಿಲುವಂಗಿಯಲ್ಲಿ ತೇಪೆಗಳಿರುತ್ತಿದ್ದವು. ಅವರು ತಮ್ಮ ಮನೆಯಲ್ಲಿ ಒಂದು ದಿನದ ಆಹಾರವನ್ನೂ ಸಂಗ್ರಹಿಸಿಡುತ್ತಿರಲಿಲ್ಲ. ಯಾವುದೇ ಹೊತ್ತು ತಮ್ಮ ಬಳಿ ಆ ಹೊತ್ತಿನ ಅಗತ್ಯಕ್ಕಿಂತ ಹೆಚ್ಚಿನ ಆಹಾರವಿದ್ದರೆ ಅದನ್ನು ಅವರು ಬಡವರು, ಪ್ರವಾಣಿಕರು ಮುಂತಾದವರಿಗೆ ಹಂಚಿಬಿಡುತ್ತಿದ್ದರು. ಎಷ್ಟೋ ಬಾರಿ ಪ್ರವಾದಿವರ್ಯರು ಮತ್ತು ನಾವು ಆಹಾರವಿಲ್ಲದೆ ಹಸಿದು ಮಲಗಿದ್ದುಂಟು ಎಂದು ಅವರ ಪತ್ನಿಯರು ಹೇಳಿದ ದಾಖಲೆಗಳಿವೆ. ಅವರೆಂದೂ ಕಿರೀಟ ಧರಿಸಲಿಲ್ಲ. ಅವರಿಗೊಂದು ಸಿಂಹಾಸನವಿರಲಿಲ್ಲ. ಈ ದೃಷ್ಟಿಯಿಂದ ಅವರ ವಿವಾಹಗಳು ಅವರ ತ್ಯಾಗಗಳಾಗಿದ್ದುವೇ ಹೊರತು ಖಂಡಿತ ಸುಖಲೋಲುಪತೆಯ ಲಕ್ಷಣವಾಗಿರಲಿಲ್ಲ

✍ಅಬ್ದುಸ್ಸಲಾಮ್ ಪುತ್ತಿಗೆ