Sunday, January 6, 2019

ಪ್ರವಾದಿವರ್ಯರ ವಿವಾಹಗಳು ಮತ್ತು ಬುಡರಹಿತ ವಿವಾದಗಳು.

ಪ್ರವಾದಿ ಮುಹಮ್ಮದ್ (ಸ) ಅವರ ವೈವಾಹಿಕ ಬದುಕನ್ನು ಕೇಂದ್ರವಾಗಿಟ್ಟು  ಅವರ ನಿರ್ಮಲ ವ್ಯಕ್ತಿತ್ವದ ಮೇಲೆ ಕೆಸರು ಚೆಲ್ಲುವ ಶ್ರಮ ಬಹುಕಾಲದಿಂದ ನಡೆದು ಬಂದಿದೆ. ಹಲವರು ಪ್ರವಾದಿವರ್ಯರ ಬದುಕನ್ನು ಪರಿಚಯಿಸುವಾಗ ಸದಾ 12 ಮಂದಿ ಸುಂದರ, ಯುವ ಪತ್ನಿಯರ ಜೊತೆ ಬದುಕಿದ್ದವರು ಎಂಬಂತೆ ಚಿತ್ರಿಸುತ್ತಾರೆ. ಇದು ಅವರನ್ನು ಸುಖಲೋಲುಪ ಎಂದು ಬಿಂಬಿಸಿ ಆಮೂಲಕ ಅವರ ಸಂದೇಶವನ್ನು ಸಂಶಯದ ಸುಳಿಗೆ ಸಿಲುಕಿಸಲಿಕ್ಕೆಂದೇ  ನಡೆಸಲಾಗುವ ತೀರಾ ದುರುದ್ದೇಶಪೂರಿತ,  ವಿಕೃತ ಚಿತ್ರಣವಾಗಿದೆ.  ಅವರ ವೈವಾಹಿಕ ಜೀವನವನ್ನು ವಸ್ತು ನಿಷ್ಠವಾಗಿ ಪರಿಶೀಲಿಸಿದರೆ, ಇದಕ್ಕೆ ತೀರಾ ತದ್ವಿರುದ್ಧವಾದ ಚಿತ್ರವೊಂದು ಮೂಡಿ ಬರುತ್ತದೆ. ನಿಜವಾಗಿ ಅವರ ಬದುಕಿನ ಯಾವ ಹಂತದಲ್ಲೂ 12 ಮಂದಿ ಪತ್ನಿಯರು ಅವರ ಜೊತೆಗಿರಲಿಲ್ಲ. ಈ ನಿಟ್ಟಿನಲ್ಲಿ, ಈ ಕೆಳಗಿನ ಮಾಹಿತಿಗಳು, ವಾಸ್ತವವನ್ನು ಅರಿಯುವುದಕ್ಕೆ  ಸಹಾಯಕವಾಗಿವೆ:  

💜 ಪ್ರವಾದಿ ಮುಹಮ್ಮದ್ (ಸ) ಕ್ರಿ.ಶ. 570 ರಲ್ಲಿ ಜನಿಸಿದರು ಮತ್ತು ಕ್ರಿ. ಶ. 632 ರಲ್ಲಿ ನಿಧನರಾದರು. ಅವರು ನಿಧನರಾದಾಗ ಅವರ ವಯಸ್ಸು 63 ವರ್ಷ. 

💜 ತಮ್ಮ  25 ನೇ ಹರೆಯದ ತನಕ ಪ್ರವಾದಿವರ್ಯರು (ಸ) ಅವಿವಾಹಿತರಾಗಿದ್ದರು.    

💜   ಅವರು ಪ್ರಥಮವಾಗಿ ವಿವಾಹವಾದದ್ದು ಖದೀಜಾ (ರ) ಎಂಬ ವಿಧವೆಯನ್ನು. ಈ ವಿವಾಹದ ವೇಳೆ ಅವರಿಗೆ 25  ವರ್ಷ ವಯಸ್ಸಾಗಿತ್ತು ಮತ್ತು ಖದೀಜಾ (ರ) 40 ರ  ಹರೆಯದವರಾಗಿದ್ದರು. 

💜 ಮುಂದಿನ 25  ವರ್ಷಗಳ ಕಾಲ ಪ್ರವಾದಿವರ್ಯರು (ಸ) ಬೇರಾರನ್ನೂ ವಿವಾಹವಾಗಲಿಲ್ಲ. 

💜 ಅವರ ಪ್ರಥಮ ಪತ್ನಿ ಖದೀಜಾ (ರ) ಕ್ರಿ. ಶ. 619 ರಲ್ಲಿ ನಿಧನರಾದರು. ಆಗ ಪ್ರವಾದಿವರ್ಯರ(ಸ) ವಯಸ್ಸು 50 ವರ್ಷ. 

💜 ಖದೀಜಾ (ರ) ರ ನಿಧನಾನಂತರ ಆಕೆ ಬಿಟ್ಟು ಹೋದ ಎಳೆಯ ಮಕ್ಕಳನ್ನು ನೋಡಿಕೊಳ್ಳಲೆಂದು  ಕ್ರಿ. ಶ. 620ರಲ್ಲಿ ಅವರು  ಸೌದಾ ಬಿಂತಿ ಝಮ್ಆ (ರ) ಎಂಬ ಇನ್ನೋರ್ವ ವಿಧವೆಯನ್ನು ವರಿಸಿದರು. ಆಗ ಸೌದಾ 50ರ  ಹರೆಯ ಮೀರಿದವರಾಗಿದ್ದರು. 

💜 ಅದೇ ವರ್ಷ ಪ್ರವಾದಿವರ್ಯರು (ಸ) ಆಯಿಶಾ (ರ) ರನ್ನು ವಿವಾಹವಾದರು. ಈ ರೀತಿ ಔಪಚಾರಿಕವಾಗಿ ಸುಮಾರು 51ರ ಹರೆಯದಲ್ಲಿ ಅವರ ಬದುಕಿನಲ್ಲಿ ಬಹುಪತ್ನಿತ್ವದ ಹಂತ ಆರಂಭವಾಯಿತು.  ಆದರೆ ತಮ್ಮ ವಿವಾಹದ ಬಳಿಕವೂ ಆಯಿಶಾ (ರ)  ತಮ್ಮ ಹೆತ್ತವರ ಮನೆಯಲ್ಲೇ ಉಳಿದರು. ಸುಮಾರು 4 ವರ್ಷಗಳ ಬಳಿಕವಷ್ಟೇ ಅವರು ಬಂದು  ಪ್ರವಾದಿವರ್ಯರ (ಸ) ಕುಟುಂಬವನ್ನು ಸೇರಿದರು. ಈ ದೃಷ್ಟಿಯಿಂದ ಆಯಿಶಾ (ರ) ರನ್ನು ವಿವಾಹವಾದ ಬಳಿಕವೂ ವಸ್ತುಶಃ ಪ್ರವಾದಿಯ ಪಾಲಿಗೆ ಬಹುಪತ್ನಿತ್ವದ ಪರ್ವ ಆರಂಭವಾಗಿರಲಿಲ್ಲ. ಅದು ಆರಂಭವಾದದ್ದು ೪ ವರ್ಷಗಳ ಬಳಿಕ, ಆಯಿಶಾ (ರ) ಪ್ರವಾದಿಯ ಕುಟುಂಬನ್ನು ಸೇರಿದಾಗ ಮಾತ್ರ. ಆ ವರೆಗೆ ಅವರ ಮನೆಯಲ್ಲಿ ಅವರ ಪತ್ನಿಯಾಗಿದ್ದದ್ದು ಸೌದಾ (ರ) ಎಂಬೊಬ್ಬರು ಮಾತ್ರ. ಅಂದರೆ ವಸ್ತುಶ: ಅವರ ಬದುಕಿನಲ್ಲಿ ಬಹುಪತ್ನಿತ್ವದ ಪರ್ವ ಆರಂಭವಾದಾಗ ಅವರು ಕನಿಷ್ಠ 53 ವರ್ಷ ವಯಸ್ಸಿನವರಾಗಿದ್ದರು.  

💜 ಹೀಗೆ, ಕ್ರಿ. ಶ. 624 ರಲ್ಲಿ ಆಯಿಶಾ (ರ) ತಮ್ಮ ತವರು ಮನೆಯಿಂದ ಬಂದು ಪ್ರವಾದಿವರ್ಯರ ಮನೆಯನ್ನು ಸೇರುವುದರೊಂದಿಗೆ ಪ್ರವಾದಿವರ್ಯರು ತಮ್ಮ ಬದುಕಿನಲ್ಲಿ ಪ್ರಥಮವಾಗಿ ವಸ್ತುಶಃ ಬಹುಪತ್ನಿತ್ವದ ಮಜಲನ್ನು ಪ್ರವೇಶಿಸಿದರು. ಅಂದರೆ 25ರ ಹರೆಯದ ತನಕ ಅವಿವಾಹಿತರಾಗಿದ್ದ ಪ್ರವಾದಿವರ್ಯರು(ಸ) ತಮ್ಮ 53ರ ಹರೆಯದ ತನಕ ಕೇವಲ ಒಬ್ಬ ಪತ್ನಿಯುಳ್ಳವರಾಗಿದ್ದರು. 

💜 ಪ್ರವಾದಿವರ್ಯರ (ಸ) ಉಳಿದೆಲ್ಲ ವಿವಾಹಗಳು ನಡೆದಿರುವುದು ಮುಂದಿನ 6 ವರ್ಷಗಳಲ್ಲಿ. ಅಂದರೆ ಅವರ 53ನೇ ಹಾಗೂ  59ನೇ  ಹರೆಯದ ಮಧ್ಯೆ. 

💜 ಅವರು ತಮ್ಮ ಬದುಕಿನ ಕೊನೆಯ 4  ವರ್ಷಗಳಲ್ಲಿ ಅಂದರೆ ಕ್ರಿ. ಶ. 625 ಮತ್ತು 629 ರ ಮಧ್ಯೆ ಯಾರನ್ನೂ ವಿವಾಹವಾಗಲಿಲ್ಲ. 

💜 ಪ್ರವಾದಿವರ್ಯರ (ಸ) ಬದುಕಿನ ಅವಧಿಯಲ್ಲೇ ಅವರ ಇಬ್ಬರು ಪತ್ನಿಯರು ನಿಧನರಾಗಿದ್ದರು. 

💜 ಪ್ರವಾದಿ ಪತ್ನಿಯರ ಪೈಕಿ ಆಯಿಶಾ (ರ) ಮತ್ತು ಮಾರಿಯಾ (ರ) ಎಂಬಿಬ್ಬರು ಮಾತ್ರ ಪ್ರವಾದಿವರ್ಯರನ್ನು ವಿವಾಹವಾಗುವ ವೇಳೆ ಕನ್ಯೆಯರಾಗಿದ್ದರು. 

💜   12 ಮಂದಿ ಪ್ರವಾದಿ ಪತ್ನಿಯರ ಪೈಕಿ 10 ಮಂದಿ, ಪ್ರವಾದಿಯನ್ನು ವಿವಾಹ ವಾಗುವ ಮುನ್ನ ವಿಧವೆಯರಾಗಿದ್ದರು.  ಅಂದರೆ, ಆಯಿಷಾ (ರ) ಮತ್ತು ಮಾರಿಯಾ (ರ) ಇವರಿಬ್ಬರ ಹೊರತು  ಅವರ ಎಲ್ಲ ಪತ್ನಿಯರು, ಅವರನ್ನು ವಿವಾಹವಾಗುವ ಮುನ್ನ ವೈಧವ್ಯದ ಅನುಭವ ಪಡೆದಿದ್ದರು ಮತ್ತು ಅವರಲ್ಲಿ ಕೆಲವರು ವೈಧವ್ಯ ಮತ್ತು ವಿಚ್ಛೇದನ ಎರಡನ್ನೂ ಅನುಭವಿಸಿದವರಾಗಿದ್ದರು.   

💜 ಪ್ರವಾದಿವರ್ಯರ ಪ್ರಥಮ ಪತ್ನಿ ಖದೀಜಾ (ರ) ಪ್ರವಾದಿಯನ್ನು ವಿವಾಹವಾಗುವ ಮುನ್ನ ಎರಡು ಬಾರಿ ವಿವಾಹಿತರಾಗಿ ವಿಧವೆಯಾಗಿದ್ದರು.  

💜 ಹಾಗೆಯೇ, ಝೈನಬ್ ಬಿಂತಿ ಜಹಶ್ (ರ) ಅವರು ಪ್ರವಾದಿವರ್ಯರನ್ನು ವಿವಾಹವಾಗುವ ಮುನ್ನ ಎರಡು ಬಾರಿ ವಿವಾಹವಾಗಿದ್ದರು. ಅವರ ಮೊದಲ ಪತಿ ನಿಧನರಾಗಿದ್ದರು ಮತ್ತು ಎರಡನೆಯ ಪತಿಯು ಅವರಿಗೆ ವಿಚ್ಛೇದನ ನೀಡಿದ್ದರು.  

💜 ಪ್ರವಾದಿ ಪತ್ನಿಯರ ಪೈಕಿ ಕನಿಷ್ಠ ನಾಲ್ವರು ಪತ್ನಿಯರಿಗೆ, ಅವರು ಪ್ರವಾದಿವರ್ಯರನ್ನು ವಿವಾಹವಾಗುವ ಮುನ್ನ ಅವರ ಪೂರ್ವ ವಿವಾಹಗಳಿಂದ ಜನಿಸಿದ ಮಕ್ಕಳಿದ್ದರು. 

💜 ಪ್ರವಾದಿವರ್ಯರನ್ನು ವಿವಾಹವಾಗುವ ವೇಳೆ ಅವರ ಪತ್ನಿಯರ ಪೈಕಿ ಕನಿಷ್ಠ 5 ಮಂದಿ 35ರ ಹರೆಯ ದಾಟಿದವರಾಗಿದ್ದರು. 

💜 ಪ್ರವಾದಿ ಪತ್ನಿಯರ ಪೈಕಿ ಝೈನಬ್ ಬಿಂತಿ ಖುಝೈಮಾ (ರ) ಪ್ರವಾದಿವರ್ಯರನ್ನು ವಿವಾಹವಾಗಿ ಎಂಟು ತಿಂಗಳೊಳಗೆ ಅನಾರೋಗ್ಯದಿಂದ ನಿಧನರಾಗಿದ್ದರು.  
  
💜 ಪ್ರವಾದಿವರ್ಯರ ವಿವಾಹಗಳ ಪೈಕಿ ನಾಲ್ಕು ವಿವಾಹಗಳು, ಅಸಹಾಯಕ ಸ್ಥಿತಿಯಲ್ಲಿದ್ದ ತಮ್ಮ ಅನುಯಾಯಿಗಳಿಗೆ  ಘನತೆಯ ಆಶ್ರಯ ಒದಗಿಸಬೇಕೆಂಬ ಸಂಕಲ್ಪ ದಿಂದ ಪ್ರೇರಿತವಾಗಿದ್ದವು. ಸೌದಾ ಬಿಂತಿ ಝಮ್ಆ (ರ),  ಝೈನಬ್ ಬಿಂತಿ ಖುಝೈಮಾ (ರ), ಉಮ್ಮು ಸಲಾಮಾ ಬಿಂತಿ ಸುಹೈಲ್ (ರ), ಮತ್ತು ಉಮ್ಮು ಹಬೀಬಾ ಬಿಂತಿ ಅಬೂಸುಫಿಯಾನ್ (ರ) - ಈ ನಾಲ್ವರು ವಿವಿಧ ಸನ್ನಿವೇಶಗಳಲ್ಲಿ ತೀರಾ ಅಸಹಾಯಕ ಸ್ಥಿಯಲ್ಲಿದ್ದಾಗ, ಅವರಿಗೆ ಘನತೆ, ಗೌರವದೊಂದಿಗೆ ಆಶ್ರಯ ನೀಡುವ ಉದ್ದೇಶದಿಂದ ಪ್ರವಾದಿವರ್ಯರು ಅವರನ್ನು ವಿವಾಹವಾಗಿದ್ದರು. 

💜 ಪ್ರವಾದಿವರ್ಯರ ವಿವಾಹಗಳ ಹಿಂದಿನ ಪ್ರೇರಣೆಗಳ ಕುರಿತು ಹಲವರಿಗಿರುವ ಕುತೂಹಲ ತಣಿಸಲು ಬಹುಶ: ಒಂದು ಉದಾಹರಣೆ ಸಾಕು. ಪ್ರವಾದಿವರ್ಯರು ಉಮ್ಮು ಸಲಾಮಾ ಬಿಂತಿ ಸುಹೈಲ್ ರಿಗೆ ವಿವಾಹ ಪ್ರಸ್ತಾವ ಕಳಿಸಿದಾಗ, ಉಮ್ಮು ಸಲಾಮಾ ಹೇಳಿದರು: ನನಗೆ ಮಕ್ಕಳಿದ್ದಾರೆ. ಮುಂದೆ ಮಕ್ಕಳಾಗದ ಸ್ಥಿತಿಯಲ್ಲಿ ನಾನಿದ್ದೇನೆ. ಅದಕ್ಕೆ ಪ್ರವಾದಿ ನೀಡಿದ ಉತ್ತರ: ನನಗೆ ನಿಮಗಿಂತಲೂ ಹೆಚ್ಚು ವಯಸ್ಸಾಗಿದೆ. ನಿಮ್ಮ ಮಕ್ಕಳ ಪಾಲನೆಯ ಜವಾಬ್ದಾರಿ ಅಲ್ಲಾಹನ ಮತ್ತು ಅವನ ದೂತನ ಮೇಲಿದೆ. 

💜 ಪ್ರವಾದಿವರ್ಯರಿಗೆ ಮಕ್ಕಳು ಜನಿಸಿದ್ದು ಖದೀಜಾ(ರ) ಮತ್ತು ಮರಿಯಾ (ರ) ಎಂಬ ಇಬ್ಬರು ಪತ್ನಿಯರಿಂದ ಮಾತ್ರ. 

💜 ಪ್ರವಾದಿವರ್ಯರ ಅತ್ಯಂತ ದುಷ್ಟ ವಿರೋಧಿಗಳು ಕೂಡಾ ಎಂದೂ ಅವರ ಮೇಲೆ ವ್ಯಭಿಚಾರ ಅಥವಾ ಯಾವುದೇ ಬಗೆಯ ಅನೈತಿಕ ಚಟುವಟಿಕೆಯ ಆರೋಪ ಹೊರಿಸಿರಲಿಲ್ಲ.    

💜 ಪ್ರವಾದಿ ಮುಹಮ್ಮದ್ (ಸ) ತಾವು ದೇವ ದೂತರೆಂದು ಘೋಷಿಸಿದ ಕ್ಷಣವೇ ಅವರನ್ನು ದ್ವೇಷಿಸುವ ವಿರೋಧಿಗಳು ಮತ್ತು ಶತ್ರುಗಳ ಒಂದು ದೊಡ್ಡ ಪಡೆಯೇ ಹುಟ್ಟಿಕೊಂಡಿತು. ವಿವಿಧ ಹಿನ್ನೆಲೆಯ ಶತ್ರುಗಳ ದಂಡು ಅವರ ಬದುಕಿನ ಕೊನೆಯವರೆಗೂ ಅವರನ್ನು ಸುತ್ತುವರಿದಿತ್ತು. ಅವರ ಶತ್ರುಗಳು ಅವರನ್ನು ಪೀಡಿಸುವ ಮತ್ತು ಅವರ ವಿರುದ್ಧ ಜನಾಭಿಪ್ರಾಯ ರೂಪಿಸುವ ಯಾವುದೇ ಅವಕಾಶಕ್ಕಾಗಿ ಸದಾ ಕಾತರದಿಂದ ಕಾಯುತ್ತಿದ್ದರು. ಪ್ರವಾದಿವರ್ಯರ ಮೇಲೆ ಯಾವುದೇ ನೀಚ ಮಟ್ಟದ ಸುಳ್ಳಾರೋಪ ಹೊರಿಸುವುದಕ್ಕೂ ಅವರು ಹೇಸುತ್ತಿರಲಿಲ್ಲ. ಇಂತಹ ಪ್ರತಿಕೂಲ ವಾತಾವರಣದಲ್ಲೂ, ಝೈನಬ್ ಬಿಂತಿ ಜಹಶ್ (ರ) ಜೊತೆಗಿನ ವಿವಾಹದ ಹೊರತು ಪ್ರವಾದಿವರ್ಯರ ಬೇರಾವುದೇ ವಿವಾಹವು ಅವರ ಸಮಕಾಲೀನ ವಿರೋಧಿಗಳ ಆಕ್ಷೇಪಕ್ಕೆ ತುತ್ತಾಗಿರಲಿಲ್ಲ. 

💜 ಝೈನಬ್ ಬಿಂತಿ ಜಹಶ್ (ರ) ಜೊತೆಗಿನ  ಪ್ರವಾದಿವರ್ಯರ ವಿವಾಹವು ಸ್ವತಃ ಅವರ ಇಚ್ಛಾನುಸಾರ ನಡೆದಿರಲಿಲ್ಲ. ದತ್ತು ಸಂಬಂಧಕ್ಕೆ ರಕ್ತ ಸಂಬಂಧದ ಸ್ಥಾನ ನೀಡಬಾರದು ಎಂಬ ಹೊಸ ನಿಯಮದ ಭಾಗವಾಗಿ, ಪರಂಪರಾಗತ ಸಂಪ್ರದಾಯವೊಂದನ್ನು ಅಧಿಕೃತವಾಗಿ ಕೊನೆಗೊಳಿಸಲಿಕ್ಕಾಗಿತ್ತು, 

💜 ನಿಜಕ್ಕೂ ಪ್ರವಾದಿವರ್ಯರಿಗೆ ಝೈನಬ್ ಬಿಂತಿ ಜಹಶ್ (ರ) ರನ್ನು ವಿವಾಹವಾಗುವ ಅಪೇಕ್ಷೆ ಇದ್ದಿದ್ದರೆ ಅವರು, ಆಕೆ ತಮ್ಮ ದತ್ತು ಪುತ್ರನನ್ನು ವಿವಾಹವಾಗಿ ಆತನಿಂದ ವಿಚ್ಛೇದಿತಳಾದ ಬಳಿಕ ಆಕೆಯನ್ನು ವಿವಾಹವಾಗುವ ಮತ್ತು ಆ ಮೂಲಕ ವಿರೋಧಿಗಳ ದೂಷಣೆಗಳಿಗೆ ತುತ್ತಾಗುವ ಯಾವ ಅಗತ್ಯವೂ ಇರಲಿಲ್ಲ. ಆಕೆ ಅವರ ಪಾಲಿಗೆ ಅಪರಿಚಿತಳೇನೂ ಆಗಿರಲಿಲ್ಲ. ನಿಕಟ ಬಂಧುವೇ ಆಗಿದ್ದರು. ಆಕೆ ಕನ್ಯೆಯಾಗಿದ್ದಾಗ ಅಥವಾ ಆ ಬಳಿಕ ಆಕೆ ವಿಧವೆಯಾದಾಗ ನೇರವಾಗಿಯೇ ಅವರು ಆಕೆಯನ್ನು ವಿವಾಹವಾಗಬಹುದಾಗಿತ್ತು. ಆಕೆಯನ್ನು ಹಾಗೆ ವಿವಾಹವಾಗುವುದಕ್ಕೆ ಅವರ ಮುಂದೆ ಯಾವುದೇ ಬಗೆಯ ಸಾಮಾಜಿಕ ಅಡೆತಡೆ ಇರಲಿಲ್ಲ. 

