Wednesday, November 23, 2022

 ತೂ ಕುಜಾ ಮನ್ ಕುಜಾ | Tu Kuja Man Kuja

ಅನುವಾದ: ಅಬ್ದುಸ್ಸಲಾಂ ಪುತ್ತಿಗೆ 

ಯಾ ನಬಿ, ಯಾ ನಬಿ, ಸಲ್ಲೂ ಅಲೈಹಿ ವ ಆಲಿಹೀ
ತೂ ಕುಜಾ ಮನ್ ಕುಜಾ, ತೂ ಕುಜಾ ಮನ್ ಕುಜಾ

ಓ ದೂತರೇ, ಓ ದೂತರೇ, ಶುಭ ಕೋರುವೆ, ನಿಮಗೆ, ನಿಮ ವಂಶಕೆ,
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

ನೀವು ಕಾಬಾದ ನೇತಾರರು, ನಾನಾದರೋ, ಮೂಗಲೋಕದ ಯಾಚಕನು ಮಾತ್ರ
ನೀವು ಕಾಬಾದ ನೇತಾರರು, ನಾನಾದರೋ, ಮೂಗರ ಲೋಕದ ಯಾಚಕನು ಮಾತ್ರ
ಎಲ್ಲಿ ನಿಮ್ಮ ಗುಣಗಳು, ಎಲ್ಲಿ ನನ್ನ ತುಟಿಗಳು ! ನಾನು ಯಾಚಕ ಮಾತ್ರ, ಯಾಚಕ ಮಾತ್ರ.
ಔದಾರ್ಯವೇ ಔದಾರ್ಯ ನೀವು, ನಾನಾದರೋ ದೋಷಿ ಮಾತ್ರ, ದೋಷಿ ಮಾತ್ರ
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

ದಿವ್ಯ ಜ್ಞಾನವೇ ನಿಮ್ಮುಡುಗೆಯು, ಕುರ್ ಆನು ನಿಮ್ಮ ಶಿರವಸ್ತ್ರವು
ದೇವಪೀಠವೇ ವೇದಿಕೆ ನಿಮ್ಮದು, ಜಗಕೆಲ್ಲ ಕೃಪೆಯಾಗಿ ಬಂದವರು ನೀವು
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

ಯಾ ನಬಿ, ಯಾ ನಬಿ, ಸಲ್ಲೂ ಅಲೈಹಿ ವ ಆಲಿಹೀ
ತೂ ಕುಜಾ ಮನ್ ಕುಜಾ, ತೂ ಕುಜಾ ಮನ್ ಕುಜಾ

ಓ ದೂತರೇ, ಓ ದೂತರೇ, ಶುಭ ಕೋರುವೆ, ನಿಮಗೆ, ನಿಮ ವಂಶಕೆ,
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

ನೀವು ಕಾಬಾದ ನೇತಾರರು, ನಾನಾದರೋ, ಮೂಗರ ಲೋಕದ ಯಾಚಕನು ಮಾತ್ರ
ನೀವು ಕಾಬಾದ ನೇತಾರರು, ನಾನಾದರೋ, ಮೂಗರ ಲೋಕದ ಯಾಚಕನು ಮಾತ್ರ
ಎಲ್ಲಿ ನಿಮ್ಮ ಗುಣಗಳು, ಎಲ್ಲಿ ನನ್ನ ತುಟಿಗಳು ! ನಾನು ಯಾಚಕ ಮಾತ್ರ ಯಾಚಕ ಮಾತ್ರ.
ಔದಾರ್ಯವೇ ಔದಾರ್ಯ ನೀವು, ನಾನಾದರೋ ದೋಷಿ ಮಾತ್ರ ದೋಷಿ ಮಾತ್ರ
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