💜 ಪ್ರವಾದಿವರ್ಯರು,  ಒಂದು ವೇಳೆ ವಿರೋಧಿಗಳು ಆರೋಪಿಸುವಂತೆ ಸುಖಲೋಲುಪರೇ ಆಗಿದ್ದರೆ ಅವರು ತಮ್ಮ ಯವ್ವನದಲ್ಲೇ ತಮಗೆ ಬೇಕಾದಷ್ಟು ಮಂದಿಯನ್ನು ವಿವಾಹವಾಗಬಹುದಿತ್ತು. ಅವರು ಬದುಕಿದ್ದ ಸಮಾಜದಲ್ಲಿ ಅದಕ್ಕೆ ಧಾರಾಳ ಅವಕಾಶಗಳೂ ಇದ್ದವು. ಉನ್ನತಕುಲದವರು, ವರ್ತಕರು, ಸುಂದರರು, ಆರೋಗ್ಯವಂತರು, ಗೌರವಾನ್ವಿತರು .... ಹೀಗೆ ಅಂದಿನ ಪುರುಷ ಪ್ರಧಾನ ಅರಬ್ ಸಮಾಜದಲ್ಲಿ ಹಲವು ವಿವಾಹಗಳನ್ನಾಗುವುದಕ್ಕೆ ಬೇಕಾಗಿದ್ದ ಎಲ್ಲ ಅರ್ಹತೆಗಳೂ ಅವರಲ್ಲಿದ್ದವು. ಇಷ್ಟಾಗಿಯೂ ಅವರು ಆ ಆಯ್ಕೆಯನ್ನು ಬಳಸಲಿಲ್ಲವೆಂಬುದು ಅವರ ಸ್ವಭಾವ ಎಂತಹದಾಗಿತ್ತು ಎಂಬುದಕ್ಕೆ ಪುರಾವೆಯಾಗಿದೆ. 

💜 ವೈಯಕ್ತಿಕವಾಗಿ ಪ್ರವಾದಿವರ್ಯರು ಹಲವರನ್ನು ವಿವಾಹವಾಗುವ ಒಲವು ಉಳ್ಳವರಾಗಿದ್ದರೆ ತಮ್ಮ ಪ್ರವಾದಿತ್ವಕ್ಕಿಂತ ಹಿಂದಿನ ಪುರುಸೊತ್ತಿನ ದಿನಗಳಲ್ಲೇ ಅವರು ಈ ತಮ್ಮ ಆಶೆಯನ್ನು ಈಡೇರಿಸಿಕೊಳ್ಳುತ್ತಿದ್ದರು. ಪ್ರವಾದಿತ್ವ ಎಂಬುದು ಎಲ್ಲರ ಪಾಲಿಗೆ ಆದರ್ಶ ಮಾನವನಾಗಿ ಬದುಕಬೇಕು, ಒಂದು ಆದರ್ಶ ಸಮಾಜವನ್ನು ಸ್ಥಾಪಿಸಬೇಕು ಮತ್ತು  ಸಂಪೂರ್ಣ ಮನುಕುಲಕ್ಕೆ ಸತ್ಯಸಂದೇಶವನ್ನು  ತಲುಪಿಸಬೇಕು ಎಂಬ  ಅಸಾಮಾನ್ಯ ಹೊಣೆಗಾರಿಕೆಗಳ ಹೆಸರಾಗಿತ್ತು. ನಲ್ವತ್ತರ ಹರೆಯದಲ್ಲಿ ಮತ್ತು ತೀರಾ ಪ್ರತಿಕೂಲ ಸನ್ನಿವೇಶದಲ್ಲಿ  ಅವರು ಪ್ರವಾದಿಯಾದಾಗಿನಿಂದ ಅವರ ಹೊಣೆಗಾರಿಕೆಗಳು ಮತ್ತು ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಲೇ ಹೋದವು. ೫೩ರ ಹರೆಯದಲ್ಲಿ ಅವರು ಮದೀನಾ ನಗರಕ್ಕೆ ವಲಸೆ ಹೋದ ಬಳಿಕವಂತೂ ಅವರ ಚಟುವಟಿಕೆಗಳು ತಾರಕದಲ್ಲಿದ್ದವು. ಸಂದೇಶಪ್ರಚಾರ ಸಂಬಂಧಿ ಪ್ರಯಾಣಗಳು, ಸಭೆಗಳು, ವ್ಯಾಜ್ಯಗಳು, ವಿಚಾರಣೆಗಳು, ಚಾರಿತ್ರ್ಯ ನಿರ್ಮಾಣ ಮತ್ತು ಸಮಾಜ ಸುಧಾರಣೆಯ ಶ್ರಮಗಳು,  ಯುದ್ಧಗಳು, ಸಂಧಾನಗಳು, ಸಂಚುಗಳು, ಆಂತರಿಕ ಭಿನ್ನಮತಗಳು ಹೀಗೆ ಸಾವಿರ ಚಟುವಟಿಕೆಗಳಲ್ಲಿ ಅವರು ಮಗ್ನರಾಗಿದ್ದ ದಿನಗಳೇ ಅವರು ಅತ್ಯಧಿಕ ವಿವಾಹವಾದ ದಿನಗಳಾಗಿದ್ದವು. ಅವರ ವಿವಾಹಗಳು ಅವರ ಪ್ರವಾದಿತ್ವಕ್ಕೆ ಸಂಬಂಧಿಸಿದ ಬಾಧ್ಯತೆಗಳ ಭಾಗವಾಗಿತ್ತೇ ಹೊರತು ಸುಖಲೋಲುಪತೆಯ ಪರಿಣಾಮವಾಗಿರಲಿಲ್ಲ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ.  

💜 ವ್ಯಕ್ತಿಗಳು, ಕುಟುಂಬಗಳು, ಸಮುದಾಯಗಳು, ಬುಡಕಟ್ಟುಗಳು ಮತ್ತು ದೇಶಗಳ ಜೊತೆ ಬಾಂಧವ್ಯದ ಬೆಸುಗೆ ಬೆಸೆಯುವುದು ಒಬ್ಬ ಆಡಳಿತಗಾರ ಹಾಗೂ  ಜನನಾಯಕರೆಂಬ ನೆಲೆಯಲ್ಲಿ ಪ್ರವಾದಿವರ್ಯರ ಕರ್ತವ್ಯವಾಗಿತ್ತು. ವಿವಾಹವು ಆನಿಟ್ಟಿನಲ್ಲಿ ಒಂದು ಪ್ರಮುಖ ಉಪಾಧಿಯಾಗಿತ್ತು. ಪ್ರವಾದಿವರ್ಯರ ನಿಧನಾನಂತರ ಅವರ ಉತ್ತರಾಧಿಕಾರಿಗಳಾದ ಅವರ ನಾಲ್ವರು ಆಪ್ತ ಶಿಷ್ಯರು ವೈವಾಹಿಕ ಸಂಬಂಧದ ಮೂಲಕ ಪ್ರವಾದಿವರ್ಯರ ಬಂಧುಗಳಾಗಿ ಬಿಟ್ಟಿದ್ದರು. ಉದಾ : ಪ್ರಥಮ ಖಲೀಫಾ ಅಬೂಬಕರ್ (ರ) ಮತ್ತು ದ್ವಿತೀಯ ಖಲೀಫಾ ಉಮರ್ (ರ) ಇವರಿಬ್ಬರ ಪುತ್ರಿಯರನ್ನು ಪ್ರವಾದಿವರ್ಯರು ಸ್ವತಃ ವಿವಾಹವಾಗಿದ್ದರು. ಮೂರನೇಯ ಖಲೀಫಾ ಉಸ್ಮಾನ್ (ರ) ಮತ್ತು ನಾಲ್ಕನೆಯ ಖಲೀಫಾ ಅಲೀ (ರ) ಇವರಿಬ್ಬರಿಗೆ ಪ್ರವಾದಿವರ್ಯರು ತಮ್ಮ ಪುತ್ರಿಯರ ಜೊತೆ ವಿವಾಹ ಮಾಡಿಸಿದ್ದರು. 

💜 ಹೊಸ ಬಾಂಧವ್ಯಗಳ ಸ್ಥಾಪನೆಗಾಗಿ ಹಾಗೂ ಇರುವ ಬಾಂಧವ್ಯಗಳನ್ನು ಬಲಪಡಿಸುವುದಕ್ಕಾಗಿ ಪ್ರವಾದಿವರ್ಯರು ವಿವಾಹವನ್ನು ಉಪಾಧಿಯಾಗಿಸಿದ್ದರು ಎಂಬುದಕ್ಕೆ ಇನ್ನೂ ಅನೇಕ ಉದಾಹರಣೆಗಳಿವೆ. ಅವರ ವಿವಾಹಗಳ ಫಲಸ್ವರೂಪವಾಗಿ ಬಲಿಷ್ಠಗೊಂಡ ಸಂಬಂಧಗಳು ಅವರ ಸಂಕಲ್ಪ ಶುದ್ಧಿಗೆ ಮತ್ತು ಅವರ ಯೋಜಿತ ಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿವೆ. ಉದಾ; 
೧. ಅಬೂ ಸುಫಿಯಾನ್ ಪ್ರವಾದಿವರ್ಯರ ಪರಮ ಶತ್ರುಗಳಲ್ಲೊಬ್ಬರಾಗಿದ್ದರು. ಪ್ರವಾದಿಗೆ ಸಾಕಷ್ಟು ಹಿಂಸೆ ನೀಡಿದ್ದರು. ಅವರ ಪುತ್ರಿ ಉಮ್ಮು ಹಬೀಬ (ರ) ರನ್ನು ಪ್ರವಾದಿವರ್ಯರು ವಿವಾಹವಾದ ಬೆನ್ನಿಗೆ ಆಕೆಯ ತಂದೆಯ ಹಗೆತನವೆಲ್ಲ ಕರಗಿ ಹೋಯಿತು. ಸ್ವಂತ ಅಳಿಯನ ವಿರುದ್ಧ ಎಂತಹ ಹಗೆತನ? ಎಂಬುದು ಈ ಬೆಳವಣಿಗೆಯ ಹಿಂದಿನ ಸರಳ ತರ್ಕವಾಗಿತ್ತು. 
೨. ಪ್ರವಾದಿ ಪತ್ನಿ ಜುವೈರಿಯ್ಯ (ರ), ರ ತಂದೆ ಮದೀನಾದಲ್ಲಿನ  ಬನೂ ಅಲ್ ಮುಸ್ತಲಿಕ್ ಎಂಬೊಂದು ಯಹೂದಿ ಗೋತ್ರದ  ಮುಖ್ಯಸ್ಥ ರಾಗಿದ್ದರು. ಅಲ್ಲಿ ಮುಸ್ಲಿಮರು ಮತ್ತು ಯಹೂದಿಗಳ ಮಧ್ಯೆ ನಡೆದ ಯುದ್ಧದಲ್ಲಿ ಮುಸ್ಲಿಮರಿಗೆ ವಿಜಯ ಪ್ರಾಪ್ತವಾಯಿತು. ನೂರರಷ್ಟು ಯಹೂದಿ ಪರಿವಾರಗಳು ಮುಸ್ಲಿಮರ ಸೇನೆಯ ಕೈಯಲ್ಲಿ ಸೆರೆಯಾಳುಗಳಾದವು. ಅಂದಿನ ನಿಯಮದಂತೆ ಪರಿಹಾರ ಧನ ಸಲ್ಲಿಸಿ ಸ್ವತಂತ್ರರಾಗಬೇಕು ಅಥವಾ ಗುಲಾಮರಾಗಬೇಕು ಎಂಬ ಆಯ್ಕೆಯನ್ನು ಕೈದಿಗಳಿಗೆ ನೀಡಲಾಯಿತು. ಗುಲಾಮರಾದವರನ್ನು ಯೋಧರ ವಶಕ್ಕೆ ನೀಡಲಾಯಿತು. ಜುವೈರಿಯ್ಯರ ಪತಿ ಯುದ್ಧದಲ್ಲಿ ಹತರಾಗಿದ್ದರು. ಅವರನ್ನು ದಾಸಿಯಾಗಿ ಒಬ್ಬ ಮುಸ್ಲಿಂ ಯೋಧನಿಗೆ ಒಪ್ಪಿಸಲಾಯಿತು. ಆಕೆ ಪ್ರವಾದಿಯ ಬಳಿಗೆ ಬಂದು ತನ್ನ ಬಳಿ ಪಾವತಿಸಲು ಪರಿಹಾರ ಧನವೇನೂ ಇಲ್ಲ, ಆದರೆ ಒಬ್ಬ ಸಾಮಾನ್ಯ ಯೋಧನ ದಾಸಿಯಾಗಿ ಬದುಕಲಿಕ್ಕೂ ತನಗೆ ಸಾಧ್ಯವಿಲ್ಲ ಆದ್ದರಿಂದ ತನ್ನ ಮೇಲೆ ಕರುಣೆ ತೋರಬೇಕು ಎಂದು ವಿನಂತಿಸಿದರು. ಪ್ರವಾದಿವರ್ಯರು ಆಕೆಯೊಡನೆ, ನೀನು ನನ್ನ ಪರಿವಾರದ ಸದಸ್ಯೆಯಾಗುವೆಯಾ ? ಎಂದು ವಿಚಾರಿಸಿದರು. ಜುವೈರಿಯಾ ಸಂತೋಷದಿಂದ ಒಪ್ಪಿಕೊಂಡರು ಮತ್ತು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಪ್ರವಾದಿವರ್ಯರ ಜೊತೆ ಆಕೆಯ ವಿವಾಹವೂ ನಡೆಯಿತು. ಇದರೊಂದಿಗೆ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿ ಬಿಟ್ಟಿತು. ಪ್ರವಾದಿಪತ್ನಿಯಾದವರು  ಮುಸ್ಲಿಂ ಸಮಾಜದ ಎಲ್ಲ ಸದಸ್ಯರ ಪಾಲಿಗೆ ಮಾತೃ ಸಮಾನರಾಗುತ್ತಾರೆ. ಆಕೆಯ ಬಂಧುಗಳು ನಮ್ಮ ಬಂಧುಗಳು ಎಂಬುದನ್ನು ಮನಗಂಡ ಎಲ್ಲ ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಆಕೆಯ ಗೌರವಾರ್ಥ ತಮ್ಮ ಅಧೀನದಲ್ಲಿದ್ದ ಎಲ್ಲ ಯಹೂದಿ ಕೈದಿಗಳನ್ನು ಬಿಡುಗಡೆಗೊಳಿಸಿಬಿಟ್ಟರು. ಹೀಗೆ ಪ್ರವಾದಿವರ್ಯರ ಒಂದು ವಿವಾಹದಿಂದಾಗಿ ಬನೂ ಅಲ್ ಮುಸ್ತಲಿಕ್ ಗೋತ್ರದ ನೂರು ಯಹೂದಿ ಪರಿವಾರಗಳಿಗೆ ಸ್ವಾತಂತ್ರ್ಯ ಪ್ರಾಪ್ತವಾಯಿತು.  
೩. ಸಫಿಯ್ಯಾ (ರ) ಬಿಂತಿ ಹುಯಯ್ಯ್ ಮದೀನದಲ್ಲಿನ ಬನೀ ನಝೀರ್ ಎಂಬ ಯಹೂದಿ ಗೋತ್ರದ ನಾಯಕನ ಪುತ್ರಿಯಾಗಿದ್ದರು. ಆಕೆಯನ್ನು ಪ್ರವಾದಿವರ್ಯರು ವಿವಾಹವಾದ ಬೆನ್ನಿಗೆ, ಆ ತನಕ ಮುಸ್ಲಿಮರ ವಿಷಯದಲ್ಲಿ ತೀರಾ ಪ್ರತಿಕೂಲ ನಿಲುವು ತಾಳಿದ್ದ ಅನೇಕ ಯಹೂದಿಗಳ ನಿಲುವು ಬದಲಾಗಿ ಬಿಟ್ಟಿತು. ಅವರು ದ್ವೇಷದ ಹಾದಿ ಬಿಟ್ಟು ಮುಸ್ಲಿಮರತ್ತ ಸ್ನೇಹ ಹಸ್ತ ಚಾಚತೊಡಗಿದರು. 
೪. ಪ್ರವಾದಿ ಪತ್ನಿ ಮೈಮೂನ (ರ) ನಜ್ಡ್ ಪ್ರದೇಶದ ಬನೂ ಮಖ್ ಝೂಮ್ ಎಂಬ ಒಂದು ಪ್ರಬಲ ಗೋತ್ರದ ಸದಸ್ಯೆಯಾಗಿದ್ದರು. ಆಕೆಯ ಸಹೋದರಿ ಆ ಗೋತ್ರದ ನಾಯಕನ ಪತ್ನಿಯಾಗಿದ್ದರು. 70 ಮಂದಿ ಮುಸ್ಲಿಂ ಧರ್ಮ ಪ್ರಚಾರಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಆ ಗೋತ್ರದ ಮೇಲಿತ್ತು. ಅವರ ವಿರುದ್ಧ ಪ್ರತೀಕಾರಕ್ಕಾಗಿ ಹಲವು ಮುಸ್ಲಿಮರು ಕಾತರಿಸುತ್ತಿದ್ದರು. ಪ್ರವಾದಿವರ್ಯರು ಮೈಮೂನ (ರ)ರನ್ನು ವಿವಾಹವಾದೊಡನೆ ಆ ಉದ್ವಿಗ್ನತೆ ಶಮನವಾಯಿತು. ನಜ್ಡ್ ಪ್ರಾಂತ್ಯವು ತನ್ನ ಸಂಘರ್ಷದ ಧೋರಣೆಯನ್ನು ಕೈಬಿಟ್ಟು ಪ್ರವಾದಿವರ್ಯರ ನೇತೃತ್ವದ ಮದೀನಾ ಸರಕಾರಕ್ಕೆ ಶರಣಾಜಿ ಅದರ ಅಧೀನದಲ್ಲಿರಲು ಒಪ್ಪಿಕೊಂಡರು.   

💜 ಪ್ರವಾದಿವರ್ಯರು ಈ ಲೋಕದ ಪಾಲಿಗೆ ಅಂತಿಮ ದೇವದೂತರಾಗಿದ್ದರು. ಜಗತ್ತಿನೆಲ್ಲೆಡೆಯ, ಎಲ್ಲ ಕಾಲಗಳ ಅವರ ಅನುಯಾಯಿಗಳ ಪಾಲಿಗೆಅವರ ಬದುಕಿನ ಕ್ಷಣಕ್ಷಣವೂ  ಅಪಾರ ಮಹತ್ವದ್ದಾಗಿತ್ತು. ಪ್ರವಾದಿವರ್ಯರ ನಿಧನಾನಂತರ ಅವರ ಕುರಿತು ಮಾಹಿತಿಗಾಗಿ ಜನರು ಅವರ ಆಪ್ತ ಅನುಯಾಯಿಗಳನ್ನು ಮತ್ತು ಪ್ರವಾದಿಯ ಪತ್ನಿಯರನ್ನುಅವಲಂಬಿಸಿದ್ದರು. ಅವರ ಬದುಕಿನ ವಿಭಿನ್ನ ಸನ್ನಿವೇಶಗಳನ್ನು, ಅವರ ಮಾತುಗಳನ್ನು ಮತ್ತು ಅವರ ಕೃತ್ಯಗಳನ್ನು ಅವರ ಅನುಯಾಯಿಗಳು ನೆನಪಿಟ್ಟುಕೊಂಡಿದ್ದರು ಮತ್ತು ಆ ಮಾಹಿತಿಯನ್ನು ಜೋಪಾನವಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದರು. ಮಸೀದಿಯಲ್ಲಿ, ಪೇಟೆಗಳಲ್ಲಿ, ಹಾದಿ ಬೀದಿಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಯುದ್ಧರಂಗಲ್ಲಿ ಹೀಗೆ ಮನೆಯ ಹೊರಗಿನ ಎಲ್ಲೆಡೆ ಅವರು ಏನು ಹೇಳಿದರು ಮತ್ತು ಏನು ಮಾಡಿದರು ಎಂಬುದನ್ನೆಲ್ಲಾ ದಾಖಲಿಸುವ ಕಾರ್ಯವನ್ನು ಅವರ ಅನುಯಾಯಿಗಳು ಮಾಡಿದ್ದರು. ಆದರೆ ಅವರ ಮನೆಯೊಳಗಿನ ತೀರಾ ಖಾಸಗಿ  ಬದುಕನ್ನು ದಾಖಲಿಸಿ ಅದರ ವಿವರಗಳನ್ನು ಮಾನವ ಸಮಾಜಕ್ಕೆ ತಲುಪಿಸುವ ಉಪಕಾರವನ್ನು ಮಾಡಿದ್ದು ಅವರ ಮಾನ್ಯ ಪತ್ನಿಯರು. ಹದೀಸ್ ಗ್ರಂಥಗಳಲ್ಲಿ ಸಿಗುವ, ಪ್ರವಾದಿ ವರ್ಯರಿಗೆ ಸಂಬಂಧಿಸಿದ ವರದಿಗಳ ಪೈಕಿ 2,200ಕ್ಕಿಂತಲೂ ಅಧಿಕ ವರದಿಗಳು ಪ್ರವಾದಿವರ್ಯರ ಕಿರಿಯ ಪತ್ನಿ ಆಯಿಶಾ(ರ) ಒಬ್ಬರಿಂದಲೇ ಬಂದಿವೆ. ಪ್ರವಾದಿವರ್ಯರ (ಸ) ನಡೆನುಡಿಗಳ ಕುರಿತಂತೆ 300 ಕ್ಕೂ ಅಧಿಕ ವರದಿಗಳು ಪ್ರವಾದಿ ಪತ್ನಿ ಉಮ್ಮು ಸಲ್ಮಾ (ರ) ರಿಂದ ಬಂದಿವೆ. 60 ಕ್ಕೂ ಹೆಚ್ಚು ವರದಿಗಳು ಹಫ್ಸಾ (ರ) ರ ಮೂಲಕ ಬಂದಿವೆ.   

💜 ಪ್ರವಾದಿವರ್ಯರ ಪತ್ನಿಯರ ಪೈಕಿ ಹೆಚ್ಚಿನವರು ತೀರಾ ವಿಭಿನ್ನ ಕುಲ ಗೋತ್ರಗಳಿಗೆ ಸೇರಿದವರು ಮತ್ತು ತೀರಾ ಭಿನ್ನ ಹಿನ್ನೆಲೆಯವರಾಗಿದ್ದರು. ಉದಾ; ಆಯಿಶಾ (ರ) ಬನೀ ತೈಮ್ ಗೋತ್ರದವರು. ಹಫ್ಸಾ (ರ) ಅದೀ ಎಂಬ ಗೋತ್ರದವರು. ಉಮ್ಮು ಹಬೀಬಾ ಉಮಯ್ಯಾ ಗೋತ್ರದವರು. ಝೈನಬ್ ಬಿಂತಿ ಖುಝೈಮಾ (ರ) ಹವಾಝಿನ್ ಗೋತ್ರದವರು. ಸಫಿಯ್ಯಾ(ರ) ಮತ್ತು ಮೈಮೂನ(ರ) ಎರಡು ವಿಭಿನ್ನ ಯಹೂದಿ ಗೋತ್ರಗಳಿಗೆ ಸೇರಿದ್ದರು. 

💜 ಪ್ರವಾದಿವರ್ಯರು ತಮ್ಮೆಲ್ಲ ಪತ್ನಿಯರ ಮಧ್ಯೆ, ಮಾನವೀಯ ಇತಿಮಿತಿಗಳೊಳಗೆ ಸಾಧ್ಯವಿರುವಷ್ಟು ಗರಿಷ್ಟ ಮಟ್ಟದಲ್ಲಿ ನ್ಯಾಯ ಪಾಲಿಸಿದ್ದರು. ದೇವದೂತರಾಗಿ, ಆಡಳಿತಗಾರರಾಗಿ ಹಾಗೂ ಜನ ನಾಯಕರಾಗಿ ಸಾವಿರಾರು ಚಟುವಟಿಕೆಗಳಲ್ಲಿ  ನಿರತರಾಗಿದ್ದರೂ ಈ ಮಧ್ಯೆ ತಮ್ಮ ಕುಟುಂಬಕ್ಕಾಗಿ ಹಾಗೂ ತಮ್ಮ  ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಗಾಗಿ ಸಮಯ ವಿನಿಯೋಗಿಸುತ್ತಿದ್ದರು. ಕುಟುಂಬಕ್ಕಾಗಿ ಅವರು ಮೀಸಲಿಟ್ಟಿದ್ದ ಒಟ್ಟು ಸಮಯದಲ್ಲಿ ಅವರ ಪತ್ನಿಯರ ಪೈಕಿ ಪ್ರತಿಯೊಬ್ಬರಿಗೆ ಸಮಾನ ಪಾಲನ್ನು ನಿಗದಿಪಡಿಸಲಾಗಿತ್ತು. ತಮ್ಮ ಅನಾರೋಗ್ಯದ ದಿನಗಳಲ್ಲಿ ಪ್ರವಾದಿವರ್ಯರು ತಮ್ಮ  ಹೆಚ್ಚು ಸಮಯವನ್ನು ಆಯಿಶಾ (ರ) ಅವರ ಜೊತೆ ಕಳೆಯಬಯಸಿದ್ದರು. ಆದರೆ ಇತರೆಲ್ಲ ಪತ್ನಿಯರಿಂದ ಅನುಮತಿ ಪಡೆದ ಬಳಿಕವಷ್ಟೇ ಅವರು ಹಾಗೆ ಮಾಡಿದರು. ಅವರ ಪತ್ನಿ ಸೌದಾ (ರ) , ತಮ್ಮ ಪಾಲಿನ ಸಮಯವನ್ನು ಉಡುಗೊರೆಯಾಗಿ ಪ್ರವಾದಿವರ್ಯರ ಇತರ ಪತ್ನಿಯರಿಗೆ ನೀಡಿದ್ದರು. 

💜 ಅವರ ಪತ್ನಿಯರ ಪೈಕಿ ಪ್ರತಿಯೊಬ್ಬರಿಗೂ ಮಸ್ಜಿದುನ್ನಬವಿಯ (ಪ್ರವಾದಿಯ ಮಸೀದಿಯ) ಆವರಣದಲ್ಲೇ ಸಣ್ಣದಾದ ಆದರೆ ಪ್ರತ್ಯೇಕ ನಿವಾಸಗಳನ್ನು ಒದಗಿಸಲಾಗಿತ್ತು. ಆ ನಿವಾಸಗಳು ಪುಟ್ಟ ಗುಡಿಸಲುಗಳ ರೂಪದಲ್ಲಿದ್ದವು. ಸಂಜೆಯವೇಳೆ ಎಲ್ಲ ಪತ್ನಿಯರು, ಆ ಪೈಕಿ ಯಾವುದಾದರೂ ಒಂದು ಗುಡಿಸಲಲ್ಲಿ ಒಟ್ಟು ಸೇರುತ್ತಿದ್ದರು. 

💜   ಪ್ರವಾದಿವರ್ಯರು ಯಾವುದಾರೂ ದೂರದ ನಾಡಿಗೆ ಪ್ರಯಾಣ ಹೋಗುವಾಗ ತಮ್ಮ ಪತ್ನಿಯರ ಪೈಕಿ ಯಾರಾದರೊಬ್ಬರನ್ನು ಮಾತ್ರ ತಮ್ಮ ಜೊತೆಗೆ ಕರೆದೊಯ್ಯುತ್ತಿದ್ದರು. ಯಾವ ಪ್ರಯಾಣದಲ್ಲಿ ಯಾವ ಪತ್ನಿ ಅವರ ಜೊತೆಗೆ ಹೋಗಬೇಕು ಎಂಬುದನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುತ್ತಿತ್ತು.  ಅವರು ಮದೀನಾದಿಂದ ಹಜ್ ಯಾತ್ರೆಗಾಗಿ ಮಕ್ಕಾ ನಗರಕ್ಕೆ ಹೊರಟಾಗ ಮಾತ್ರ ಅವರ ಎಲ್ಲ ಪತ್ನಿಯರು ಅವರ ಜೊತೆಗಿದ್ದರು. 

💜  ಸುಖ ಲೋಲುಪತೆ ಒಬ್ಬ ಮನುಷ್ಯನ ಸ್ವಭಾವದಲ್ಲಿದ್ದರೆ ಅದನ್ನು ಬಹುಕಾಲ ಅಡಗಿಸಿಡಲಿಕ್ಕಾಗುವುದಿಲ್ಲ  ಸಾವಿರ ಬಗೆಯಲ್ಲಿ ಅದು ಪ್ರಕಟವಾಗುತ್ತಲೇ ಇರುತ್ತದೆ.  ಲಕ್ಷಾಂತರ ಅನುಯಾಯಿಗಳ ನಾಯಕರಾದ ಬಳಿಕವೂ ಪ್ರವಾದಿವರ್ಯರು ತಮಗಾಗಿ ಒಂದು ಅರಮನೆಯನ್ನು ಕಟ್ಟಿಸಲಿಲ್ಲ. ಮಾತ್ರವಲ್ಲ ಮಕ್ಕಾ ಮತ್ತು ಮದೀನಾದ ಶ್ರೀಮಂತರು ವಾಸಿಸುವಂತಹ ಒಂದು ದೊಡ್ಡ ಮನೆಯನ್ನೂ ಅವರು ಕಟ್ಟಿಸಲಿಲ್ಲ. ಅವರು ಸದಾ ಗುಡಿಸಲು ವಾಸಿಯಾಗಿದ್ದರು. ಅವರು ರಾಜ ಮಹಾರಾಜರು ಧರಿಸುವಂತಹ ದುಬಾರಿ ಉಡುಗೆಗಳನ್ನು ಧರಿಸಲಿಲ್ಲ. ಮಾತ್ರವಲ್ಲ ನಾಲ್ಕು ಜನರ ಮಧ್ಯೆ ಎದ್ದು ಕಾಣುವ ಉಡುಗೆಯನ್ನೂ ಅವರೆಂದೂ ಧರಿಸಲಿಲ್ಲ. ಅವರ ಉಡುಗೆ ತೀರಾ ಸರಳ ಹಾಗೂ ಸಾಮಾನ್ಯವಾಗಿತ್ತು. ಹಲವೊಮ್ಮೆ ಅವರ ನಿಲುವಂಗಿಯಲ್ಲಿ ತೇಪೆಗಳಿರುತ್ತಿದ್ದವು. ಅವರು ತಮ್ಮ ಮನೆಯಲ್ಲಿ ಒಂದು ದಿನದ ಆಹಾರವನ್ನೂ ಸಂಗ್ರಹಿಸಿಡುತ್ತಿರಲಿಲ್ಲ. ಯಾವುದೇ ಹೊತ್ತು ತಮ್ಮ ಬಳಿ ಆ ಹೊತ್ತಿನ ಅಗತ್ಯಕ್ಕಿಂತ ಹೆಚ್ಚಿನ ಆಹಾರವಿದ್ದರೆ ಅದನ್ನು ಅವರು ಬಡವರು, ಪ್ರವಾಣಿಕರು ಮುಂತಾದವರಿಗೆ ಹಂಚಿಬಿಡುತ್ತಿದ್ದರು. ಎಷ್ಟೋ ಬಾರಿ ಪ್ರವಾದಿವರ್ಯರು ಮತ್ತು ನಾವು ಆಹಾರವಿಲ್ಲದೆ ಹಸಿದು ಮಲಗಿದ್ದುಂಟು ಎಂದು ಅವರ ಪತ್ನಿಯರು ಹೇಳಿದ ದಾಖಲೆಗಳಿವೆ. ಅವರೆಂದೂ ಕಿರೀಟ ಧರಿಸಲಿಲ್ಲ. ಅವರಿಗೊಂದು ಸಿಂಹಾಸನವಿರಲಿಲ್ಲ.  ಈ ದೃಷ್ಟಿಯಿಂದ ಅವರ ವಿವಾಹಗಳು ಅವರ ತ್ಯಾಗಗಳಾಗಿದ್ದುವೇ ಹೊರತು ಖಂಡಿತ ಸುಖಲೋಲುಪತೆಯ ಲಕ್ಷಣವಾಗಿರಲಿಲ್ಲ

✍ಅಬ್ದುಸ್ಸಲಾಮ್ ಪುತ್ತಿಗೆ 

Some Questions answered by Abdussalam Puthige



1. What are the greatest differences you see in various Quranic translations?

Here is a brief example of how each translation varies from the other. Pl read the entire article in the following link to know what happens in the process of translation.

http://quranica.com/divergence-in-translations/

Qur'an  - Ch 2, Verse 2     
 هُدًى لِّلْمُتَّقِينَ
Yusuf Ali: in it is guidance sure, without doubt, to those who fear Allah
Sahih International: a guidance for those conscious of Allah
Ghali: a guidance to the pious
Pickthall: a guidance unto those who ward off (evil)
Shakir: a guide to those who guard (against evil)
Muhsin Khan: a guidance to those who are Al-Muttaqun


2. Why would God create people who would reject him?

Belief in God is not a need of God. God creates people and gives them an opportunity to find out truth and believe in it. But He does not impose any faith on anybody. Those who decide not to believe in him in this world will be subjected to trial in the next life and will have to face the consequences of having rejected an existing truth.


3. Since people clearly doubt even when they want to believe, why doesn't God directly reveal god self to them? 

Once again, belief in God is not a need of God. In fact seeking to see God in person as a precondition to have faith in him is not a very modern or scientific approach. This approach existed even during the ancient times. Look at those hundreds of scientific theories and Laws, people unanimously believe in the modern age. These facts, theories and laws did not reveal themselves before us or did not beg us to have faith in them. We discovered them. It was our need. God has nothing to gain or lose from people who believe in Him or reject Him.  Existence of God is a truth and those who are interested in Truth will go in search of it and will find it too. It is in their own interest. If they choose to ignore God or reject Him it is for them to face the consequences of their own conscious decision. 


4. Is there evidence for the Jinn?

In fact Jinn, just like angel is one of the unseen and invisible beings and there is no universally tangible evidence for their existence.. It is part of Islamic faith that human being is not capable of seeing everything. A realistic human being will acknowledge such limitations of his own being. I believe in the existence of Jinn because:
1. the God I believe in has said so.
2. I know for sure there are many things that exist but they are not visible.
3. If I insist that I will believe only things that are visible and that can be experienced, I will have to reject many facts.
4. Human beings consider logic and reasoning as their sources to know the facts and believe in them. For me the reason No.1 cited above is sufficient logical evidence to believe in the existence of the species called the Jinn.


5. Why were the Jinn able to help Solomon but not able to engage with other people?

Like human beings, Jinns are independent species. It rarely happens that Human beings control some Jinns or some Jinns control human beings, for a limited period and to a limited extent. Solomon (a) was a messenger of God and had his own God given privileges.


 6. Why is there a separate section of laws for the prophet?

Different positions call for different codes. You know the rights and privileges enjoyed by President Trump or the Chief of Army are not enjoyed by all citizens of the US. In the meantime people in high positions of responsibility have to perform many more duties compared to the others. In the case of the Prophets, generally the common Law applies to them, with some exceptions.


7. What would make God care about people having faith? 

God cares because being the Most Compassionate and Merciful is his essential attribute or characteristic. He cares for people irrespective of whether they believe n Him or not. In fact His compassion extends to all His creations.


8. If the world is a test isn't that pointless if God knows us perfectly and knows how we will react?

Yes. God knows everything we have done or everything that we are going to do. But that is His knowledge which He has not shared with us. We are being tested by the set of instructions given to us. Just because the Testing authority has the knowledge of the ultimate result of the test, the test itself does not lose its relevance. The person being tested deserves an opportunity to to prove what he is worth by undergoing a course of test.
Let us imagine a scenario on the day of Judgement:
A punishment is declared against a person for having violated a particular decree issued by God.
The person asks God: You knew very well even before creating me that I am going to violate this law. Now why are you holding me responsible for this act?
God will say: Did I give you the book of my knowledge about you  and your deeds?
The person: No.
God: Therefore you can not say now that you committed that act because it was in your destiny or that I knew about it in advance. Tell me now whether anybody compelled you to commit that act?
The person: No.
God: Did you not know through the book of guidance provided by Me that committing this act is a sin?
The Person: Yes I knew.
God: The book of your destiny was not accessible to you. You never knew what that particular sin was written in your book of destiny until you committed that sin. It was the book of my guidance that was available to you.  Don't you deserve a punishment for violating the dictate of that book ? By your own free will you have violated the law given to you and that is reason enough to hold you accountable.


9. How do Muslims view the Torah (like how much is seen as corrupted)?

We do not know exactly what percentage of the Torah or the Old Testament has been corrupted. When it comes to determine what is right and what is wrong we consider Quran as the reliable Criterion and judge older scriptures on the basis of Quran. A lot of research conducted by Christian scholars is available to know more about the extent of corruption in the OT.
Eg:https://www.quora.com/Who-corrupted-the-original-Old-Testament-text#
http://www.answering-christianity.com/sake12.htm


10. Why does God wait hundreds of years between messengers?

I don't think he does so. In fact, during many phases of history, the prophets were sent in quick succession. In fact history is witness to instances when there were many prophets during the same period of time in different regions. Ultimately I think it is god's wisdom that is more reliable regarding the timings of the appointment of His messengers.


11. If humans are created to worship God but serve others doesn't that make God selfish? 

The question is not very clear to me. If a person tells his children, Call me alone as your Father and don't call anybody else as Father, I don't see any element of selfishness in it.   Because It is only a statement of truth. One appoints a servant and expects to be served by him exclusively, there is nothing wrong.


12. Why have a hell as opposed to just reforming corrupted souls?

God does not pack a person and throw him to hell just because he has committed a few sins. In fact in this world God provides hundreds of opportunities to every individual to get reformed. Even at the age of 100, a person has the door of repentance open before him. If a person consistently commits sins for a hundred year and just a few moments  before his death, he repents for those sins and submits himself in humility before God, God will forgive his sins and protects him from hell. Now, in spite of all these opportunities somebody refuses to avail them and is hell bent upon treading the path of hell, don't you think he deserves that destination of his choice?


 13. Why would God create people basically attracted to those of the same sex but not want them to act on it?

Life is all about doing what has been commanded and only that which has been permitted by God and restraining from everything that has been prohibited by him. Even in case of Men and women belonging to distinctly opposite sex and having attraction towards the opposite sex, they are bound by an elaborate set of rules, regulations and restrictions. They are not absolutely free to indulge in sex the way they wish. Sex is permitted only within the framework of marriage between persons belonging to two distinctly opposite genders. Very few in this world are born with abnormal physical disabilities or abnormal psychological tendencies. Inability to be attracted towards the opposite sex in one such disability. Just like blindness, deafness and such other conditions this too is a test from God both for the person suffering and those around him. God never commits injustice. He has his own ways to  compensate people born with disabilities or those who were disabled at some later stage in life. This world is not the final abode of human beings. This is only an interim abode. A period of test which will be over very fast. The next world is the real world. Those who strive their best to abide by the rules given by God for this world, will be free from all disabilities in the next world apart from being rewarded for their good deeds they will be generously compensated for the disabilities they suffered in this world. Their reward and compensation will be such that every able bodied person will envy them.

“Allah does not burden a soul beyond that it can bear…” (Qur’an, 2:286).

Jabir ibn Abdullah narrated that Allah’s Messenger (s) said, “On the Day of Resurrection, when people who have suffered affliction are given their reward, those who are healthy will wish their skins had been cut to pieces with scissors when they were in the world.” (Al-Tirmidhi, 1570)


 14. Which hadiths are the most respected?

There are specific tests to judge the degree of authenticity of each Hadith. Hadith that are identified as Saheeh and Mutawatir are graded as the most authentic.

ನ್ಯಾಯಾಲಯವೇ 'ಗೇ' ರಕ್ಷಣೆಗಿಳಿದರೆ ಹೇಗೆ?

ಕಾಂಡೋಮ್ ಕೇಂದ್ರಿತ ಸಲಿಂಗ ವೈಭವದ ಟೊಳ್ಳುತನ ಮತ್ತು ಅಪಾಯಗಳು 

ನಿಮ್ಮ ಲಿಂಗ (gender) ಇರುವುದು ನಿಮ್ಮ ಎರಡು ಕಾಲುಗಳ ಮಧ್ಯೆ, ನಿಮ್ಮ ಲೈಂಗಿಕತೆ (sex) ಇರುವುದು ನಿಮ್ಮ ಎರಡು ಕಿವಿಗಳ ಮಧ್ಯೆ .   

ವ್ಯಕ್ತಿಗತವಾದ ಹಾಗೂ  ಬಲವಂತವಿಲ್ಲದ  ಲೈಂಗಿಕ ಅಥವಾ ಕಾಮ ಸಂಬಂಧಿ ಚಟುವಟಿಕೆಗಳು ಯಾವ ಸ್ವರೂಪದಲ್ಲಿದ್ದರೂ ಆ ಕುರಿತು ಸಮಾಜವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸಾಮಾನ್ಯ ಸ್ಥಿತಿಯಲ್ಲಿ, ಕಾಮದ ವಿಷಯದಲ್ಲಿ, ಯಾವ ವ್ಯಕ್ತಿ ವೈಯಕ್ತಿಕವಾಗಿ ಎಂತಹ ಒಲವು ಉಳ್ಳವನು ಎಂಬ ಬಗ್ಗೆ ಬೇಹುಗಾರಿಕೆ ನಡೆಸುವ ಅಗತ್ಯವಿಲ್ಲ. ಯಾರೂ ಇನ್ನೊಬ್ಬರ  ಖಾಸಗಿ ಬದುಕಿನೊಳಗೆ ಮೂಗು ತೂರಿಸಬೇಕಾಗಿಲ್ಲ. ಇನ್ನೊಬ್ಬರ ಬೆಡ್ ರೂಮ್ ನೊಳಗೆ ಇಣುಕಿ ನೋಡ ಬೇಕಾಗಿಲ್ಲ. ನೈತಿಕ ದೃಷ್ಟಿಯಿಂದ ಯಾವುದು ಸದಾಚಾರ ಮತ್ತು ಯಾವುದು ದುರಾಚಾರ ಎಂಬುದನ್ನು ಸಮಾಜಕ್ಕೆ ನೆನಪಿಸುತ್ತಲಿದ್ದರೆ ಸಾಕು. ಹಾಗೆಯೇ ವಿವಿಧ ದುರಾಚಾರಗಳ ವಿವಿಧ ದುಷ್ಪರಿಣಾಮಗಳ ಬಗ್ಗೆ ಸಮಾಜವನ್ನು ಎಚ್ಚರಿಸುತ್ತಲಿದ್ದರೆ ಸಾಕು. ವ್ಯಕ್ತಿಗತ ದುರಾಚಾರಗಳನ್ನು ಸಮೂಹದಮೇಲೆ ಹೇರುವ ಶ್ರಮಗಳು ನಡೆಯದಂತೆ ನೋಡಿಕೊಂಡರೆ ಸಾಕು. ಇದು ಎಲ್ಲ ನಾಗರಿಕ ಸಮಾಜಗಳಲ್ಲಿ ಎಲ್ಲ ಕಾಲಗಳಲ್ಲೂ  ಪಾಲಿಸಲಾಗಿರುವ ಒಂದು ಸರಳ ನಿಯಮ. ಇದಕ್ಕೆ ಅಪವಾದಗಳೂ ಇದ್ದವು.  ಅಸ್ವಸ್ಥತೆಗಳು, ತೀವ್ರವಾದಿ ನಿಲುವುಗಳು, ಅಸಮತೋಲನಗಳು ವಿವಿಧ ಪ್ರಮಾಣಗಳಲ್ಲಿ ಆಂಶಿಕ ಅನಿಷ್ಟಗಳಾಗಿ ಎಲ್ಲ ಸಮಾಜ ಮತ್ತು ಎಲ್ಲ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು.  ಆದರೆ  ಇದೀಗ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ಸ್ಪರ್ಧಿಸಲಿಕ್ಕೋ ಎಂಬಂತೆ ನೈತಿಕ ಮತ್ತು ಸಾಮಾಜಿಕ ನಿಯಮಗಳು, ಹಿತ - ಅಹಿತದ ಮಾನದಂಡಗಳು ಕೂಡಾ ಕ್ಷಿಪ್ರವಾಗಿ ಬದಲಾಗುತ್ತಿವೆ. ಆಹಾರಕ್ಕಿಂತ ಕಾಮವು ಹೆಚ್ಚು ಚರ್ಚೆಯಲ್ಲಿದೆ. ಉದ್ಯಮ, ಉದ್ಯೋಗ,ವೃತ್ತಿ, ಕೃಷಿ, ವ್ಯವಸಾಯ, ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇತ್ಯಾದಿಗಳ ಕುರಿತಾದ ಚರ್ಚೆಗೆ ಮೀಸಲಿದ್ದ ಜಾಗವನ್ನೆಲ್ಲ ಕಾಮ ಮತ್ತು ಲೈಂಗಿಕತೆಯ ಕುರಿತಾದ ಆಲಾಪಗಳು ಕಬಳಿಸುತ್ತಿವೆ. ಅಪವಾದ ಸ್ವರೂಪದ ಅಸ್ವಾಸ್ಥ್ಯ ಗಳನ್ನು ಎಷ್ಟು ಪರಿಣಾಮಕಾರಿಯಾಗಿ ಸಮಾಜದ ಪ್ರಧಾನಧಾರೆಗೆ ತರಲಾಗುತ್ತಿದೆ ಎಂದರೆ, ಅಸ್ವಸ್ಥರನ್ನು ತಿದ್ದಲು ಹೊರಟಿದ್ದ ಕೆಲವು ಸ್ವಸ್ಥರು, ತಾವು ನಿಜಕ್ಕೂ ಸ್ವಸ್ಥರೇ ಎಂದು ಸ್ವತಃ ತಮ್ಮ ಸ್ವಾಸ್ಥ್ಯದ ಕುರಿತು ಸಂಶಯ ಪಟ್ಟುಕೊಳ್ಳುವಂತಾಗಿದೆ. 