ದಿವ್ಯ ಜ್ಞಾನವೇ ನಿಮ್ಮುಡುಗೆಯು, ಕುರ್ ಆನು ನಿಮ್ಮ ಶಿರವಸ್ತ್ರವು
ದೇವಪೀಠವೇ ವೇದಿಕೆ ನಿಮ್ಮದು, ಜಗಕೆಲ್ಲ ಕೃಪೆಯಾಗಿ ಬಂದವರು ನೀವು
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

ನೀವು ಸಾಕ್ಷಾತ್ ಸತ್ಯವು, ನಾನು ಕೇವಲ ಅನಿಸಿಕೆ ಮಾತ್ರ
ನೀವು ಸಾಕ್ಷಾತ್ ಸಾಗರ, ನಾನು ಅಲೆಮಾರಿ ದಾಹ ಮಾತ್ರ.
ನಾನು ಮಣ್ಣಿನ ನಿವಾಸಿ, ಪರಮ ಸ್ಥಾನದ ಯಾತ್ರಿ ನೀವು
ನೀವೆಲ್ಲಿಯೋ, ನಾನೆಲ್ಲಿಯೋ !ನೀವೆಲ್ಲಿಯೋ, ನಾನೆಲ್ಲಿಯೋ !

ದಿವ್ಯಜೀವಿಗಳೇ, ಕೇಳಿಲ್ಲಿ ಕೇಳಿರಿ,
ಅವರು ಪರಲೋಕ ಪಯಣಿನಿಸಿದ ಸುಲ್ತಾನರು
ಅವರ ಕಂಡರೆ ನಿಮಗೆ ಆಗುವುದು ಬೆರಗು,
ಅವರ ಹಿಂಗುರುಳು, ದಿವ್ಯ ಬೆಳದಿಂಗಳು
ಅವರ ವದನದಲಿ ಕಾಣುವಿರಿ ಸಂಪೂರ್ಣ ಕುರ್ ಆನನು,

ಸರ್ವ ಪ್ರವಾದಿಗಳನ್ನು ಮುನ್ನಡೆಸಿದವರು ನನ್ನ ನೇತಾರರು
ಅವರ ಹೆಸರು ಕೇಳಿದರೆ ಸಾಕು ನಾವು ಸಾರಿ ಸಾರಿ ಹೇಳುವೆವು
ಶುಭವಾಗಲವರಿಗೆ ಶುಭವಾಗಲಿ, ಶುಭವಾಗಲವರಿಗೆ ಶುಭವಾಗಲಿ

ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !
ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !
ದೂತರಲಿ ನೀವೇ ಕೊನೆಯವರು, ಜಗಕೆಲ್ಲ ಕೃಪೆಯಾಗಿ ಬಂದವರು

ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !
ನರರಲ್ಲಿ ನೀವೇ ಸರ್ವೋತ್ತಮರು, ಪರಮ ಸತ್ಯವು, ನಿಮ್ಮ ಮಾತೆಲ್ಲವೂ
ನಿಮ್ಮ ಕೇಳುಗರು ಈ ಜಗದ ಸಕಲ ಜೀವಿಗಳು, ನೀವು ಜಗಕೆಲ್ಲ ಕೃಪೆಯಾಗಿ ಬಂದವರು

ದಿವ್ಯ ಬೆಳಕೇ ನಿಮ್ಮ ನಿಲುವಂಗಿಯು, ನಿಮ್ಮ ಕಿರಣಗಳ ಯಾಚಕನು ನಾನು
ಪರಮ ಪ್ರೇಮದ ಮೂಲವು ನೀವು, ಅದನ್ನು ಅರಸುವ ದಾಸನು ನಾನು,
ನಾನು ಯಾಚನೆ, ನೀವು ಸಿದ್ಧಿ

ನೀವೆಲ್ಲಿಯೋ, ನಾನೆಲ್ಲಿಯೋ ! ನೀವೆಲ್ಲಿಯೋ, ನಾನೆಲ್ಲಿಯೋ !

No comments:

Post a Comment