ಒಂಟಿಯಾಗಿದ್ದ  'ಜಿ' (G) ಕ್ರಮೇಣ LGBTQQIAAP +  ಸಮುದಾಯವಾಗಿ ಬೆಳೆದದ್ದು ಮತ್ತು ಮಿತಿಮೀರಿ ಬೆಳೆಯುತ್ತಿರುವುದು  

ನಮ್ಮ ಸಮಕಾಲೀನ ಸಮಾಜದಲ್ಲಿ ಸಂವಾದಗಳು ರೂಪುಗೊಳ್ಳುವ ಮತ್ತು ಕ್ರಮೇಣ ಸಾಮೂಹಿಕ ಅಭಿರುಚಿ, ಸಂಸ್ಕೃತಿ, ಕಾನೂನು ಇತ್ಯಾದಿ ಎಲ್ಲವನ್ನೂ ಆವರಿಸಿ ಕೊಳ್ಳುವ ಪ್ರಕ್ರಿಯೆ ಬಹಳ ಗಮನಾರ್ಹವಾಗಿದೆ. ಕೆಲವೇ ದಶಕಗಳ ಹಿಂದೆ ಏಡ್ಸ್ ರೋಗದ ಹಿನ್ನೆಲೆಯಲ್ಲಿ ಪುರುಷರ ಸಲಿಂಗಕಾಮ ಅಥವಾ 'ಗೇ' ಕಾಮ  ಚರ್ಚೆಗೆ ಬಂತು. ಏಡ್ಸ್ ಪೀಡಿತರ ಪೈಕಿ ಸಲಿಂಗಿ ಪುರುಷರ ಅನುಪಾತ ತುಂಬಾ ಅಧಿಕವಾಗಿರುವುದು ಪದೇ ಪದೇ ಸಾಬೀತಾಗಿ, ಸಲಿಂಗ ಕಾಮದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳತೊಡಗಿತು. ಆದರೆ ಕ್ರಮೇಣ ಜನರನ್ನು ಏಡ್ಸ್ ಮತ್ತಿತರ ಸೋಂಕುಗಳಿಂದ ರಕ್ಷಿಸುವ ಹೊಣೆಯನ್ನು ಸಂಪೂರ್ಣವಾಗಿ ಕಾಂಡೋಮ್ ಗಳಿಗೆ ವಹಿಸಿಕೊಡಲಾಯಿತು. ಕಾಂಡೋಮ್ ಧರಿಸಿಕೊಂಡು ಯಾವ ಬಗೆಯ ಕಾಮ ಕೇಳಿ ನಡೆಸಿದರೂ ಯಾವುದೇ ರೋಗ ಬಾಧಿಸುವುದಿಲ್ಲ ಎಂಬ ನಂಬಿಕೆ ವ್ಯಾಪಕವಾಯಿತು. ಶಕ್ತಿ ಸಂಪನ್ಮೂಲಗಳನ್ನೆಲ್ಲ  ಕಾಂಡೋಮ್ ಗಳ  ಪರ ಪ್ರಚಾರಕ್ಕೆ ಮೀಸಲಿಡಲಾಯಿತು. ಜಗತ್ತಿನ ವಿವಿಧೆಡೆಯ ಸರಕಾರಗಳು ಏಡ್ಸ್ ವಿರುದ್ಧ ಜಾಗೃತಿಗಾಗಿ ಜಾಹೀರಾತು ಗಳನ್ನು ಪ್ರಕಟಿಸತೊಡಗಿದವು. ಆ ಜಾಹೀರಾತುಗಳೆಲ್ಲಾ ಕಾಂಡೋಮ್ ಕೇಂದ್ರಿತವಾಗಿದ್ದವು. ಅಲ್ಲಿ ಶಾರೀರಿಕ ಹಾನಿ ಮತ್ತು ಸುರಕ್ಷೆಯ ಚರ್ಚೆ ಇತ್ತೇ ಹೊರತು ಚಾರಿತ್ರ್ಯ, ನೈತಿಕತೆ, ಕುಟುಂಬ ವ್ಯವಸ್ಥೆ, ಸಾಮಾಜಿಕ ಹಿತಾಸಕ್ತಿ  ಇತ್ಯಾದಿ ಆಯಾಮಗಳ ಪ್ರಸ್ತಾಪವೇ ಇರಲಿಲ್ಲ. ಇದರ ಜೊತೆ ಜೊತೆಗೇ ಸಮಾಜದಲ್ಲಿ, ಏಡ್ಸ್  ಅನ್ನು ತಡೆಯಲು ಕಾಂಡೋಮ್ ಎಂಬ ಬ್ರಹ್ಮಾಸ್ತ್ರ ವಿರುವಾಗ ಸುಮ್ಮ ಸುಮ್ಮನೆ ಸಲಿಂಗ ಕಾಮವನ್ನು ಯಾಕೆ ವಿರೋಧಿಸಬೇಕು ? ಎಂಬ ಪ್ರಶ್ನೆ ಜನಪ್ರಿಯವಾಗ ತೊಡಗಿತು. ಕ್ರಮೇಣ 'ಗೇ'  ಗಳ ಕುರಿತು ಅವರು ಅನಗತ್ಯವಾಗಿ ನಿಂದನೆಗೆ ತುತ್ತಾದವರು ಎಂಬ ಸಹಾನು ಭೂತಿಯ ಮಾತುಗಳು ಕೇಳಿ ಬರಲಾರಂಭಿಸಿದವು.

ಪುರುಷ ಪ್ರಧಾನವಾದ 'ಗೇ' ಸಂಸ್ಕೃತಿಗೆ ಗೌರವ ಮತ್ತು ಸಮತೋಲನ ತಂದು ಕೊಡಲು ಲೆಸ್ಬಿಯನ್ (Lesbian)  ಅಥವಾ ಸ್ತ್ರೀ ಸಲಿಂಗ ಸಂಸ್ಕೃತಿಯನ್ನು ಚರ್ಚೆಗೆ ತರಲಾಯಿತು, G ಜೊತೆಗೆ L  ಸಂಸ್ಕೃತಿಯನ್ನು ಸೇರಿಸಿ ಅವೆರಡಕ್ಕೂ ಮಾನ್ಯತೆ ದೊರಕಿಸುವ ಶ್ರಮ ಆರಂಭವಾಯಿತು. ಸಲಿಂಗಿಗಳು ಯಾವುದೇ ಬಗೆಯ ಕೀಳರಿಮೆಗೆ ತುತ್ತಾಗಬೇಕಾಗಿಲ್ಲ ಎಂಬ ಸಾಂತ್ವನದ ಅಭಿಯಾನ ಬಿರುಸಾಗಿ ನಡೆಯಿತು. 'ನಾನು G' ಅಥವಾ 'ನಾನು L' ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ಹೊಸ ಫ್ಯಾಶನ್ ಪರ್ವ ಆರಂಭವಾಯಿತು. ಇದೀಗ ಅಂತಹ ಅಸ್ವಾಭಾವಿಕ ಗುರುತುಗಳು L ಮತ್ತು G ಗೆ ಸೀಮಿತವಾಗಿ ಉಳಿಯದೆ  LGBTQQIAAP ಎಂಬ ಹತ್ತು ವಿಭಿನ್ನ ಗುರುತುಗಳಾಗಿ ಬೆಳೆದಿದೆ, ಬೆಳೆಯುತ್ತಲೇ ಇದೆ. ಅಸಹಜ, ಅಸ್ವಾಭಾವಿಕಗಳೆಲ್ಲ ಸಹಜ ಹಾಗೂ ಸ್ವಾಭಾವಿಕಗಳ ವ್ಯಾಪ್ತಿಯೊಳಗೆ ನುಸುಳಿಕೊಂಡು ನೆಲೆಯೂರುತ್ತಿವೆ. ವಿಪರ್ಯಾಸದ ಬೆಳವಣಿಗೆಯೇನೆಂದರೆ ಏಡ್ಸ್ ಎಂಬ ಮಹಾಮಾರಿ ಮಾನವ ಕುಲವನ್ನು ಬಾಧಿಸುತ್ತಲೇ ಇದೆ. ಆದರೆ ಕೆಲವು ದಶಕಗಳ ಹಿಂದೆ ಏಡ್ಸ್ ವಿರುದ್ಧ ಆರಂಭವಾಗಿದ್ದ ಜಾಗೃತಿ ಅಭಿಯಾನ ಇದೀಗ ತನ್ನ ಬಿರುಸು ಕಳೆದುಕೊಂಡು ಬಹಳಷ್ಟು ತಣ್ಣಗಾಗಿ ಬಿಟ್ಟಿದೆ. ಈ ಬೆಳವಣಿಗೆಗೆ ಸಮಾನಾಂತರವಾಗಿ 'ಗೇ' ಗಳನ್ನು ಗೌರವಿಸಬೇಕೆಂಬ ಅಭಿಯಾನ ತುಂಬಾ ಚುರುಕಾಗಿ ಬಿಟ್ಟಿದೆ. 'ಗೇ' ಗೌರವ ಎಂಬುದು ವ್ಯಾಪಕ ಮಾನ್ಯತೆ ಇರುವ ಫ್ಯಾಶನ್ ಆಗಿಬಿಟ್ಟಿದೆ.

ಫ್ಯಾಶನ್ ಸಾಮಾನ್ಯವಾಗಿ ಪಶ್ಚಿಮದ ಯಾವುದಾದರೂ ಮೂಲೆಯಲ್ಲಿ ಜನ್ಮ ತಾಳುತ್ತದೆ, ಬಹುಬೇಗನೆ ಪೂರ್ವದವರು ಭಕ್ತಿಪೂರ್ವಕ ಅದನ್ನು ಸ್ವೀಕರಿಸುತ್ತಾರೆ. ಹಲವೊಮ್ಮೆ ಪಶ್ಚಿಮದವರು ಒಂದು ಫ್ಯಾಶನ್ ಅನ್ನು ಬಿಟ್ಟು ದಶಕಗಳು ಉರುಳಿದರೂ ಪೌರ್ವಾತ್ಯರಾದ ನಾವಿಲ್ಲಿ ಬಹಳ ವಿಧೇಯವಾಗಿ ಅದಕ್ಕೆ ಅಂಟಿಕೊಂಡಿರುತ್ತೇವೆ. ನಮ್ಮಲ್ಲಿ ಶ್ರೀಮಂತರು ಅಥವಾ ತುಸು ಅನುಕೂಲಸ್ಥರು, ತಾವು ಧರಿಸಿರುವ ಬಟ್ಟೆಯ ಒಂದು ನೂಲು ಎದ್ದರೂ ಸಾಕು, ಮತ್ತೆ ಆ ಬಟ್ಟೆಯನ್ನೆಂದೂ ಧರಿಸುವುದಿಲ್ಲ. ಆದರೆ ಪಶ್ಚಿಮ ದವರು ಅಲ್ಲಲ್ಲಿ ಹರಿದಿರುವ ಜೀನ್ಸ್ ಪ್ಯಾಂಟ್ ಧರಿಸುವುದನ್ನು ಫ್ಯಾಶನ್ ಎಂದು ಸಾರಿದ್ದೇ ತಡ, ಇಲ್ಲಿಯ ನಮ್ಮ ಅನುಕೂಲಸ್ಥ ಯುವಕರು ತಮ್ಮ ಪ್ಯಾಂಟುಗಳನ್ನು ಕಂಡ ಕಂಡಲ್ಲಿ ಹರಿದು ಧರಿಸಲಾರಂಭಿಸುತ್ತಾರೆ.  ಹರಿದು ಚಿಂದಿಯಾದ ಅಥವಾ ಅಲ್ಲಲಿ ತೇಪೆ ಹಾಕಿದ ಅಥವಾ ಬಣ್ಣ ತೀರಾ ಮಸುಕಾಗಿ (Fade) ಹಳತಾಗಿ ಕಾಣುವ ಹೊಸ ಪ್ಯಾಂಟುಗಳನ್ನು ಸಾವಿರಾರು ರೂಪಾಯಿ ಕೊಟ್ಟು, ಖರೀದಿಸುತ್ತಾರೆ.

ತಡವಾದ ಅನುಕರಣೆ 

ಹಾಗೆಂದು ಎಲ್ಲ ಫ್ಯಾಶನ್ ಗಳನ್ನೂ  ಚುರುಕಾಗಿ ತತ್ ಕ್ಷಣವೇ  ಸ್ವೀಕರಿಸಲು ನಮಗೆ ಸಾಧ್ಯವಾಗುವುದಿಲ್ಲ. ಕೆಲವು ವಿಷಯಗಳಲ್ಲಿ ನಾವು ತುಸು ಮಂದಗತಿಯಲ್ಲಿ ಹೆಜ್ಜೆ ಇಡುತ್ತೇವೆ. ಉದಾಹರಣೆಗೆ ಸಲಿಂಗ ಕಾಮದ ವಿಷಯವನ್ನೇ ನೋಡಿ. ಆ ಕುರಿತು ಯು ಎಸ್ ಎ ಯಲ್ಲಿನ ನ್ಯಾಯಾಧೀಶರು 15 ವರ್ಷಗಳ ಹಿಂದೆ ನೀಡಿದ ತೀರ್ಪೊಂದನ್ನು ಭಾರತೀಯ ನ್ಯಾಯಾಂಗವು ತೀರಾ ಇತ್ತೀಚಿಗೆ ಆಮದು ಮಾಡಿಕೊಂಡಿದೆ. ಸಲಿಂಗ ಕಾಮ ಅಪರಾಧವಲ್ಲ ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯವು ಸಾರಿದೆ. ಅಚ್ಚರಿಯ ಸಂಗತಿ ಏನೆಂದರೆ, ಬಹಳ ಮಹತ್ವದ ಈ ತೀರ್ಪಿನ ಕುರಿತಂತೆ  ಯಾವುದೇ ಗಣ್ಯ ಮಟ್ಟದ ಪ್ರತಿಕ್ರಿಯೆ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ  ಪ್ರಕಟವಾಗಲಿಲ್ಲ. ಧರ್ಮ, ಆಧ್ಯಾತ್ಮ, ನಂಬಿಕೆ, ಧ್ಯಾನ, ಇತ್ಯಾದಿಗೆ ಸಂಬಂಧಿಸಿದ ಭಾವನೆಗಳು, ಸಂಕೇತಗಳು ಹಾಗೂ ಗದ್ದಲಗಳು ಸದಾ ತುಂಬಿ ತುಳುಕುತ್ತಿರುವ  ನಮ್ಮ ಮಡಿವಂತ ಸಮಾಜವು ಆ ತೀರ್ಪು ನಮಗೆ ಸಂಬಂಧಿಸಿದ್ದೇ  ಅಲ್ಲವೆಂಬಂತೆ  ನಿರ್ಲಿಪ್ತ ನಿಲುವು ತಾಳಿ ಬಿಟ್ಟಿತು. 

ಕೆಲವರ ಸಡಗರ , ಉಳಿದವರ ನಿಗೂಢ ನಿರ್ಲಿಪ್ತತೆ 

ನಿಜವಾಗಿ ಸುಪ್ರೀಂ ಕೋರ್ಟಿನ ಆ ತೀರ್ಪು  ಫ್ಯಾಶನ್ ನ ವ್ಯಾಪ್ತಿಗೆ ಮೀರಿದ, ತುಂಬಾ ಗಾಢವಾದ, ದೂರಗಾಮಿ ಪರಿಣಾಮಗಳಿರುವ ತೀರ್ಪಾಗಿತ್ತು. ಪ್ರಕೃತಿ, ಧರ್ಮ, ಸಮಾಜ, ನೈತಿಕತೆ, ಚಾರಿತ್ರ್ಯ, ಆರೋಗ್ಯ , ಸಂಬಂಧಗಳು, ಬಾಂಧವ್ಯಗಳು ಹೀಗೆ ಹಲವನ್ನು ಬಾಧಿಸುವ ತೀರ್ಪು. ಆ  ತೀರ್ಪಿನ ಸಮಗ್ರ ಮಹತ್ವಕ್ಕೆ ಹೋಲಿಸಿದರೆ ಅದಕ್ಕೆ ಪ್ರಕಟವಾದ ಪ್ರತಿಕ್ರಿಯೆ ತೀರಾ ನೀರಸ ಹಾಗೂ ಕ್ಷೀಣವಾಗಿತ್ತು. ಸುಪ್ರೀಂ ಕೋರ್ಟಿನ ಈ ತೀರ್ಪು ಪ್ರಕಟವಾದ ಬೆನ್ನಿಗೆ ಅದರ 'ನೇರ ಫಲಾನುಭವಿ' ಗಳಾದ ಒಂದಷ್ಟು ಮಂದಿ ಯಾವುದೋ ವಿಶ್ವ  ಕಪ್ ಮ್ಯಾಚು ಗೆದ್ದಾಗ ಸಂಭ್ರಮಿಸುವಂತೆ ಸದ್ದು ಗದ್ದಲದೊಂದಿಗೆ ಸಂಭ್ರಮಿಸಿದ್ದಾರೆ, ಹರ್ಷ ಪಟ್ಟಿದ್ದಾರೆ. ಬೀದಿಗಳಲ್ಲಿ ನಲಿದಾಡಿದ್ದಾರೆ. ಆದರೆ ಉಳಿದವರ ಕಥೆ ಏನು? ಅವರೆಲ್ಲಾ ಮೌನವಾಗಿ ಸಂತೋಷ ಆಚರಿಸಿದರೆ? ಈ ತೀರ್ಪಿನ ಬಗ್ಗೆ ಯಾರಿಗೆ ಏನು ಅನಿಸಿತು? ಯಾರು ಯಾವ ರೀತಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿದರು ? ಅಥವಾ ಯಾರು ಎಷ್ಟು ನಾಜೂಕಾಗಿ ತಮ್ಮ ಅಭಿಮತವನ್ನು ಬಚ್ಚಿಟ್ಟುಕೊಂಡರು ? ಅವರು  ತಮ್ಮ ಅನಿಸಿಕೆಗಳನ್ನು ಆ ರೀತಿ ಯಾಕೆ ಬಚ್ಚಿಟ್ಟು ಕೊಂಡರು?   ಇವೆಲ್ಲಾ  ನಿಜಕ್ಕೂ ಕುತೂಹಲದ ವಿಷಯಗಳು. 

ಗಮ್ಮತ್ತೆಂದರೆ ಶತಮಾನಗಳಿಂದ ಸಲಿಂಗ ಕಾಮವನ್ನು  ಅದು ಅನೈತಿಕ, ಅಸ್ವಾಭಾವಿಕ, ಹೊಲಸು, ಅಮಾನುಷ, ಲಜ್ಜಾಹೀನ ಎಂದೆಲ್ಲ  ನಿಂದಿಸುತ್ತಾ ಅದರ ವಿರುದ್ಧ ಉಪದೇಶ ನೀಡುತ್ತಾ ಬಂದಿರುವ ನಮ್ಮಲ್ಲಿನ  ಹಲವು ಪ್ರಮುಖ ಧರ್ಮಗಳ ವಕ್ತಾರರು ಕೂಡಾ ಪ್ರಸ್ತುತ ಸುಪ್ರೀಂ ಕೋರ್ಟ್ ತೀರ್ಪಿನ ವಿಷಯದಲ್ಲಿ ಮೌನ ತಾಳಿದರು. ಮಾತು ಮಾತಿಗೆ ಧರ್ಮ ರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವವರು ಈ ವಿಷಯದಲ್ಲಿ ತಾಳಿರುವ ಮೌನ ಅಚ್ಚರಿ ಮೂಡಿಸುತ್ತದೆ. ಅವರು ಈ ವಿಷಯದಲ್ಲಿ ಪ್ರತಿಭಟಿಸುವುದು ಬಿಡಿ, ಈ ಕುರಿತು ಚರ್ಚಿಸುವುದಕ್ಕೂ ಬೀದಿಯ ಹತ್ತಿರ ಸುಳಿಯದಿರುವುದು ನಿಗೂಢವಾಗಿದೆ. ನೈತಿಕತೆಯ ರಕ್ಷಣೆಯ ಹೆಸರಲ್ಲಿ, ಬೀದಿಯಲ್ಲಿ ನಡೆದಾಡುವ ಯುವಕ ಯುವತಿಯರ ಧರ್ಮ, ಜಾತಿ ಇತ್ಯಾದಿಗಳ ಬಗ್ಗೆ ತನಿಖೆ ನಡೆಸಿ, ಅಲ್ಲೇ ವಿಚಾರಣೆಯನ್ನೂ ನಡೆಸಿ, ಅವರು ವಾಗ್ದಂಡ, ನಿಂದನೆ, ಹಲ್ಲೆ, ವಿವಸ್ತ್ರ, ಮರಣ ದಂಡನೆ ಇತ್ಯಾದಿಗಳ ಪೈಕಿ ಯಾವ ಶಿಕ್ಷೆಗೆ ಅರ್ಹರೆಂಬುದನ್ನೂ ಅಲ್ಲೇ ತೀರ್ಮಾನಿಸಿ ಅಲ್ಲೇ ಶಿಕ್ಷೆಯನ್ನೂ  ಘೋಷಿಸಿ ಅದನ್ನು ಜಾರಿಗೊಳಿಸಿಯೂ ಬಿಡುವ ನಮ್ಮ ಅತಿ ಸಂವೇದನಾ ಶೀಲ ಧರ್ಮ ವೀರರು ಕೂಡಾ  ಸಲಿಂಗ ಕಾಮವನ್ನು ಸಕ್ರಮಗೊಳಿಸುವ ತೀರ್ಪಿಗೆ ಮೌನ ಸಮ್ಮತಿ ನೀಡಿದರು. ಗೋ ರಕ್ಷಕರು  ಕೂಡಾ ಪರೋಕ್ಷವಾಗಿ 'ಗೇ'  ರಕ್ಷಕರಾಗಿ ಮಾರ್ಪಟ್ಟರು.

ಕ್ಷಮಾಪಣೆಯ  ವರಸೆ 

ಕಳೆದ ಕೆಲವು ವರ್ಷಗಳಿಂದ ಕೆಲವರು  'LGBTQ ಗಳ ಹಕ್ಕುಗಳು' ಎಂಬ ಹೆಸರಲ್ಲಿ ಒಂದು ಉದ್ದದ ಪಟ್ಟಿ ರಚಿಸಿ, ಅವುಗಳ ಪರ ವಕಾಲತ್ತು ನಡೆಸುತ್ತಿದ್ದರು. ಕಾಲಕ್ರಮೇಣ ಅವರಿಗೆ, ತಮ್ಮ ಚಟುವಟಿಕೆಯನ್ನು ಫ್ಯಾಶನ್ ನ ವ್ಯಾಪ್ತಿಗೆ ಸೇರಿಸಲು ಸಾಧ್ಯವಾಯಿತು. . ಒಂದು ವಸ್ತು ಫ್ಯಾಶನ್ ಆಗಿ ಬಿಟ್ಟಿತೆಂದರೆ ಮತ್ತೆ ಅದನ್ನು ವಿರೋಧಿಸುವುದು ಸುಲಭದ ಕೆಲಸವೇನಲ್ಲ. ಆದ್ದರಿಂದಲೇ,  ಖಾಸಗಿಯಾಗಿ ಸಲಿಂಗ ಕಾಮದ ವಿರುದ್ಧ ತುಂಬಾ ಖಾರವಾಗಿಯೇ ಮಾತನಾಡುತ್ತಿದ್ದ ಅಥವಾ ಆಕುರಿತು ಮಾತನಾಡಿದರೆ ವಾಕರಿಕೆ ಬರುತ್ತದೆ ಎಂಬ ಕಾರಣಕ್ಕಾಗಿ ಮಾತನಾಡಲು ಮುಜುಗರ ಪಡುತ್ತಿದ್ದ ಹಲವರ ಧಾಟಿ ಬದಲಾಗಿದೆ. ಅವರಲ್ಲಿ ಅನೇಕರು ಇದೀಗ ಸಾರ್ವಜನಿಕವಾಗಿ ಬೇರೆಯೇ ನಿಲುವು ಪ್ರಕಟಿಸುತ್ತಿದ್ದಾರೆ ಅಥವಾ ತಮ್ಮ ನೈಜ ನಿಲುವು ಎಲ್ಲಿ ಜನರಿಗೆ ತಿಳಿದು ಬಿಡುತ್ತದೋ ಎಂದು ಅಳುಕುತ್ತಿದ್ದಾರೆ. ಅವರ ಧ್ವನಿಯಲ್ಲಿ ರಾಜಿ, ಹಿಂಜರಿಕೆ  ಮಾತ್ರವಲ್ಲ ಕ್ಷಮಾಪಣೆಯ ಧಾಟಿ ಎದ್ದು ಕಾಣುತ್ತಿದೆ. 'ಗೇ' ರಕ್ಷಣೆ ಎಂಬುದು ಜಾಗತಿಕ ಮಟ್ಟದಲ್ಲಿ ಫ್ಯಾಶನ್  ಆಗಿ ಬಿಟ್ಟಿದೆ ಎಂದು ಅವರು ನಂಬಿರುವುದರಿಂದ ಆ ಕುರಿತು ಪ್ರತಿಕೂಲವಾಗಿ ಮಾತನಾಡಿದರೆ ಎಲ್ಲಿ ಯಾರಾದರೂ ತಮ್ಮನ್ನು ಔಟ್ ಆಫ್ ಫ್ಯಾಶನ್ ಎಂದು ಬ್ರಾಂಡ್ ಮಾಡಿ ಬಿಡುತ್ತಾರೋ ಎಂದು ಅವರು ಅಂಜುತ್ತಿದ್ದಾರೆಂಬುದು ಸ್ಪಷ್ಟವಾಗಿದೆ.

ಪ್ರತಿರೋಧ ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧವಲ್ಲ.  

ಸಲಿಂಗ ಕಾಮದ ಘೋರ ಅಪಾಯಗಳ ಬಗ್ಗೆ ಜಾಗೃತಿ ಇರುವವರು ಆ ಕುರಿತು ಸಾಮಾಜಿಕ ಜಾಗೃತಿ ಬೆಳೆಸಲು ಶ್ರಮಿಸುವುದು ಸಹಜ. ಆದ್ದರಿಂದಲೇ  ಸಲಿಂಗ ಕಾಮದ ವಿರುದ್ಧ ಪ್ರತಿರೋಧ ಎಲ್ಲ ಸ್ವಸ್ಥ ಸಮಾಜಗಳಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಇದೀಗ, ಸಲಿಂಗಕಾಮಕ್ಕೆ ಗೌರವ ಕೊಡಿಸುವ ಶ್ರಮವು ಜಾಗತಿಕ ಮಟ್ಟದಲ್ಲಿ ಬಹಳ ಸಂಘಟಿತವಾಗಿ ನಡೆಯುತ್ತಿರುವುದರಿಂದ ಅಂತಹ ಶಮಗಳ ವಿರುದ್ಧವೂ ಪ್ರತಿರೋಧ  ಪ್ರಕಟವಾಗುತ್ತಿದೆ. ನಿರ್ಮಲ ವಸ್ತುವಿಗೆ ಕಳಂಕ ಅಂಟಿದರೆ ಅದನ್ನು ಕಳಂಕ ಮುಕ್ತಗೊಳಿಸಲು ಶ್ರಮಿಸಬಹುದು. ಆದರೆ ಸಾಕ್ಷಾತ್ ಕಳಂಕವನ್ನು ಕಳಂಕ ಮುಕ್ತಗೊಳಿಸಲಿಕ್ಕಾಗುವುದಿಲ್ಲ. ಆದ್ದರಿಂದಲೇ ಸಲಿಂಗ ಕಾಮವನ್ನು ಕಳಂಕ ಮುಕ್ತಗೊಳಿಸಲು ನಡೆಯುವ ಎಲ್ಲ ಶ್ರಮಗಳ ಮೇಲೆ ಕಣ್ಣಿಟ್ಟು ಅವುಗಳನ್ನು ಸೋಲಿಸಬೇಕಾದುದು ತಮ್ಮ ಕರ್ತವ್ಯವಾಗಿದೆ ಎಂದು ಸ್ವಸ್ಥ ಸಮಾಜದ ಸದಸ್ಯರು ಹಾಗೂ ಸಾಮಾಜಿಕ ಸ್ವಾಸ್ಥ್ಯದ ಪ್ರತಿಪಾದಕರು ನಂಬಿದ್ದಾರೆ. ಜಗತ್ತಿನಲ್ಲಿ ಹಲವೆಡೆ ಸಲಿಂಗ ಕಾಮದ ವಿರುದ್ಧ ಅಭಿಯಾನಗಳು  ಹಿಂಸಾತ್ಮಕ ರೂಪ ತಾಳಿ ಹಲವು ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ. ನಿಜವಾಗಿ ಸಲಿಂಗ ಕಾಮದ ಹಾನಿಗಳನ್ನು ಬಲ್ಲವರು ಯಾರೂ ಅದನ್ನು ಪ್ರತಿರೋಧಿಸದೆ ಇರಲು ಸಾಧ್ಯವಿಲ್ಲ. ಆದರೆ ಈ ಪ್ರತಿರೋಧವು ಚರ್ಚೆ, ಸಂವಾದ, ಸಮಾಲೋಚನೆ, ಶಿಕ್ಷಣ, ಉಪದೇಶ  ಇತ್ಯಾದಿಗಳ ಮೂಲಕ ಜನಜಾಗೃತಿ ಬೆಳೆಸುವ ಸ್ವರೂಪದಲ್ಲಿರಬೇಕೇ ಹೊರತು ಹಿಂಸೆ, ಬಲವಂತ, ನಿಂದನೆ, ದೂಷಣೆ ಮುಂತಾದ ರೂಪಗಳನ್ನು ಖಂಡಿತ ತಾಳಬಾರದು.  ಸಲಿಂಗ ಕಾಮದ ಕುರಿತು ಚರ್ಚೆ ಪ್ರಬುದ್ಧ ಹಾಗೂ ಗಂಭೀರ ಸ್ತರದಲ್ಲಿ ಮುಂದುವರಿಯಬೇಕಿದ್ದರೆ, ಚರ್ಚೆಯಲ್ಲಿ ಪಾಲುಗೊಳ್ಳುವವರು ಬಹಳಷ್ಟು ಸಂವೇದನಾಶೀಲರಾಗಿ,  ಸಂಯಮದೊಂದಿಗೆ, ಸಂತುಲಿತವಾಗಿ ಮುಂದುವರಿಯಬೇಕಾಗುತ್ತದೆ.  ಅವರು ರೋಗಿ ಮತ್ತು ರೋಗದ ನಡುವಣ ಅಂತರವನ್ನು ಎಂದೂ ಮರೆಯಬಾರದು. ರೋಗದ ಕುರಿತಾದ ಅವರ ಜಿಗುಪ್ಸೆ ಯಾವ ಕಾರಣಕ್ಕೂ  ರೋಗಿಯ ವಿರುದ್ಧ ತಿರುಗಬಾರದು.

ಯಾವುದು ಮಾನವೀಯತೆ?

ಆತ್ಮ ಹತ್ಯೆ ಪಾಪ  ಎಂದು ನಂಬುವ  ಹಲವಾರು  ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಅದನ್ನು ಪಲಾಯನವಾದ, ಹೇಡಿತನ ಎಂದಿತ್ಯಾದಿಯಾಗಿ ಖಂಡಿಸುವವರೂ ಇದ್ದಾರೆ. ಇಷ್ಟಾಗಿಯೂ  ನಮ್ಮ ದೇಶವೂ ಸೇರಿದಂತೆ ಜಗತ್ತಿನೆಲ್ಲೆಡೆ ನೂರಾರು ಮಂದಿ ವಿವಿಧ ಕಾರಣಗಳಿಂದ  ಆತ್ಮ ಹತ್ಯೆಗೆ ಶರಣಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯನುಸಾರ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಹತ್ತು ಲಕ್ಷ ಮಂದಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ  ಈ ಲೋಕದಲ್ಲಿ ಪ್ರತಿ ನಲ್ವತ್ತು ಸೆಕೆಂಡ್ ಗೆ ಒಬ್ಬ ವ್ಯಕ್ತಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆ.  ಕಳವಳದ ಅಂಶವೇನೆಂದರೆ ಜಗತ್ತಿನಲ್ಲಿ ಈ ರೀತಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯು ಕ್ರಮೇಣ ಕುಸಿಯುವ ಬದಲು ಬಹಳ ತ್ವರಿತವಾಗಿ ಹೆಚ್ಚುತ್ತಿದ್ದು ಬಹುಬೇಗನೆ ಈ ಸಂಖ್ಯೆ ದ್ವಿಗುಣಗೊಳ್ಳುವ ಲಕ್ಷಣಗಳಿವೆ.

ಈ ರೀತಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿರುವ  ಆತ್ಮ ಹತ್ಯಾಕಾಂಕ್ಷಿಗಳ ಬಗ್ಗೆ ಅನುಕಂಪ, ಸಹಾನುಭೂತಿ ಇರುವವರು ಏನು ಮಾಡಲು ಸಾಧ್ಯವಿದೆ? ಆತ್ಮ ಹತ್ಯೆ ಯಾವುದೇ ಸಮಸ್ಯೆಯ ಪರಿಹಾರವಲ್ಲ ಎಂಬ ಸಂದೇಶವನ್ನು ಸಮಾಜದಲ್ಲಿ ಜನಪ್ರಿಯ ಗೊಳಿಸುವ ಆಂದೋಲನ, ಅಭಿಯಾನಗಳನ್ನು ನಡೆಸಬಹುದು.  ಯಾರಲ್ಲಾದರೂ ಆತ್ಮ ಹತ್ಯೆಯ ಒಲವು ಮೂಡಿದರೆ ಅಂಥವರಿಗೆ ಸಾಂತ್ವನ ನೀಡಿ, ಅವರ ನಿರಾಶೆ ಹತಾಶೆಗಳನ್ನು ಹೋಗಲಾಡಿಸಿ, ಅವರಲ್ಲಿ ಧೈರ್ಯ ತುಂಬಿ, ಅವರಲ್ಲಿ ಆತ್ಮವಿಶ್ವಾಸ,  ಸ್ಥೈರ್ಯ ಹಾಗೂ ಆಶಾವಾದ ಮೂಡಿಸುವಂತಹ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಬಹುದು. ಇದಕ್ಕಾಗಿ, ಅಲ್ಲಲ್ಲಿ ವೈದ್ಯರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಸಮಾಲೋಚನಾ ತರಬೇತಿ ನೀಡಬಹುದು. ಇದರ ಬದಲಿಗೆ ಯಾರಾದರೂ ಆತ್ಮ ಹತ್ಯಾಕಾಂಕ್ಷಿಗಳ ಬಗ್ಗೆ ಸಹಾನುಭೂತಿ ಪ್ರಕಟಿಸುತ್ತಾ, ಆತ್ಮ ಹತ್ಯೆಯ ಹಕ್ಕನ್ನು ವೈಭವೀಕರಿಸುತ್ತಾ, ಯಾರೂ ಆತ್ಮ ಹತ್ಯೆಯನ್ನು ವಿರೋಧಿಸಬಾರದು, ಅದರ ವಿರುದ್ಧ ಮಾತನಾಡಬಾರದು, ಎಂದೆಲ್ಲಾ  ವಾದಿಸಿದರೆ ಹೇಗಿದ್ದೀತು?  ಆತ್ಮಹತ್ಯೆಯನ್ನು ಸಕ್ರಮಗೊಳಿಸಬೇಕು, ಜನರಿಗೆ ಘನತೆಯೊಂದಿಗೆ ಆತ್ಮ ಹತ್ಯೆಮಾಡಿಕೊಳ್ಳುವುದಕ್ಕೆ ಬೇಕಾದ ಎಲ್ಲ ಮಾರ್ಗದರ್ಶನ ಹಾಗೂ ಸಕಲ ಸವಲತ್ತುಗಳನ್ನು ಒದಗಿಸಿ ಕೊಡಬೇಕು ಎಂದು ಆಗ್ರಹಿಸಲಾರಂಭಿಸಿದರೆ ಹೇಗಿದ್ದೀತು?  ಇಂಥವರು ಆತ್ಮಹತ್ಯಾಕಾಂಕ್ಷಿಗಳ  ಹಿತೈಷಿಗಳಾಗಿರಲು ಸಾಧ್ಯವೇ?  ಮಾನವೀಯ ಅಂತಃಕರಣ ಉಳ್ಳ ಯಾರೂ ಎಲ್ಲೂ ಎಂದೂ ಇಂತಹ ಧೋರಣೆಯನ್ನು ಅನುಸರಿಸಲಾರರು. ಹಾಗೆಯೇ, ಮಾನವೀಯ  ಅಂತಃಕರಣ ಇರುವ ಯಾರೂ  ಇಂಥವರ  ವಾದಗಳನ್ನು ಕೇಳಿ ಅದನ್ನು ಪ್ರತಿಭಟಿಸದೆ, ಪ್ರತಿರೋಧಿಸದೆ ಸುಮ್ಮನಿರಲಾರರು. 

ಆತ್ಮ ಹತ್ಯೆಯ ಕುರಿತಾದ  ಈ ಮಾತುಗಳು  'ಗೇ' (Gay) ಗಳ ಕುರಿತು ಅನುಕಂಪ ಪ್ರಕಟಿಸುತ್ತಾ, 'ಗೇ' ಸಂಸ್ಕೃತಿಯನ್ನು ಸಕ್ರಮಗೊಳಿಸಿ ಸಮಾಜದಲ್ಲಿ ಅದಕ್ಕೆ ಮಾನ್ಯತೆ ನೀಡಬೇಕೆಂದು ವಾದಿಸುವವರಿಗೆ ಮತ್ತು ಅಂತಹ ವಾದಗಳಿಗೆ ಮೌನ ಸಮ್ಮತಿ ಸೂಚಿಸುವವರಿಗೂ ಸಂಪೂರ್ಣವಾಗಿ ಅನ್ವಯಿಸುತ್ತವೆ.  ಮಾನವೀಯ ನೆಲೆಯಲ್ಲಿ ಗೇ ಗಳ ಬಗ್ಗೆ ಅನುಕಂಪ ತೋರಿಸುವವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಗೇ ಸಂಸ್ಕೃತಿಯನ್ನು ಮತ್ತು ಸಲಿಂಗ ಕಾಮವನ್ನು ಬಹಳ ಸ್ಪಷ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ವಿರೋಧಿಸಬೇಕು. ಆ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಬೇಕು. 'ಗೇ' ಗಳನ್ನೂ ಸಂಪೂರ್ಣ ಸಮಾಜವನ್ನೂ ವಿನಾಶದಿಂದ ರಕ್ಷಿಸುವುದಕ್ಕೆ ಇರುವುದು ಇದೊಂದೇ ಮಾರ್ಗ.

'ಗೇ' ಸಂಸ್ಕೃತಿಯ ಭೀಭತ್ಸ ಫಲಗಳು 

'ಗೇ' ಸಂಸ್ಕೃತಿಯ ಬಗ್ಗೆ ಜಿಗುಪ್ಸೆ ಪಡುವುದಕ್ಕೆ ಮತ್ತು ಅದರ ವಿರುದ್ಧ ನಿಷ್ಠುರ ನಿಲುವು ತಾಳುವುದಕ್ಕೆ ಧಾರ್ಮಿಕ, ನೈತಿಕ  ಅಥವಾ ಆಧ್ಯಾತ್ಮಿಕ ಆಧಾರಗಳ ಅಗತ್ಯವೇನೂ ಇಲ್ಲ. ಇದರ ಬಗ್ಗೆ ಐತಿಹಾಸಿಕ ಸಂಶೋಧನೆ ಅಥವಾ ಭವಿಷ್ಯದ ಕುರಿತಾದ ಊಹೆ, ತರ್ಕ ಇತ್ಯಾದಿಗಳ ಅಗತ್ಯವೂ ಇಲ್ಲ. ನಮ್ಮ ಮುಂದುವರಿದ, ಆಧುನಿಕ, ವರ್ತಮಾನ ಸಮಾಜದಲ್ಲಿ 'ಗೇ'  ಸಂಸ್ಕೃತಿಯು ನೀಡಿರುವ ಭಯಾನಕ ಫಲಗಳನ್ನೊಮ್ಮೆ ನೋಡಿದರೆ ಸಾಕು. ಮಾನವೀಯ ಅಂತಃಕರಣ ಉಳ್ಳವರು ಪ್ರಥಮವಾಗಿ ಗೇ ಗಳನ್ನು 'ಗೇ' ಸಂಸ್ಕೃತಿಯಿಂದ ಕಾಪಾಡಲು  ಧಾವಿಸುತ್ತಾರೆ ಮತ್ತು ಸ್ವಸ್ಥ ಮನುಷ್ಯರು 'ಗೇ' ಗಳಾಗದಂತೆ ರಕ್ಷಿಸುವುದು ಹೇಗೆಂದು ಚಿಂತಿತರಾಗುತ್ತಾರೆ. ಏಕೆಂದರೆ 'ಗೇ'  ಸಂಸ್ಕೃತಿಗೆ ಏಡ್ಸ್ ಎಂಬ ಮಾರಕ ರೋಗದೊಂದಿಗೆ  ನೇರ ನಂಟಿದೆ, ಮಾತ್ರವಲ್ಲ, ಆ ಸಂಸ್ಕೃತಿ  ಏಡ್ಸ್ ಎಂಬ ಮಹಾಮಾರಿಯ ಹೆಬ್ಬಾಗಿಲಾಗಿದೆ.
 
ಏಡ್ಸ್ ಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ ಎನ್ನುತ್ತಾರೆ. ಆದರೆ ಮಾನವ ಸಮಾಜ ಅದರ ಅಪಾಯಗಳನ್ನು ಅಧಿಕೃತವಾಗಿ ಗುರುತಿಸತೊಡಗಿದ್ದು ೮೦ರ ದಶಕದ ಆರಂಭದಲ್ಲಿ. ಪ್ರಥಮವಾಗಿ ವರದಿಯಾದ ಏಡ್ಸ್ ಪ್ರಕರಣಗಳಲ್ಲಿ ಒಂದಂಶ ಸಮಾನವಾಗಿತ್ತು. ಅದೇನೆಂದರೆ ಏಡ್ಸ್ ಪೀಡಿತರೆಲ್ಲರೂ ಸಲಿಂಗ ಕಾಮಿಗಳಾಗಿದ್ದರು ಅಥವಾ ಸಲಿಂಗ ಕಾಮಿಗಳ ಸಂಗಾ ಅಥವಾ ರಕ್ತದ  ಮೂಲಕ ಏಡ್ಸ್ ಸೋಂಕು ಪಡೆದವರಾಗಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ಈ ರೋಗವು ಜಗತ್ತಿನಲ್ಲಿ ಮೂರೂವರೆ ಕೋಟಿಗೂ ಹೆಚ್ಚು ಮಂದಿಯ ಜೀವಗಳನ್ನು ಬಲಿ  ಪಡೆದುಕೊಂಡಿದೆ.  ಇಂದು ಜಗತ್ತಿನಲ್ಲಿ ಸುಮಾರು ೩.೭ ಕೋಟಿ ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಆ ಪೈಕಿ ೨ ಕೋಟಿಗೂ ಅಧಿಕ ಮಂದಿ ೧೫ ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು. ಇನ್ನೊಂದು ದುರಂತವೇನೆಂದರೆ  ಏಡ್ಸ್ ಪೀಡಿತರ ಪೈಕಿ ಸುಮಾರು ೩೯% ಮಂದಿಗೆ, ತಾವು ಏಡ್ಸ್ ಪೀಡಿತರೆಂಬ ಪರಿಜ್ಞಾನವೇ ಇಲ್ಲ. ಏಕೆಂದರೆ ಅವರು ತಮ್ಮನ್ನು HIV ಪರೀಕ್ಷೆಗೆ ಒಳಪಡಿಸಿಲ್ಲ. ಅದೆಷ್ಟೋ ಮಂದಿಗೆ ತಮ್ಮನ್ನು HIV ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂಬುದೇ  ಮನವರಿಕೆ ಯಾಗಿ ರುವುದಿಲ್ಲ.  ಇನ್ನೆಷ್ಟೋ ಕಡೆ ಅಂತಹ ಪರೀಕ್ಷೆಗೆ ಬೇಕಾದ ಸವಲತ್ತುಗಳು ಕೂಡಾ ಲಭ್ಯವಿರುವುದಿಲ್ಲ.

ಏಡ್ಸ್ ಬಂದರೆ ಬರಲಿ ಎಂದು ಧೈರ್ಯದಿಂದ ಸಲಿಂಗ ಸಾಹಸಕ್ಕೆ ಇಳಿಯುವವರ ಪ್ರವೃತ್ತಿಯನ್ನು ಯಾರಾದರೂ ಸಾಹಸ ಪ್ರವೃತ್ತಿಯೆಂದು ಪ್ರಶಂಸಿಸ ಬಹುದು. ಆದರೆ ಅವರ ಕೃತ್ಯಗಳ ಪರಿಣಾಮವಾಗಿ ಆ ಅಪಾಯಕಾರಿ  ಕೃತ್ಯದೊಂದಿಗೆ ಯಾವುದೇ ಸಂಬಂಧ ಇಲ್ಲದ ಲಕ್ಷಾಂತರ ಮುಗ್ಧ ಮಂದಿ ಕೂಡಾ ಪರೋಕ್ಷ ಮೂಲಗಳಿಂದ ಅವರ ರೋಗದ ಸೋಂಕು ಪಡೆದು ರೋಗಿಗಳಾಗಿ, ನರಕ ಯಾತನೆ ಅನುಭವಿಸಿ ಸಾಯುತ್ತಾರೆ.  ಗೇ ಅನುಕಂಪಿಗಳು ತಮ್ಮ ಅನುಕಂಪದ ಒಂದು ಪಾಲನ್ನಾದರೂ ಆ ಮುಗ್ಧ ಬಲಿಪಶುಗಳಿಗಾಗಿ ಮೀಸಲಿಡಬೇಕು. 

ವಿಶ್ವ ಸಂಸ್ಥೆಯವರು ಒದಗಿಸಿರುವ ಮಾಹಿತಿ ಪ್ರಕಾರ ೨೦೧೬ ರಲ್ಲಿ ಒಂದೇ ವರ್ಷದ ಅವಧಿಯಲ್ಲಿ ೧೦ ಲಕ್ಷ ಮಂದಿ ಏಡ್ಸ್ ರೋಗ ಪೀಡಿತರು  ಮರಣವನ್ನಪ್ಪಿದ್ದಾರೆ. ಅದೇ ವರ್ಷ ೧೮ ಲಕ್ಷ ಮಂದಿ ಹೊಸದಾಗಿ HIV ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ನಿತ್ಯ ಸರಾಸರಿ ೫ಸಾವಿರ ಮಂದಿ ಹೊಸದಾಗಿ ಏಡ್ಸ್ ಸೋಂಕಿತ ರಾಗುತ್ತಿದ್ದಾರೆ.

ಏಡ್ಸ್ ಮತ್ತು ಸಲಿಂಗ ಅಥವಾ ಕಾಮ ವಿಕೃತಿ ಇವೆರಡರ  ನಡುವೆ ಏನು ಸಂಬಂಧವಿದೆ ಎಂದು ಅಚ್ಚರಿ ಪಡುವವರು ಗಮನಿಸಬೇಕು: ಜಗತ್ತಿಗೆ ಅನೇಕಾರು ಅನಿಷ್ಟಗಳನ್ನು ರಫ್ತು ಮಾಡಿರುವ ಯು ಎಸ್ ಎ ಜನಸಂಖ್ಯೆಯಲ್ಲಿ ಸಲಿಂಗ ಕಾಮಿಗಳ ಪ್ರಮಾಣ ೨% ರ   ಆಸುಪಾಸಿನಲ್ಲಿದೆ. ಆದರೆ ಅಲ್ಲಿರುವ  ಏಡ್ಸ್ ರೋಗ ಪೀಡಿತರ ಪೈಕಿ ಸಲಿಂಗಕಾಮಿಗಳು ಮತ್ತು ಉಭಯ ಕಾಮಿಗಳ (Bisexual) ಪ್ರಮಾಣ ೭೦% ದಷ್ಟಿದೆ. ಸಲಿಂಗ ಕಾಮವೆನ್ನುವುದು ಕೇವಲ ಭಾವನೆಗಳು, ಒಲವುಗಳು ಮತ್ತು ಹವ್ಯಾಸಗಳಿಗೆ ಸಂಬಂಧಿಸಿದ ವಿಷಯವಲ್ಲ, ಅದು ನೇರವಾಗಿ ಅಸ್ತಿತ್ವಕ್ಕೇ ಸಂಬಂಧಿಸಿದ ಅಪಾಯವೆಂಬುದಕ್ಕೆ ಬೇರಾವ ಪುರಾವೆಯ ಅಗತ್ಯವಿದೆ?

ಸಲಿಂಗ ಕಾಮಿಗಳು ಏಡ್ಸ್ ಮಾತ್ರವಲ್ಲದೆ ಹಲವು ಬಗೆಯ ಇತರ ಲೈಂಗಿಕ ರೋಗಗಳಿಗೂ ತುತ್ತಾಗುವ ಸರ್ವ ಸಾಧ್ಯತೆಗಳಿವೆ. ಜೊತೆಗೆ,  ತಮ್ಮ ಸಂಪರ್ಕದಲ್ಲಿರುವ ಅಥವಾ ಅರಿವಿಲ್ಲದೆ ತಮ್ಮ ರಕ್ತ ಪಡೆಯುವ  ಇತರರನ್ನು ಕೂಡ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಗಳಿವೆ. ಹಾಗೆಯೇ , ಅವರು ಗೊನೊರಿಯಾ, ಸಿಫಿಲಿಸ್, ಹೇರ್ಪಿಸ್, ಹೆಪಾಟೈಟಿಸ್ A, B, ಮತ್ತು C ಇತ್ಯಾದಿ ಮಾರಕ ವ್ಯಾಧಿಗಳಿಗೆ ತುತ್ತಾಗುವ ಸಾಧ್ಯತೆ ಗಳಿರುತ್ತವೆ. 

ಯು ಎಸ್ ಎ ಯಲ್ಲಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿರುವ ವರದಿ ಪ್ರಕಾರ ೨೦೧೪ ರಲ್ಲಿ ಪ್ರಥಮ ಹಾಗೂ ದ್ವಿತೀಯ ಮಟ್ಟದ ಸಿಫಿಲಿಸ್ (syphilis) ರೋಗ ಬಾಧಿತರ ಪೈಕಿ ೮೩% ಮಂದಿ ವಿವಿಧ ಸ್ವರೂಪದ ಸಲಿಂಗ ಕಾಮಿಗಳಾಗಿದ್ದರು. ಸಲಿಂಗ ಕಾಮಿಗಳು ಖ್ಲಾಮೆಡಿಯ (chlamydia) ಮತ್ತು (gonorrhea) ಎಂಬ ಮಾರಕ ಸೋಂಕುಗಳಿಗೆ ತುತ್ತಾಗುವ ಅಪಾಯ ಇತರರಿಗಿಂತ ತುಂಬಾ ಅಧಿಕವಿದೆ. ಇದೇ  ಸಂಸ್ಥೆಯ ವರದಿ ಪ್ರಕಾರ ಸಹಜ ಕಾಮಿಗಳಿಗೆ ಹೋಲಿಸಿದರೆ ಸಲಿಂಗ ಕಾಮಿಗಳು ಬಾಯಿ ಮತ್ತು ಗುದದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ೧೭ ಪಟ್ಟು ಅಧಿಕವಾಗಿದೆ.

ಭಾವನಾತ್ಮಕ ಮೋಸದ ಜಾಲ 

'ಗೇ'  ಸಂಸ್ಕೃತಿಯ ಪರ ವಕಾಲತ್ತು ವಹಿಸುವ ಕೆಲವರು ಬಹಳ ಭಾವನಾತ್ಮಕ ವಾದಗಳನ್ನು ಮಂಡಿಸುತ್ತಾರೆ. ಅವರು ಅದನ್ನು ನೇರವಾಗಿ,  ಪ್ರೀತಿ, ಪ್ರೇಮ, ಸ್ನೇಹ, ವಾತ್ಸಲ್ಯವೇ ಮುಂತಾದ ಜಾಗತಿಕ ಮಾನ್ಯತೆ ಇರುವ ಮೌಲ್ಯಗಳ ಜೊತೆ ಜೋಡಿಸಲು ಪ್ರಯತ್ನಿಸುತ್ತಾರೆ. ಪುರುಷನೊಬ್ಬ ಇನ್ನೊಬ್ಬ ಪುರುಷನನ್ನು ಪ್ರೀತಿಸುವುದರಲ್ಲಿ ತಪ್ಪೇನಿದೆ ? ಎಂಬ ಅತಿ ಸರಳೀಕೃತ ಪ್ರಶ್ನೆಯೇ ಅವರ ವಾದದ ಸಾರಾಂಶವಾಗಿರುತ್ತದೆ. ನಿಜವಾಗಿ ಪುರುಷರು ಪುರುಷರನ್ನು ಅಥವಾ ಸ್ತ್ರೀಯರು ಸ್ತ್ರೀಯರನ್ನು ಪ್ರೀತಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆಕ್ಷೇಪವಿರುವುದು ಸಲಿಂಗ ಕಾಮಕ್ಕೆ ಮಾತ್ರವೇ ಹೊರತು ಸಲಿಂಗ ಪ್ರೇಮಕ್ಕಲ್ಲ.  ಈ ಕುರಿತು ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಪ್ರಕೃತಿಯಲ್ಲೇ ಪ್ರೇಮಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಕಾಮಕ್ಕೆ ನಿರ್ಬಂಧಗಳಿವೆ. ಅದು ಅಸಹಜ ಸ್ವರೂಪದಲ್ಲಿ ನಡೆದಾಗ ಪ್ರಕೃತಿ ತನ್ನ ದಂಡ ಸಂಹಿತೆಯನ್ನು ಅನುಷ್ಠಾನಿಸುತ್ತದೆ.  ಪ್ರೇಮ ಮತ್ತು ಕಾಮಗಳ ನಡುವೆ ಇರುವ ಬೃಹತ್ ಅಂತರವನ್ನು ಗುರುತಿಸ ಬಲ್ಲ ಯಾರೂ ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗುವುದಿಲ್ಲ. ಪ್ರೇಮ ಮತ್ತು ಕಾಮ ಒಂದಲ್ಲ ಎಂಬ ಸರಳ ಸತ್ಯವನ್ನು ಒಪ್ಪಿಕೊಂಡರೆ ಸಾಕು. ಯಾವ ಗೊಂದಲವೂ ಉಳಿಯುವುದಿಲ್ಲ.

ಸಲಿಂಗಿಗಳ ಖಾಸಗಿ ಬದುಕಿನಲ್ಲಿ 'ಗೇ' ರಕ್ಷಕರು ಮೂಗು ತೂರುವುದೇಕೆ? 

ಸಲಿಂಗ ಕಾಮ್ ಹೊಸದೇನೂ ಅಲ್ಲ. ಸಲಿಂಗ ಕಾಮದ ಬಹಿರಂಗ ಅಭಿವ್ಯಕ್ತಿ, ಸಾಮೂಹಿಕ ವೈಭವೀಕರಣ ಮತ್ತು ಅದಕ್ಕೆ ಸಮಾಜ ಹಾಗೂ ಕಾನೂನಿನ ಮನೆ ಕೊಡಿಸುವ 'ಗೇ' ಅಭಿಯಾನ ಹಾಗೂ ಆಂದೋಲನ ಮಾತ್ರ ಹೊಸತು. ಈ ಹಿನ್ನೆಲೆಯಲ್ಲಿ  'ಗೇ' ಪೋಷಕ ವಲಯಗಳು ನಡೆಸುತ್ತಿರುವ ಮುಂದಿಡುವ ಕೆಲವು ಭಾವುಕ ತರ್ಕಗಳು ಮತ್ತು ಬೇಡಿಕೆಗಳ ಟೊಳ್ಳುತನವನ್ನು ಇಲ್ಲಿ ಪ್ರಸ್ತಾಪಿಸಬೇಕಾಗಿದೆ:

'ಗೇ' ಅಥವಾ ಲೆಸ್ಬಿಯನ್ ಸಂಗಾತಿಗಳ ಪರಸ್ಪರ ಸಂಬಂಧವು  ಪ್ರೀತಿ ಮತ್ತು ಪ್ರೇಮದ ಸಂಬಂಧವಾಗಿದ್ದರೆ ಅವರು ಕಾಮಕೇಳಿಗೆ ಇಳಿಯದೆಯೇ ತಮ್ಮ ಸಂಬಂಧವನ್ನು ಮುಂದುವರಿಸಬಹುದು. ಅದನ್ನು ಯಾರೂ ಆಕ್ಷೇಪಿಸಿದ್ದಿಲ್ಲ. ಇನ್ನು ಅದು ಸ್ನೇಹದ ಅಥವಾ ಭಾವನಾತ್ಮಕವಾದ ಸಂಬಂಧವಾಗಿದ್ದರೆ ಆಗಲೂ ಅವರು ಕಾಮಕೇಳಿಗೆ ಇಳಿಯದೆಯೇ ತಮ್ಮ ಸ್ನೇಹ  ಸಂಬಂಧವನ್ನು ಮುಂದುವರಿಸ ಬಹುದು. ಪ್ರೀತಿ ಪ್ರೇಮದ ಅಥವಾ ಸ್ನೇಹದ ಸಂಬಂಧವನ್ನು ಮುಂದುವರಿಸಲು, ಕಾಮ ಸಂಬಂಧಿ ಚಟುವಟಿಕೆಯ ಅಥವಾ ಸಲಿಂಗ ವಿವಾಹದ ಯಾವ ಅಗತ್ಯವೂ ಇಲ್ಲ. 

ಸ್ತ್ರೀಯರಿರಲಿ, ಪುರುಷರಿರಲಿ ಹೆಚ್ಚಿನ ಸಲಿಂಗಿಗಳು ತಾವು ಸಲಿಂಗಿಗಳೆಂದು ಸಮಾಜದಲ್ಲಿ ಮಾತ್ರವಲ್ಲ ತಮ್ಮ ಆಪ್ತ ವಲಯದಲ್ಲೂ ಗುರುತಿಸಿಕೊಳ್ಳಲು ಅಪೇಕ್ಷಿಸುವುದಿಲ್ಲ. ಪರಸ್ಪರ ಸಲಿಂಗ ಲೈಂಗಿಕ ಸಂಬಂಧ ಇರುವವರಲ್ಲಿ ಕೂಡಾ  ಹೆಚ್ಚಿನವರು ಅದನ್ನು ಗುಟ್ಟಾಗಿಯೇ ಇಡಲು ಬಯಸುತ್ತಾರೆ. ತಮ್ಮ ಒಲವು ಬಹಿರಂಗವಾಗಿ ಚರ್ಚೆಗೆ ಒಳಪಡುವುದು ಅವರಿಗೆ ಇಷ್ಟವಿರುವುದಿಲ್ಲ. ಅವರಿಗೆ ತಮ್ಮ ಹಾಗೂ ತಮ್ಮ ಲೈಂಗಿಕ ಒಲವುಗಳ ಖಾಸಗಿತನ ತುಂಬಾ ಮಹತ್ವದ್ದಾಗಿರುತ್ತದೆ. ತಮ್ಮ ಲೈಂಗಿಕ  ಒಲವುಗಳ ಬಗ್ಗೆ ಅಥವಾ ತಮ್ಮ ಲೈಂಗಿಕ ಚಟುವಟಿಕೆಗಳ ಬಗ್ಗೆ ಅನ್ಯರು ಮಾತನಾಡಿ ಕೊಳ್ಳುವುದು ಅವರಿಗೆ ಅಪಥ್ಯವಾಗಿರುತ್ತದೆ. ಆದ್ದರಿಂದ, ಸಲಿಂಗಿಗಳು ತಮ್ಮ ಸಲಿಂಗಿ ಒಲವನ್ನು ಸಮಾಜದ ಮುಂದೆ ಪ್ರಕಟಿಸಬೇಕು ಮತ್ತು ತಮ್ಮನ್ನು ಸಲಿಂಗಿಗಳೆಂದೇ ಗುರುತಿಸಿಕೊಳ್ಳಬೇಕು ಎಂದು ನೇರ ಅಥವಾ ಪರೋಕ್ಷವಾಗಿ ಅವರ ಮೇಲೆ ಒತ್ತಡ ಹೇರುತ್ತಿರುವವರು ಈ ಸಲಿಂಗಿಗಳಿಗೆ ಯಾವುದೇ ಉಪಕಾರವನ್ನು ಮಾಡುತ್ತಿಲ್ಲ. ನಿಜವಾಗಿ ಈ 'ಗೇ ' ಆಂದೋಲನದವರು ಸಲಿಂಗಿಗಳನ್ನು ಬಯಲಿಗೆ ತಂದು ನಿಲ್ಲಿಸಿ ಅವರನ್ನು ಮುಜುಗರಕ್ಕೆ ಸಿಲುಕಿಸುವ ಮೂಲಕ ಅವರನ್ನು ಬೇರೊಂದು ತರದಲ್ಲಿ ಹಿಂಸಿಸುತ್ತಿದ್ದಾರೆ.   

ಒಂದುವೇಳೆ ಇಬ್ಬರು ಸಲಿಂಗಿಗಳು ಪರಸ್ಪರ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿರುವರು ಎಂದುಕೊಳ್ಳೋಣ. ಆಗಲೂ ಸಲಿಂಗ ವಿವಾಹದ ಅಗತ್ಯವೇನೂ ಇಲ್ಲ. ಸ್ವತಃ  ಸಲಿಂಗಿಗಳಲ್ಲಿ ಹೆಚ್ಚಿನವರು ಈ ತಮ್ಮ ಸಂಬಂಧವನ್ನು ಸಮಾಜದ ಗಮನಕ್ಕೆ ತರಲು ಅಥವಾ ವಿವಾಹವನ್ನು ತಮ್ಮ ಮೇಲೆ ಹೇರಿಕೊಳ್ಳಲು ಬಯಸುವುದಿಲ್ಲ.  ಹೀಗಿರುತ್ತಾ ಸಲಿಂಗ ವಿವಾಹವನ್ನು ಸಕ್ರಮಗೊಳಿಸಬೇಕೆಂದು ಆಗ್ರಹಿಸುತ್ತಿರುವವರು  ಹಾಗೆ ಮಾಡುತ್ತಿರುವುದು ಸಲಿಂಗಿಗಳ ಹಿತಕ್ಕಾಗಿಯೋ ಅಥವಾ ಸ್ವಸ್ಥ ಸಮಾಜವನ್ನು ಕೆಣಕಲಿಕ್ಕಾಗಿ ಮಾತ್ರವೋ ಎಂಬ ಸಂದೇಹ ಮೂಡುತ್ತದೆ. 

ಗೊಂದಲವೇ ಬಂಡವಾಳ: LGBTQQIAAP + ಎಂಬ ಹತ್ತು ಭಿನ್ನ ವರ್ಗಗಳನ್ನು ಒಂದೆಂದು ಚಿತ್ರಿಸುವ ಹುನ್ನಾರ 

'ಗೇ' ರಕ್ಷಕರು ಮತ್ತು 'ಗೇ' ಪೋಷಕರು ಒಟ್ಟು ಲೈಂಗಿಕತೆಯ ವಿಷಯದಲ್ಲಿ ಜನಸಾಮಾನ್ಯರಲ್ಲಿ ಇರುವ ಅಜ್ಞಾನ ಮತ್ತು ಗೊಂದಲಗಳನ್ನೇ ತಮ್ಮ ಬಂಡವಾಳವಾಗಿ ಬಳಸಿಕೊಳ್ಳುತ್ತಾರೆ. "ಅಸಹಜ ಕಾಮಿಗಳು ಹುಟ್ಟಿನಿಂದಲೇ ಹಾಗಿರುತ್ತಾರೆ....  ಅವರ ಮುಂದೆ ಬೇರಾವುದೇ ದಾರಿ ಇರುವುದಿಲ್ಲ .... ಅವರೆಷ್ಟು ಬಯಸಿದರೂ ಅದರಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ... ಪ್ರಕೃತಿಯೇ ಅವರನ್ನು ಹಾಗೆ ಮಾಡಿರುವಾಗ ಸಮಾಜವು ಅವರನ್ನು ನಿರ್ಬಂಧಿಸುವುದು ಸರಿಯಲ್ಲ....... ಅವರಿಗೆ ಬೇರೆ ಆಯ್ಕೆಯೇ ಎಲ್ಲಿದೆ? ........ " ಹೀಗೆ ಸಾಗುತ್ತದೆ ಅವರ ವಾದ ವೈಖರಿ. ಈ ಮೂಲಕ ಅವರು ಅಂಗ ವೈಕಲ್ಯಗಳೊಂದಿಗೆ ಜನಿಸುವ ಜನರ  ಪರವಾಗಿರುವ, ಸಹತಾಪ,  ಸಹಾನುಭೂತಿಗಳನ್ನು ಸ್ವಯಂ ಪ್ರೇರಿತ ಹಾಗೂ ಸ್ವಯಂಕೃತ ನ್ಯೂನತೆ, ಅಸ್ವಾಸ್ಥ್ಯ ಗಳಿಗೆ ಅನ್ವಯಿಸಲು ಹೆಣಗುತ್ತಾರೆ. ಸಮಾಜದಲ್ಲಿ ಹಿಜಡಾಗಳ ಅಥವಾ ನಪುಂಸಕರ ಬಗ್ಗೆ ಇರುವ ಗೊಂದಲಗಳನ್ನೂ ಇವರು ತಮ್ಮ ಬಂಡವಾಳವಾಗಿಸುತ್ತಾರೆ. ಈ ದೃಷ್ಟಿಯಿಂದ, ಅಸಾಮಾನ್ಯ ಲೈಂಗಿಕತೆಯ ಎಲ್ಲ ಪ್ರಕಾರಗಳನ್ನು ಪ್ರತ್ಯೇಕವಾಗಿ ಗುರುತಿಸಿ ಪರಿಚಯ ಪಡುವುದು ಅತ್ಯವಶ್ಯಕವಾಗಿದೆ.

LGBTQQIAAP +  ಎಂಬ ಅಕ್ಷರ ಸಂಧಿಯ ವಿವರಣೆ ಹೀಗಿದೆ:

L ಅಥವಾ Lesbian ಲೆಸ್ಬಿಯನ್ ಅಂದರೆ ಸ್ತ್ರೀಯರ ಕಡೆಗೆ ಮಾತ್ರ ಲೈಂಗಿಕವಾಗಿ ಆಕರ್ಷಿತರಾಗುವ ಸ್ತ್ರೀ.
G ಅಥವಾ Gay ಗೇ ಅಂದರೆ ಪುರುಷರ ಕಡೆಗೆ ಮಾತ್ರ ಲೈಂಗಿಕವಾಗಿ ಆಕರ್ಷಿತನಾಗುವ ಪುರುಷ.
B ಅಥವಾ Bisexual ಬೈ ಸೆಕ್ಸುವಲ್ ಅಂದರೆ ಪುರಷರು ಮತ್ತು ಸ್ತ್ರೀಯರು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುವ ಸ್ತ್ರೀಯರು ಮತ್ತು ಪುರುಷರು.
T ಅಥವಾ Transgender ಟ್ರಾನ್ಸ್ ಜೆಂಡರ್ ಅಥವಾ Transexual ಟ್ರಾಂಸೆಕ್ಸುವಲ್ ಅಂದರೆ ಹುಟ್ಟುವಾಗ ಪುರುಷನೆಂದು ಗುರುತಿಸಲ್ಪಟ್ಟು ಕ್ರಮೇಣ ತಾನು ಸ್ತ್ರೀ ಎಂದು ನಂಬಲಾರಂಭಿಸಿ ಹಾವಭಾವದಲ್ಲಿ, ಅಥವಾ ವರ್ತನೆಯಲ್ಲಿ ಅಥವಾ ಉಡುಗೆ ಅಲಂಕಾರ ಇತ್ಯಾದಿಗಳಲ್ಲಿ ಸ್ತ್ರೀಯರಂತಹ ಲಕ್ಷಣಗಳನ್ನು ಬೆಳೆಸಿಕೊಂಡವನು ಅಥವಾ ಹುಟ್ಟುವಾಗ ಸ್ತ್ರೀ ಎಂದು ಗುರುತಿಸಲ್ಪಟ್ಟು ಕ್ರಮೇಣ  ಹಾವಭಾವದಲ್ಲಿ ಅಥವಾ ವರ್ತನೆಯಲ್ಲಿ ಅಥವಾ ಉಡುಗೆ ಅಲಂಕಾರ ಇತ್ಯಾದಿಗಳಲ್ಲಿ ಪುರುಷರಂತಹ ಲಕ್ಷಣಗಳನ್ನು ಬೆಳೆಸಿಕೊಂಡವಳು ಅಥವಾ ಅಳವಡಿಸಿಕೊಂಡವರು. ಇವರಲ್ಲಿ ಕೆಲವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ತಮ್ಮ ಒಲವಿಗನುಸಾರ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಅಂದರೆ ಪುರುಷ ಲಕ್ಷಣಗಳೊಂದಿಗೆ ಹುಟ್ಟಿದವನು ಸ್ತ್ರೀಯಾಗಿ ಮಾರ್ಪಡುತ್ತಾನೆ. ಸ್ತ್ರ್ರೆ ಲಕ್ಷಣಗಳೊಂದಿಗೆ ಜನಿಸಿದವಳು ಪುರುಷನಾಗಿ ಮಾರ್ಪಡುತ್ತಾಳೆ.   
Q ಅಥವಾ Queer ಕ್ವಿಯರ್ ಅಂದರೆ ತಮ್ಮನ್ನು ಸ್ತ್ರೀ, ಪುರುಷ ಅಥವಾ ಯಾವುದೇ ನಿರ್ದಿಷ್ಟ ಲಿಂಗ ದೊಂದಿಗೆ ಗುರುತಿಸಲ್ಪಡಲು ಅಪೇಕ್ಷಿಸದವರು.
Q ಅಥವಾ  Questioning ಕ್ವೆಶ್ಚನಿಂಗ್ ಅಂದರೆ ತಮ್ಮ ಲೈಂಗಿಕ ಗುರುತು ಯಾವುದೆಂಬುದನ್ನು ನಿರ್ಧರಿಸಲಾಗದೆ ತಾವೇ ಆ ಕುರಿತು ಪ್ರಶ್ನಿಸುತ್ತಿರುವ ಹಂತದಲ್ಲಿರುವವರು. 
I ಅಥವಾ Intersex  ಇಂಟರ್ಸೆಕ್ಸ್ ಅಂದರೆ ಶಾರೀರಿಕವಾಗಿ ಸ್ತ್ರೀ ಮತ್ತು ಪುರುಷರಿಬ್ಬರ ಮಿಶ್ರ ಲಕ್ಷಣಗಳೊಂದಿಗೆ ಹುಟ್ಟಿದವರು. ಇಂತಹ ಪ್ರಕರಣಗಳು ತೀರಾ ವಿರಳ.
A ಅಥವಾ Asexual  ಎಸೆಕ್ಸುವಲ್ ಅಂದರೆ ಯಾರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗದ ಸ್ತ್ರೀಯರು ಅಥವಾ ಪುರುಷರು.
A ಅಥವಾ Allies ಅಲೈಸ್ ಅಂದರೆ ಲೈಂಗಿಕವಾಗಿ ಸ್ವತಃ ಸ್ವಸ್ಥರಾಗಿದ್ದು LGBTQQIAP ವರ್ಗಕ್ಕೆ ಸೇರಿದವರನ್ನು ಬೆಂಬಲಿಸುವವರು.
P ಅಥವಾ Pan sexual  ಪಾನ್ ಸೆಕ್ಸುವಲ್ ಅಂದರೆ ಇನ್ನೊಬ್ಬರ ಲೈಂಗಿಕತೆ ಏನಾಗಿದ್ದರೂ ಅದನ್ನು ಪರಿಗಣಿಸದೆಯೇ ಅವರ ಕಡೆಗೆ ಲೈಂಗಿಕವಾಗಿ ಆಕರ್ಷಿತರಾಗುವವರು.

ಮುಂದಿನ ದಿನಗಳಲ್ಲಿ ಇಂಗ್ಲಿಷ್ ಅಕ್ಷರಮಾಲೆಯ ಉಳಿದೆಲ್ಲ ಅಕ್ಷರಗಳು ಈ ಅಸಾಮಾನ್ಯರ ಈ ಪಟ್ಟಿಯಲ್ಲಿ ಸೇರಿಕೊಂಡರೂ ಅಚ್ಚರಿಯೇನಿಲ್ಲ. ಇಲ್ಲಿ Q  ಮತ್ತು A ಎಂಬ ಮುಂದಕ್ಷರ ಅಥವಾ ಮೊದಲಕ್ಷರಗಳು ಎರಡೆರಡು ಬಾರಿ ಬಂದಿವೆ. ಹೀಗೆಯೇ ಮುಂದುವರಿದರೆ ಇದು ನೂರಾರು ಮುಂದಕ್ಷರಗಳಿಂದ ಗುರುತಿಸಲ್ಪಡುವ ಸಮುದಾಯವಾಗಿಯೂ ಬೆಳೆಯಬಹುದು. ಪ್ರಸ್ತುತ  ಹತ್ತು ವರ್ಗಗಳಿಗೆ ಮೇಲೆ ನೀಡಲಾಗಿರುವ ವ್ಯಾಖ್ಯಾನಗಳು ಬಹುತೇಕ ಎಲ್ಲರೂ ಸಮ್ಮತಿಸುವ ವ್ಯಾಖ್ಯಾನಗಳಾಗಿವೆ. ಒಂದೊಂದಾಗಿ ಈ  ಎಲ್ಲ  ಲಕ್ಷಣಗಳನ್ನು ಗಮನವಿಟ್ಟು ನೋಡಿದರೆ ಒಂದಂತೂ ಬಹಳ ಸ್ಪಷ್ಟವಿದೆ.  ಈ ಹತ್ತು ವರ್ಗಗಳ ಪೈಕಿ  I ಅಥವಾ ಇಂಟರ್ಸೆಕ್ಸ್ (Intersex)  ಎಂಬ ಒಂದು ವರ್ಗದವರು ಮಾತ್ರ ಶಾರೀರಿಕವಾಗಿ, ಲೈಂಗಿಕ ವೈಕಲ್ಯದೊಂದಿಗೆ ಜನಿಸಿರುತ್ತಾರೆ ಅಥವಾ ಕಾಲ ಕ್ರಮೇಣ ಅವರಲ್ಲಿ ಅಂತಹ ವೈಕಲ್ಯಗಳು ಬೆಳೆಯುತ್ತವೆ. ಅವರ ಶರೀರದಲ್ಲಿ  ಸ್ತ್ರೀಯರ ಲಕ್ಷಣಗಳೂ ಪುರುಷರ ಲಕ್ಷಣಗಳೂ ಮಿಶ್ರವಾಗಿರುತ್ತವೆ. ಉಳಿದಂತೆ, ಬೇರೆ ಯಾವ ವರ್ಗದವರಲ್ಲೂ ಹುಟ್ಟುವಾಗ ಯಾವುದೇ ಬಗೆಯ ಶಾರೀರಿಕ ವೈಕಲ್ಯವಿರುವುದಿಲ್ಲ. ಅವರು ಸಾಮಾನ್ಯರಿಗಿಂತ ಭಿನ್ನರಾಗಿರುವುದು ತಮ್ಮ ನಡವಳಿಕೆ, ಮಾನಸಿಕ ಒಲವುಗಳು, ಆಗ್ರಹಗಳು ಮತ್ತು ತೆವಲುಗಳಲ್ಲಿ ಮಾತ್ರ. 'ಗೇ' ಪರ ವಕಾಲತ್ತು ವಹಿಸುವವರು ಈ ಮಹತ್ವದ ಸತ್ಯವನ್ನು ಮರೆಮಾಚಿ ಪ್ರಸ್ತುತ ಎಲ್ಲದವರನ್ನೂ ಒಂದೇ ಬಗೆಯವರೆಂದು ಚಿತ್ರಿಸಲು ಶ್ರಮಿಸುತ್ತಾರೆ. ಈ ಕುರಿತು ಸತ್ಯವೇನೆಂಬುದನ್ನು ಅರಿಯಲು ಶ್ರಮಿಸದೇ ಅವರಿವರ ಮಾತು ಕೇಳಿ ತೀರ್ಮಾನ ಕೈಗೊಳ್ಳುವವರು ಇದರಿಂದ ಗೊಂದಲಕ್ಕೊಳಗಾಗುವುದು ಸಹಜ.

ಭಾರತದ ಹೆಚ್ಚಿನ ದೊಡ್ಡ ನಗರಗಳಲ್ಲಿ ಟೋಲ್ ಗೇಟ್ ಅಥವಾ ಟ್ರಾಫಿಕ್ ಸಿಗ್ನಲ್ ಗಳ ಸಮೀಪ ಕೆಲವು ಸ್ತ್ರೀ ವೇಷಧಾರಿಗಳು ಚಪ್ಪಾಳೆ ತಟ್ಟುತ್ತಾ ಹಣ ವಸೂಲಿ ಮಾಡುವುದು ಕಂಡು ಬರುತ್ತದೆ. ಇವರಲ್ಲಿ ಕೆಲವರ ವಸೂಲಿಯ ಶೈಲಿ ತುಂಬಾ ಅಕ್ರಮಣಕಾರಿಯಾಗಿರುತ್ತದೆ. ಇವರನ್ನು ಸಾಮಾನ್ಯವಾಗಿ ಹಿಜಡಾ ಗಳೆಂದು ಗುರುತಿಸಲಾಗುತ್ತದೆ. ಇವರ ಬಗ್ಗೆ ಕೂಡಾ ಇವರು ಹುಟ್ಟುವಾಗಲೇ ಮಿಶ್ರಲಿಂಗಿಗಳಾಗಿ ಅಥವಾ ಲೈಂಗಿಕ ವೈಕಲ್ಯದೊಂದಿಗೆ ಹುಟ್ಟಿರುತ್ತಾರೆ ಎಂಬ ನಂಬಿಕೆ ಸಾಮಾನ್ಯವಾಗಿದೆ.  ಕೆಲವರು ಇವರನ್ನು transgender ಅಥವಾ transexual ಪ್ರವರ್ಗಕ್ಕೆ ಸೇರಿದವರೆಂದು ಪರಿಗಣಿಸುತ್ತಾರೆ. ಆದರೆ ಅಖಿಲ ಭಾರತ ಹಿಜಡಾ ಕಲ್ಯಾಣ ಸಂಘ (AIHKS) ದವರ ಪ್ರಕಾರ ಹಿಜಡಾಗಳೆಂದು ಗುರುತಿಸಲ್ಪಡುವವರ ಪೈಕಿ ಲೈಂಗಿಕ ವೈಕಲ್ಯದೊಂದಿಗೆ ಹುಟ್ಟುವವರ ಸಂಖ್ಯೆ ೧% ಮಾತ್ರ. ಉಳಿದವರಲ್ಲಿ ಹೆಚ್ಚಿನವರು ಪೂರ್ಣಪ್ರಮಾಣದ ಪುರುಷರಾಗಿದ್ದು ಹಿಜಡಾಗಳಂತೆ ನಟಿಸುತ್ತಿರುತ್ತಾರೆ. ಅನೇಕರನ್ನು ಅವರ ಬಾಲ್ಯದಲ್ಲಿ ಅಥವಾ ಹದಿ ಹರೆಯದಲ್ಲಿ ಬಲವಂತವಾಗಿ ಲಿಂಗ ಛೇದನ ಅಥವಾ ಕಸಿಯ ಮೂಲಕ ಹಿಜಡಾಗಳಾಗಿ ಪರಿವರ್ತಿಸಲಾಗುತ್ತದೆ. ಅಂದರೆ ಅವರ ಪುರುಷ ಜನನಾಂಗವನ್ನು ಕಿತ್ತು ಹಾಕಲಾಗುತ್ತದೆ. ಇದರ ಪರಿಣಾಮವಾಗಿ ಮುಂದೆ ಕ್ರಮೇಣ ಅವರ ಶರೀರದಲ್ಲಿ ಬದಲಾವಣೆಗಳಾಗಲು ಆರಂಭವಾಗುತ್ತದೆ ಮತ್ತು ಅವರಲ್ಲಿ  ಕೆಲವು ಸ್ತ್ರೀ ಲಕ್ಷಣಗಳು ಬೆಳೆಯುತ್ತವೆ. ವಿಶೇಷವಾಗಿ ಗಂಡು ಮಕ್ಕಳನ್ನು ಅಪಹರಿಸಿ ಅವರನ್ನು ಹಿಜಡಾಗಳಾಗಿ ಪರಿವರ್ತಿಸುವ ಒಂದು ದೊಡ್ಡ ಜಾಲವೇ ಸಕ್ರಿಯವಾಗಿದೆ. ಹಿಜಡಾಗಳು ಸಂಘಟಿತರಾಗಿರುವಲ್ಲಿ ಅವರ ನಾಯಕರನ್ನು 'ಗುರು' ಎಂದು ಗುರುತಿಸಲಾಗುತ್ತದೆ. ಹಲವೆಡೆ ಕೆಲವು ಪಂಥಗಳ ಹಿಜಡಾಗಳು ಪ್ರತಿವರ್ಷ, ಈ ರೀತಿ ಅಪಹೃತ ಮಕ್ಕಳನ್ನು ಕಸಿ ಮಾಡಿ ವಿಧ್ಯುಕ್ತವಾಗಿ ಹಿಜಡಾ ಸಮಾಜಕ್ಕೆ ಸೇರಿಸುವ 'ನಿರ್ವಾಣ' ಎಂಬ ಅಧಿಕೃತ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸುತ್ತಾರೆ. ಕೆಲವರು ವಿವಿಧ ಮೂಢ ನಂಬಿಕೆ ಗಳಿಂದ ಪ್ರೇರಿತರಾಗಿ ತಮ್ಮ ಒಂದು ಗಂಡು ಮಗುವನ್ನು ಹಿಜಡಾ ಮಾಡುವುದಾಗಿ ಹರಕೆ ಹೊತ್ತು ತಾವಾಗಿಯೇ ಅಂತಹ ಮಕ್ಕಳನ್ನು ಹಿಜಡಾ 'ಗುರು'ಗಳಿಗೆ ಒಪ್ಪಿಸುವುದೂ ಇದೆ. ಆ ಗುರುಗಳು ತಮ್ಮ ಬಲಿಪಶುಗಳನ್ನು ಕ್ರಮೇಣ ಸಲಿಂಗಕಾಮಿಗಳಾಗಿಸಿ ಸಲಿಂಗ ಕಾಮದ ಬೃಹತ್ ಸಂಘಟಿತ ಜಾಲಗಳನ್ನು ನಡೆಸುತ್ತಾರೆ. ಜೊತೆಗೆ ಭಿಕ್ಷಾಟನೆ ಮತ್ತು ಬಲವಂತದ ಹಫ್ತಾ ವಸೂಲಿ ಜಾಲಗಳನ್ನೂ ನಡೆಸುತ್ತಾರೆ. 

ಹೀಗೆ, ಹೆಚ್ಚಿನ ಪ್ರಕರಣಗಳಲ್ಲಿ ದೂರಬೇಕಾದದ್ದು ಶಾರೀರಿಕವಾಗಿ ಸ್ವಸ್ಥರಾಗಿದ್ದರೂ ಮಾನಸಿಕವಾಗಿ ವಕ್ರ ದಾರಿಗಳನ್ನು ಅರಸುವ ಅಸ್ವಸ್ಥ ಮಾನಸಿಕತೆಯನ್ನೇ ಹೊರತು ದೇವರನ್ನಂತೂ ಅಲ್ಲ. ಹಾಗೆಯೇ, ಲೈಂಗಿಕ ಅಸ್ವಾಸ್ಥ್ಯದ ಹೆಚ್ಚಿನ ಪ್ರಕರಣಗಳು ಶುದ್ಧ ಮಾನಸಿಕ ಸ್ವರೂಪದ ಸಮಸ್ಯೆಯಾಗಿದ್ದು ಅವುಗಳನ್ನು ಆ ಸ್ತರದಲ್ಲೇ ಗುರುತಿಸಿ ಬಗೆಹರಿಬೇಕೆ ಹೊರತು ನಿಂದನೆಯಾಗಲಿ ವೈಭವೀಕರಣವಾಗಲಿ ಅದಕ್ಕೆ ಪರಿಹಾರವಲ್ಲ.

ಕಾಂಡೋಮ್ ಎಂಬ ರಂಧ್ರಾಶ್ರಯದ ಇತಿಮಿತಿಗಳು

ವಿಪರ್ಯಾಸ ನೋಡಿ. ಸಲಿಂಗ ಕಾಮದ ಮಾರಕ ಅಪಾಯಗಳ ಕುರಿತು ಪ್ರಸ್ತಾಪ ಬಂದೊಡನೆ ಹಲವರು ಕಾಂಡೋಮ್ ಆಶ್ರಿತರಾಗಿ ಬಿಡುತ್ತಾರೆ. ಕಾಂಡೋಮ್ ಧರಿಸಿಕೊಂಡರೆ ಸಾಕು, ಯಾವ  ವೇಶ್ಯಾ ಸಹವಾಸ ಮಾಡಿದರೂ ಎಂತಹ ವಿಕೃತ ಕಾಮ ಕೇಳಿ ನಡೆಸಿದರೂ  ಎಲ್ಲ ಬಗೆಯ ಸೋಂಕು ರೋಗಗಳಿಂದ ಸುರಕ್ಷಿತರಾಗಿ ಉಳಿಯಲು ಸಾಧ್ಯವಿದೆ ಎಂದು ವಾದಿಸತೊಡಗುತ್ತಾರೆ. ಹೀಗೆ ವಾದಿಸುವವರ ಸಾಲಲ್ಲಿ ಭಂಡ ಅರೆಶಿಕ್ಷಿತರು ಮಾತ್ರವಲ್ಲ ಅಜ್ಞಾನಿ ಶಿಕ್ಷಿತರೂ ಸೇರಿದ್ದಾರೆ. ನಿರ್ದಿಷ್ಟವಾಗಿ ಕಾಂಡೋಮ್ ಇತಿಮಿತಿಗಳ ಕುರಿತಾಗಿಯೇ ಸವಿಸ್ತಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿರುವ ವಿಜ್ಞಾನಿಗಳು ಮತ್ತು ಸಂಶೋಧಕ ಸಂಸ್ಥೆಗಳು ನೀಡಿರುವ ಎಚ್ಚರಿಕೆಗಳು ಬಹುಶ: ಇವರಿಗೆ ಮನವರಿಕೆ ಆದಂತಿಲ್ಲ. ತಜ್ಞರ ಪ್ರಕಾರ ಗರ್ಭನಿರೋಧದ ವಿಷಯದಲ್ಲಾಗಲಿ, ರೋಗನಿರೋಧದ ವಿಷಯದಲ್ಲಾಗಲಿ ಕಾಂಡೋಮ್ ಗಳು ತುಂಬಾ ಸಹಾಯಕ. ಆದರೆ ಅವು  ೧೦೦% ಸುರಕ್ಷಿತವಲ್ಲ. ಕಾಂಡೋಮ್ ಗಳನ್ನು ಹೇಗೆ ಧರಿಸಬೇಕು ಎಂಬ ಕುರಿತಂತೆ ತಜ್ಞರು ಶಿಫಾರಸು ಮಾಡುವ ಹಲವು ನಿಯಮಗಳಿವೆ. ಆ ಎಲ್ಲ ನಿಯಮಗಳನ್ನೂ ಯಥಾವತ್ತಾಗಿ ಪಾಲಿಸಿದರೂ ಅವುಗಳ  ಯಶಸ್ಸಿನ ಪ್ರಮಾಣ ೯೮%ಕ್ಕಿಂತ ಹೆಚ್ಚಿಲ್ಲ. ವೈಫಲ್ಯದ ಪ್ರಮಾಣ ಕೇವಲ ೨% ಎಂದು ಕಾಮಾತುರರು ಸಂತಸ ಪಡಬೇಕಾಗಿಲ್ಲ. ಏಕೆಂದರೆ ಇದು ತಮ್ಮ ಆಪ್ತ ತಂಡಕ್ಕೆ ಸೋಲಾಯಿತೆಂದು ಮಾತ್ರ ದುಃಖಿಸಬೇಕಾಗುವ ಕ್ರಿಕೆಟ್ ಫುಟ್ಬಾಲ್ ಗಳಂತಹ ಆಟವೇನಲ್ಲ. ಅಥವಾ ಕೇವಲ ಒಂದಷ್ಟು  ಹಣ ಕಳೆದು ಹೋಗುವ ಜೂಜು ಕೂಡಾ ಅಲ್ಲ. ಇಲ್ಲಿಯ ಸೋಲು ಏಡ್ಸ್ ನಂತಹ ಮಾರಕ ರೋಗದ ಗೆಲುವಾಗಿರುತ್ತದೆ. ಇಲ್ಲಿ ಮಾರಣಾಂತಿಕ ಅಪಾಯದ ಅಂಚಿನಲ್ಲಿರುವುದು ಅಮೂಲ್ಯ ಮಾನವ ಜೀವಗಳು.

ಪುರುಷರು ಸ್ತ್ರೀ ಸಂಪರ್ಕದ ವೇಳೆ ಕಾಂಡೋಮ್ ಧರಿಸಿದ್ದರೂ, ಧರಿಸಿದ ವಿಧಾನದ ದೋಷದಿಂದಾಗಿ ಅವರ ಲೈಂಗಿಕ ಸಂಗಾತಿ ಗರ್ಭ ಧರಿಸುವ ಸಾಧ್ಯತೆ ೧೫% ದಷ್ಟಿದೆ. ಲೈಂಗಿಕ ರೋಗಗಳ ವರ್ಗಾವಣೆಯ ಸಾಧ್ಯತೆ ಇದಕ್ಕಿಂತ ತುಂಬಾ ಅಧಿಕವಿದೆ. 

ಕಾಂಡೋಮ್ ಗಳನ್ನು ನಂಬಿ ಕುರುಡು ಸಾಹಸಕ್ಕಿಳಿಯುವವರು ತಿಳಿದಿರಬೇಕು:  ಈಗಾಗಲೇ ಸ್ವತಃ ತಮಗೆ ಏಡ್ಸ್ ಇತ್ಯಾದಿ ಘಾತಕ  ಸೋಂಕು ತಗಲಿಸಿ ಕೊಂಡಿರುವ ಮತ್ತು ತಮ್ಮ ಅಕ್ರಮ ಲೈಂಗಿಕ ಸಂಗಾತಿಗಳಿಗೂ, ಮುಗ್ಧ ಜೀವನ ಸಂಗಾತಿಗಳಿಗೂ, ತಮ್ಮ ನಿಕಟವರ್ತಿಗಳಿಗೂ, ತಮ್ಮ ರಕ್ತದಾನದ ಅಮಾಯಕ ಫಲಾನುಭವಿಗಳಿಗೂ ಸೋಂಕು ಪ್ರಸಾದ ನೀಡಿರುವ ಹಲವು ಕೋಟಿ ಸಾಹಸಿಗಳು ಸಂಪೂರ್ಣವಾಗಿ ಕಾಂಡೋಮ್ ವಿರೋಧಿಗಳಾಗಲಿ  ಕಾಂಡೋಮ್  ಪರಿತ್ಯಾಗಿಗಳಾಗಲಿ ಆಗಿರಲಿಲ್ಲ. ಅವರಲ್ಲಿ ಲಕ್ಷಾಂತರ ಮಂದಿ ಕಾಂಡೋಮ್ ಧಾರಿಗಳಾಗಿಯೇ  ವಿನಾಶಲೋಕಕ್ಕೆ ಹೆಜ್ಜೆ ಇಟ್ಟಿರುತ್ತಾರೆ. ಆದರೆ ಒಂದೋ ಕಾಂಡೋಮ್ ಕೈಕೊಟ್ಟಿರುತ್ತದೆ ಅಥವಾ ಕಾಂಡೋಮ್ ಧರಿಸುವ ವಿಧಾನದ ವೈಫಲ್ಯದಿಂದ ಅದನ್ನು ನಂಬಿದವನು ಗುಂಡಿಗೆ ಬಿದ್ದಿರುತ್ತಾನೆ. ಇನ್ನು ಕಾಂಡೋಮ್ ಅನ್ನು ಎಷ್ಟು ಶಾಸ್ತ್ರೋಕ್ತವಾಗಿ ಧರಿಸಿದರೂ ಅದು ಗುಪ್ತಾಂಗದ  ಒಂದು ಭಾಗವನ್ನು ಮಾತ್ರ ಆವವರಿಸಿರುತ್ತದೆಯೇ ಹೊರತು ಸಂಪೂರ್ಣ ಶರೀರದ ಪಾಲಿಗೆ ರಕ್ಷಾ ಕವಚವಾಗಿರುವುದಿಲ್ಲ. 

ನ್ಯಾಯಾಂಗದ ಅಸಹಜ ಆತುರ 

ನಮ್ಮ ನ್ಯಾಯಾಂಗ ತುಂಬಾ ಪುರುಸೊತ್ತಿರುವ ಸಂಸ್ಥೆಯೇನಲ್ಲ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೇ ಇತ್ತೀಚಿಗೆ ತಿಳಿಸಿದ ಪ್ರಕಾರ ನಮ್ಮ ಕೆಳ ಕೋರ್ಟುಗಳಲ್ಲಿ ಸುಮಾರು ೨. ೮೫ ಕೋಟಿ ಕೇಸುಗಳು ಹಲವಾರು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇವೆ. ಹೈಕೋರ್ಟುಗಳಲ್ಲಿ ಅಂತಹ ೪೩ ಲಕ್ಷ ಕೇಸುಗಳು ಬಾಕಿ ಇವೆ. ಸುಪ್ರೀಂ ಕೋರ್ಟಿನಲ್ಲೇ ಸುಮಾರು ೬೦ ಸಾವಿರ ಹಳೆಯ ಕೇಸುಗಳು ಬಾಕಿ ಇವೆ. ಹೀಗಿರುತ್ತಾ ಆ ನಮ್ಮ ಪರಮೋಚ್ಚ ನ್ಯಾಯ ಧಾಮವು ಇತರ ಬಾಕಿ ಕೇಸುಗಳನ್ನು ಶೀತಲ ಪೆಟ್ಟಿಗೆಯಲ್ಲಿಟ್ಟು 'ಗೇ' ಮಹನೀಯರ ನೆರವಿಗಾಗಿ ಸಂವಿಧಾನದ ೩೭೭ನೇ ಪರಿಚ್ಛೇಧದಲ್ಲಿದ್ದ ನಿಯಮವನ್ನು ರದ್ದುಗೊಳಿಸಿ ಸಲಿಂಗ ಕಾಮವನ್ನು ಸಕ್ರಮ ಗೊಳಿಸುವ ವಿಷಯದಲ್ಲಿ ತೋರಿರುವ ಅಸಹಜ ಆತುರ ಹಲವು ಪ್ರಶ್ನೆಗಳಿಗೆ ಜನ್ಮ ನೀಡುತ್ತದೆ.

ಸಾಮೂಹಿಕ ಹೊಣೆ 

ಮುಂದಿನ ದಿನಗಳಲ್ಲಿ, ನೈತಿಕ ಮೌಲ್ಯಗಳಲ್ಲಿ ಮತ್ತು ಪ್ರಕೃತಿಯ ನೈರ್ಮಲ್ಯದಲ್ಲಿ ನಂಬಿಕೆ ಉಳ್ಳ, ಸಮಾಜದ ವಿವಿಧ ವಲಯಗಳು ಜೊತೆಗೂಡಿ ಈ ಪ್ರಶ್ನೆಗಳನ್ನು ಚರ್ಚೆಗೆತ್ತಿಕೊಳ್ಳಬೇಕಾಗಿದೆ. ಸಾಮಾಜಿಕ, ಕೌಟುಂಬಿಕ  ಮತ್ತು ವೈಜ್ಞಾನಿಕ ವಾಸ್ತವ, ತರ್ಕ ಹಾಗೂ ಪುರಾವೆಗಳ ಆಧಾರದಲ್ಲಿ  ಸಲಿಂಗಕಾಮದ ಆತ್ಮ ಘಾತಕ, ಆಪ್ತಘಾತಕ ಮತ್ತು ಸಮೂಹ ಘಾತಕ ಆಯಾಮಗಳ  ಕುರಿತು, ವ್ಯಾಪಕ ಜನಜಾಗೃತಿ ಬೆಳೆಸಬೇಕಾಗಿದೆ. ಆಗ ನಮ್ಮ ಸಲಿಂಗ ಸಹಿಷ್ಣು ಹಾಗೂ ಸಲಿಂಗ ಪೋಷಕ ವ್ಯಕ್ತಿಗಳು ಹಾಗೂ ಗುಂಪುಗಳು ಮಾತ್ರವಲ್ಲ, ನ್ಯಾಯಾಧೀಶರುಗಳು ಕೂಡ ಪ್ರಕೃತಿಯ ಪ್ರಾಚೀನ ಫ್ಯಾಶನ್ ಕಡೆಗೆ ಮರಳಿ ಬರುವ ನಿರೀಕ್ಷೆ ಇದೆ.

✍ಅಬ್ದುಸ್ಸಲಾಮ್ ಪುತ್ತಿಗೆ 

Tu Kuja Man Kuja translated to Kannada by Abdussalam Puthige

ತೂ ಕುಜಾ ಮನ್ ಕುಜಾ

ಯಾ ನಬಿ, ಯಾ ನಬಿ, ಸಲ್ಲೂ ಅಲೈಹಿ ವ ಆಲಿಹೀ
ತೂ ಕುಜಾ ಮನ್ ಕುಜಾ, ತೂ ಕುಜಾ ಮನ್ ಕುಜಾ  
  
ಓ ದೂತರೇ, ಓ ದೂತರೇ, ಶುಭ ಕೋರುವೆ, ನಿಮಗೆ, ನಿಮ ವಂಶಕೆ, 
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !  

ನೀವು ಕಾಬಾದ ನೇತಾರರು, ನಾನಾದರೋ, ಮೂಗಲೋಕದ ಯಾಚಕನು  ಮಾತ್ರ 
ನೀವು ಕಾಬಾದ ನೇತಾರರು, ನಾನಾದರೋ, ಮೂಗರ ಲೋಕದ ಯಾಚಕನು ಮಾತ್ರ   
ಎಲ್ಲಿ ನಿಮ್ಮ ಗುಣಗಳು, ಎಲ್ಲಿ ನನ್ನ ತುಟಿಗಳು ! ನಾನು ಯಾಚಕ ಮಾತ್ರ, ಯಾಚಕ ಮಾತ್ರ.   
ಔದಾರ್ಯವೇ ಔದಾರ್ಯ ನೀವು, ನಾನಾದರೋ ದೋಷಿ ಮಾತ್ರ, ದೋಷಿ ಮಾತ್ರ  
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !  

ದಿವ್ಯ ಜ್ಞಾನವೇ ನಿಮ್ಮುಡುಗೆ
ಯು, ಕುರ್ ಆನು ನಿಮ್ಮ ಶಿರವಸ್ತ್ರವು  
ದೇವಪೀಠವೇ ವೇದಿಕೆ ನಿಮ್ಮದು, ಜಗಕೆಲ್ಲ ಕೃಪೆಯಾಗಿ ಬಂದವರು ನೀವು 
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !  

ಯಾ ನಬಿ, ಯಾ ನಬಿ, ಸಲ್ಲೂ ಅಲೈಹಿ ವ ಆಲಿಹೀ
ತೂ ಕುಜಾ ಮನ್ ಕುಜಾ, ತೂ ಕುಜಾ ಮನ್ ಕುಜಾ  
  
ಓ ದೂತರೇ, ಓ ದೂತರೇ, ಶುಭ ಕೋರುವೆ, ನಿಮಗೆ, ನಿಮ ವಂಶಕೆ, 
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !  

ನೀವು ಕಾಬಾದ ನೇತಾರರು, ನಾನಾದರೋ, ಮೂಗರ ಲೋಕದ ಯಾಚಕನು  ಮಾತ್ರ 
ನೀವು ಕಾಬಾದ ನೇತಾರರು, ನಾನಾದರೋ, ಮೂಗರ ಲೋಕದ ಯಾಚಕನು ಮಾತ್ರ   
ಎಲ್ಲಿ ನಿಮ್ಮ ಗುಣಗಳು, ಎಲ್ಲಿ ನನ್ನ ತುಟಿಗಳು ! ನಾನು ಯಾಚಕ ಮಾತ್ರ ಯಾಚಕ ಮಾತ್ರ.   
ಔದಾರ್ಯವೇ ಔದಾರ್ಯ ನೀವು, ನಾನಾದರೋ ದೋಷಿ ಮಾತ್ರ ದೋಷಿ ಮಾತ್ರ  
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !  

ದಿವ್ಯ ಜ್ಞಾನವೇ ನಿಮ್ಮುಡುಗೆಯು, ಕುರ್ ಆನು ನಿಮ್ಮ ಶಿರವಸ್ತ್ರವು  
ದೇವಪೀಠವೇ ವೇದಿಕೆ ನಿಮ್ಮದು, ಜಗಕೆಲ್ಲ ಕೃಪೆಯಾಗಿ ಬಂದವರು ನೀವು 
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !  

ನೀವು ಸಾಕ್ಷಾತ್ ಸತ್ಯವು, ನಾನು ಕೇವಲ ಅನಿಸಿಕೆ ಮಾತ್ರ
ನೀವು ಸಾಕ್ಷಾತ್ ಸಾಗರ, ನಾನು ಅಲೆಮಾರಿ ದಾಹ ಮಾತ್ರ. 
ನಾನು ಮಣ್ಣಿನ ನಿವಾಸಿ, ಪರಮ ಸ್ಥಾನದ ಯಾತ್ರಿ  ನೀವು
ನೀವೆಲ್ಲಿಯೋ, ನಾನೆಲ್ಲಿಯೋ !ನೀವೆಲ್ಲಿಯೋ, ನಾನೆಲ್ಲಿಯೋ !   
ನೀವೆಲ್ಲಿಯೋ, ನಾನೆಲ್ಲಿಯೋ !ನೀವೆಲ್ಲಿಯೋ, ನಾನೆಲ್ಲಿಯೋ !    

ದಿವ್ಯಜೀವಿಗಳೇ, ಕೇಳಿಲ್ಲಿ ಕೇಳಿರಿ, 
ಅವರು ಪರಲೋಕ ಪಯಣಿನಿಸಿದ ಸುಲ್ತಾನರು 
ಅವರ ಕಂಡರೆ ನಿಮಗೆ ಆಗುವುದು ಬೆರಗು, 
ಅವರ ಹಿಂಗುರುಳು, ದಿವ್ಯ ಬೆಳದಿಂಗಳು 
ಅವರ ವದನದಲಿ ಕಾಣುವಿರಿ ಸಂಪೂರ್ಣ ಕುರ್ ಆನನು,  

ಸರ್ವ ಪ್ರವಾದಿಗಳನ್ನು ಮುನ್ನಡೆಸಿದವರು ನನ್ನ ನೇತಾರರು   
ಅವರ ಹೆಸರು ಕೇಳಿದರೆ ಸಾಕು ನಾವು ಸಾರಿ ಸಾರಿ ಹೇಳುವೆವು 
ಶುಭವಾಗಲವರಿಗೆ ಶುಭವಾಗಲಿ,  ಶುಭವಾಗಲವರಿಗೆ ಶುಭವಾಗಲಿ 

ನೀವೆಲ್ಲಿಯೋ, ನಾನೆಲ್ಲಿಯೋ ! 
ನೀವೆಲ್ಲಿಯೋ, ನಾನೆಲ್ಲಿಯೋ !   
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !    
ದೂತರಲಿ ನೀವೇ  ಕೊನೆಯವರು, ಜಗಕೆಲ್ಲ ಕೃಪೆಯಾಗಿ ಬಂದವರು 

ನೀವೆಲ್ಲಿಯೋ, ನಾನೆಲ್ಲಿಯೋ ! 
ನೀವೆಲ್ಲಿಯೋ, ನಾನೆಲ್ಲಿಯೋ !      
ನರರಲ್ಲಿ ನೀವೇ ಸರ್ವೋತ್ತಮರು, ಪರಮ ಸತ್ಯವು, ನಿಮ್ಮ ಮಾತೆಲ್ಲವೂ 
ನಿಮ್ಮ ಕೇಳುಗರು ಈ ಜಗದ ಸಕಲ ಜೀವಿಗಳು, ನೀವು ಜಗಕೆಲ್ಲ ಕೃಪೆಯಾಗಿ ಬಂದವರು 
 
ದಿವ್ಯ ಬೆಳಕೇ ನಿಮ್ಮ ನಿಲುವಂಗಿಯು
ನಿಮ್ಮ ಕಿರಣಗಳ ಯಾಚಕನು ನಾನು 
ಪರಮ ಪ್ರೇಮದ ಮೂಲವು ನೀವು, ಅದನ್ನು ಅರಸುವ ದಾಸನು  ನಾನು, 
ನಾನು ಯಾಚನೆ, ನೀವು  ಸಿದ್ಧಿ 

ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !      



“Tu kuja man kuja” is written by a Persian poet Jalal ud din Rumi and later on sung by Nusrat Fateh Ali Khan.

It is clear from the name Jalal ud din (meaning the Glory of faith) that the poet was a Sufi mystic. Commonly known as Rumi the writer was born on 30th September 1207 in Balkh. He wrote many prose and poetry. One of his poems Maṭnawīye Ma’nawī is six volume poem called as Persian language Quran by some poets. He died on 17th December 1273 in Konya.

Tu Kuja Man Kuja
Tu Ameer-e-Haram
Main Fakeer-e-Ajam
Tere Gunn Aur Yeh Labb
Main Talab Hee Talab
Tu Ataa, Hi Ataa
Tu Kuja Man Kuja

You are the leader of Haram (Ka’aba)
I am a mute destitute
Your remembrance and these lips
Cannot be parted
You are the provider
Where are you? Where am I?

Ilhaam Hai Jaama Tera
Quran Imama Hai Tera
Minbar Tera Arsh-e-Bareen
Ya Rehmatulil Alameen [SAW]

Divine revelation is your garment
Quran is your glorifying turban
The heavenly throne is your pulpit
O mercy for the entire creation [peace be upon him]

Tu Haqeeqat Main Sirf Ehsaas Hoon
Tu Samanadar Main Bhatki Hui Piyaas Hoon
Mera Ghar Khak Per Aur Teri Rahguzar
Sidra Tul Muntaha

You are the reality, I am just a notion
You are the ocean, I am a bewildered thirst
My home is on soil and your pathway
Is beyond the Lotte tree that marks the seventh heaven

Khushboo Teri Joo-e-Karam
Ankhein Teri Baab-e-Haram (x2)
Noor-e-Azal Teri Jabeen
Ya Rehmat Lil Alameen [SAW]

Your scent is a stream of benevolence
Your eyes are like the door of Ka’aba
Your forehead is illuminated forever
O mercy for all the entire creation [peace be upon him]

Mera Har Saans Khoon Nachoray Mera
Teri Rehmat Magar Dil Na Toray Mera
Kaasa e Zaat Hoon, Teri Khairaat Hoon
Too Sakhee, Main Gadaa
Tu Kuja Man Kuja

My every breath is wringing my blood from me
But your mercy will not break
I am a goblet of individuality and your charity
You are rich, I am poor
Where are you? Where am I?

Khair-u-Albashar Rutba Tera
Awaz-e-Haq Khutba Tera
Afaaq Teray Samaeen
Saaes Gibreel-e-Ameen
Ya Rehmat Lil Alameen [SAW]
Tu Kuja Man Kuja
Tu Kuja, Man Kuja, Zikarat Kuja, Allah Allah
Kismet-e-Shah-o-Gada
Tu Kuja Man Kuja

You are ranked as the best of the humankind
Your sermon is a voice for truth
The skies are your audience
Gabriel, the loyal, is your horse keeper
O mercy for the entire creation [peace be upon him]
Where am I? Where are you?
Where am I? Where are you? Where’s the Zikr (remembrance
Fate of a rich and poor
Where are you? Where am I?

Nisbat Teri Emaan Hai
Khusboo Teri Irfaan Hai
Tafseer Teray Khulq Ki
Quran Hi Quran Hai (x2)

Too Hasil Dunya o Deen
Ya Rehmat lil Alameen
Tu Kuja Man Kuja
Tu Kuja Man Kuja

Affection towards you is faith
Your scent is wisdom
Exposition of your nature/morals
Is the Holy Quran
I acquire the religion as well as the world from you
O mercy for the entire creation [peace be upon him]
Where are you? Where am I?
Where are you? Where am I?

Tu Hai Ahram-e-Anwaar Bandhe Huay
Main Daroodon Ki Daastar Bandhay Huay
Kaaba-e-Ishq Tu, Main Tere Chaar Soo
Tu Asar, Main Dua
Tu Kuja Man Kuja

You are covered in a white radiant garment
I have tied up a turban of salutations
You are the love for Ka’aba, I am all around you
I am the prayer, you are the aftermath
Where are you? Where am I?

Dawah Hai Teri Chah Ka
Iss Ummat-e-Gumrah Ka
Tere Siwa Koi Nhi
Ya Rehmat Lil Alameen [SAW]

The love for you has been acknowledged
By the community of the strayed people
There is no one for them except you
O mercy for the whole human race [peace be upon him]

Dagmagaoon Jo Halat K Samnay
Aye Tera Tasawur Mujhay Thamnay
Meri Khush Qismati Mai Tera Ummati
Meri Khush Qismati Mai Tera Ummati
Tu Jaza Mai Raza
Tu Kuja Man Kuja

If I am doubtful in any situation
Only remembering you helps me
It’s a blessing for me to be one of your community member (Ummah)
You are a reward, I am an allowance
Where are you? Where am I?

Duria Samnay Se Jo Hatnay Lagee
Duria Samnay Se Jo Hatnay Lagee
Jalio Se Nigahe Lipatnay Lagee
Jalio Se Nigahe Lipatnay Lagee

As the distance from the front began to decrease
As the distance from the front began to decrease
The gazes started to wrap around the net
The gazes started to wrap around the net

Anso’on Ki Zuban Ho Meri Tarjuma
Anso’on Ki Zuban Ho Meri Tarjuma
Dil Se Niklay Sada
Tu Kuja Man Kuja

The words of tears shall be my interpreter
The words of tears shall be my interpreter
My heart is calling out for you
Where are you? Where am I?

Tu Hai Masoomiyat, Mein Niri Masiyat
Tu Karam Mein Khata
Tu Kuja Man Kuja

You are innocent, but I am all sinful
You are a benevolent but I am a sinner
Where are you? Where am I?

Vartha Bharathi Office

Assalamu alykum,

All these years, we were able to print 12 pages at a time with 
only 
2 pages in multi colour. Now, in the new Printing Press, with the new set of machines and upgraded facilities we can print 16 pages at a time with 8 pages in multi colour. Soon we are going to add  one more unit which  will further increase our capacity, enabling us to print 20 pages at a time with 12 pages in color
,
 in sha Allah.








Abdussalam Puthige
Editor in Chief, Vartha Bharathi,
on behalf of all the members of the VB Team.